ಟೋಕಿಯೊ: ದೀರ್ಘಕಾಲದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಜಪಾನ್ ಪ್ರಧಾನಿ ಶಿಂಬೊ ಅಬೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಜಪಾನಿನಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ ಪ್ರಧಾನಿ ಎಂಬ ಹೆಗ್ಗಳಿಕೆಯನ್ನು ಶಿಂಬೊ ಅಬೆ ಪಡೆದಿದ್ದಾರೆ.
ರಾಜೀನಾಮೆ ನಿರ್ಧಾರದ ಕುರಿತು ಮಾತನಾಡಿರುವ 65 ವರ್ಷದ ಅಬೆ, ಜನರಿಗೆ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗದಿದ್ದರೆ ನಾನು ಪ್ರಧಾನಿಯಾಗಲು ಸಾಧ್ಯವಿಲ್ಲ. ಆದ್ದರಿಂದ ನಾನು ಹುದ್ದೆಯಿಂದ ಕೆಳಗಿಳಿಯಲು ನಿರ್ಧಸಿದ್ದೇನೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
Advertisement
Advertisement
ಶಿಂಜೊ ಅಬೆ ಹಲವು ವರ್ಷಗಳಿಂದ ಅಲ್ಸರೇಟಿವ್ ಕೊಲೈಟಿಸ್ (ದೊಡ್ಡ ಕರಳಿನ ಭಾಗದಲ್ಲಿ ಅಲ್ಸರ್)ಸಮಸ್ಯೆಯಿಂದ ಬಳಲುತ್ತಿದ್ದರು. ಇತ್ತೀಚೆಗಷ್ಟೇ ಒಂದು ವಾರದಲ್ಲಿ ಎರಡು ಬಾರಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದಿದ್ದರು. ದೀರ್ಘಕಾಲದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಕಾರಣ ಸರ್ಕಾರಕ್ಕೆ ಸಮಸ್ಯೆ ಆಗುವುದನ್ನು ತಪ್ಪಿಸಲು ಶಿಂಜೊ ಅಬೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ. ಅಬೆ ಅವರ ಆಡಳಿತಾವಧಿ 2021 ಸೆಪ್ಟೆಂಬರ್ ಗೆ ಕೊನೆಯಾಗಲಿತ್ತು.
Advertisement
ಸದ್ಯ ಶಿಂಜೊ ಅಬೆ ರಾಜೀನಾಮೆಯಿಂದ ಆಡಳಿತ ಪಕ್ಷ ಲಿಬರಲ್ ಡೆಮಾಕ್ರಟಿಕ್ ಪಾರ್ಟಿ (ಎಲ್‍ಡಿಪಿ)ಯಲ್ಲಿ ನಾಯಕತ್ವದ ಸ್ಪರ್ಧೆ ಹೆಚ್ಚಾಗಿದೆ. ಮುಂದಿನ ಎರಡು ಅಥವಾ ಮೂರು ವಾರಗಳಲ್ಲಿ ನಿಯಮಗಳ ಅನ್ವಯ ಸಂಸತ್ತಿನಲ್ಲಿ ಹೊಸ ನಾಯಕರನ್ನು ಆಯ್ಕೆ ಮಾಡಲಾಗುತ್ತದೆ. ಸದ್ಯ ಆಯ್ಕೆಯಾಗುವ ಹೊಸ ನಾಯಕ ಅಬೆ ಅವರ ಉಳಿದ ಅವಧಿವರೆಗೂ ಪ್ರಧಾನಿ ಹುದ್ದೆಯನ್ನು ಅಲಂಕರಿಸಲಿದ್ದಾರೆ.
Advertisement
[Watch Live] Prime Minister Abe is speaking at the press conference. https://t.co/QCk5HHc2bY
— PM’s Office of Japan (@JPN_PMO) August 28, 2020
ಅಬೆ ರಾಜೀನಾಮೆ ನೀಡುತ್ತಿದ್ದಂತೆ ಜಪಾನ್ ಷೇರು ಮಾರುಕಟ್ಟೆ ಭಾರೀ ಕುಸಿತಕಂಡಿದೆ. ಷೇರು ಸೂಚಂಕ್ಯ ನಿಕ್ಕಿ ಇಂದು ಆರಂಭಗೊಂಡಾಗ 23,208ರಲ್ಲಿ ಇತ್ತು. ಆದರೆ ರಾಜೀನಾಮೆ ನೀಡುತ್ತಿದ್ದಾರೆ ಎಂಬ ಸುದ್ದಿ ಪ್ರಕಟವಾದ ಬಳಿಕ 22,735ಕ್ಕೆ ಕುಸಿದು ನಂತರ ಸ್ವಲ್ಪ ಚೇತರಿಕೆ ಕಂಡಿತ್ತು.
ಅಂದಹಾಗೇ ಶಿಂಜೊ ಅಬೆ ಅವರ ದೊಡ್ಡಪ್ಪ ಐಸಾಕು ಸಾಟೊ ಅವರು 1964 ರಿಂದ 1972ರ ವರೆಗೂ 2798 ದಿನ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ್ದರು. ಈ ದಾಖಲೆಯನ್ನು ಶಿಂಜೊ ಮುರಿದ್ದರು. 2012 ರಿಂದ ಈವರೆಗೂ ಶಿಂಜೊ ಅಧಿಕಾರದಲ್ಲಿದ್ದು, ಸೋಮವಾರಕ್ಕೆ 2,799 ದಿನಗಳನ್ನು ಪೂರೈಸಿದ್ದರು. ಉಳಿದಂತೆ ಮುಂದಿನ ತಿಂಗಳು ಶಿಂಜೊ ಅಬೆ ತಮ್ಮ 66ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ.
ಕೊರೊನಾ ನಿರ್ವಹಣೆ ಹಾಗೂ ಪಕ್ಷದ ನಾಯಕರು ನಡೆಸಿದ ಹಗರಣಗಳನ್ನು ಉತ್ತಮವಾಗಿ ನಿಭಾಯಿಸದ ಹಿನ್ನೆಲೆಯಲ್ಲಿ ಅವರ ಬೆಂಬಲದ ಸಂಖ್ಯೆ ಸುಮಾರು 8 ವರ್ಷಗಳ ಅವಧಿಯಲ್ಲಿ ಅತ್ಯಂತ ಕಡಿಮೆ ಮಟ್ಟಕ್ಕೆ ಇಳಿದಿತ್ತು. ಅಬೆ ತಮ್ಮ ಆಡಳಿತ ಅವಧಿಯಲ್ಲಿ ಸಶಸ್ತ್ರ ಪಡೆಗಳ ಖರ್ಚು ಹಾಗೂ ಅವುಗಳ ಪಾತ್ರವನ್ನು ವಿಸ್ತರಿಸಿದ್ದರು. ಅಲ್ಲದೇ ಅವರ ಶಾಂತಿ ಮಂತ್ರದ ಕನಸು ಸಾರ್ವಜನಿಕ ಅಭಿಪ್ರಾಯದಿಂದಾಗಿ ದೂರವಾಗಿತ್ತು ಎನ್ನಲಾಗಿದೆ. 2007 ರಲ್ಲಿ ಸರ್ಕಾರದಲ್ಲಾದ ಹಗರಣ ಹಾಗೂ ಭಾರೀ ಚುನಾವಣಾ ನಷ್ಟವನ್ನುಂಟು ಮಾಡಿದ ಕಾರಣ ಅವರು ಏಕಾಏಕಿ ರಾಜೀನಾಮೆ ನೀಡಿದ್ದರು.