ಧಾರವಾಡ: ಮಹಾನಗರ ಪಾಲಿಕೆ ವಲಯ 2ರ ವ್ಯಾಪ್ತಿಯಲ್ಲಿಯ ರಾಯಲ್ ಕಮ್ಯುನಿಟಿ ಹಾಲ್‍ನಲ್ಲಿ ಇಂದು ಕೋವಿಡ್ ನಿಯಮ ಉಲ್ಲಂಘಿಸಿ ಅಧಿಕ ಜನರನ್ನು ಸೇರಿಸಿ ಮದುವೆ ಸಮಾರಂಭ ನಡೆಸುತ್ತಿದ್ದ ವೇಳೆ ಪೊಲೀಸ್, ಕಂದಾಯ ಇಲಾಖೆ ಹಾಗೂ ಮಹಾನಗರಪಾಲಿಕೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಮದುವೆ ಮನೆಯವರ ಹಾಗೂ ಸಭಾಂಗಣದ ಸಿಬ್ಬಂದಿ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ.
ಭೀಮಪ್ಪ ಜಿ.ಬಾಂಬೆ ಅವರು ಏಪ್ರಿಲ್ 20 ರಂದು ಅರ್ಜಿ ಸಲ್ಲಿಸಿ, ನಿಯಮಗಳ ಪ್ರಕಾರ 100 ಜನರನ್ನು ಆಹ್ವಾನಿಸಲು ಅನುಮತಿ ಪಡೆದಿದ್ದರು. ಏಪ್ರಿಲ್ 21 ರಿಂದ ಜಾರಿಗೊಂಡ ಹೊಸ ಮಾರ್ಗಸೂಚಿಗಳ ಪ್ರಕಾರ ಈ ಮಿತಿಯು 50ಕ್ಕೆ ಸೀಮಿತವಾಗಿತ್ತು.
Advertisement
Advertisement
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದಾಗ 200ಕ್ಕೂ ಅಧಿಕ ಜನರು ಸೇರಿದ್ದರು. ಹೀಗಾಗಿ ಪಾಲಿಕೆ ಅಧಿಕಾರಿಗಳು ನೀಡಿದ ದೂರು ಆಧರಿಸಿ ಶಹರ ಪೊಲೀಸ್ ಠಾಣೆ ಅಧಿಕಾರಿಗಳು ಮದುವೆ ಮನೆಯವರು ಹಾಗೂ ಕಲ್ಯಾಣಮಂಟಪದ ಸಂಘಟಕರ ವಿರುದ್ಧ ಸಾಂಕ್ರಾಮಿಕ ರೋಗಗಳ ತಡೆ ಕಾಯ್ದೆ 2020 ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.