Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಅದ್ವಿತಿ-ಅಶ್ವಿತಿ: ಅವಳಿ ಸೋದರಿಯರ ಬಗ್ಗೆ ಇಲ್ಲಿದೆ ಅಚ್ಚರಿಯ ಸಂಗತಿ!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಅದ್ವಿತಿ-ಅಶ್ವಿತಿ: ಅವಳಿ ಸೋದರಿಯರ ಬಗ್ಗೆ ಇಲ್ಲಿದೆ ಅಚ್ಚರಿಯ ಸಂಗತಿ!

Bengaluru City

ಅದ್ವಿತಿ-ಅಶ್ವಿತಿ: ಅವಳಿ ಸೋದರಿಯರ ಬಗ್ಗೆ ಇಲ್ಲಿದೆ ಅಚ್ಚರಿಯ ಸಂಗತಿ!

Public TV
Last updated: May 17, 2020 5:08 pm
Public TV
Share
6 Min Read
ADVITHI SHETTY 2
SHARE

ಕೆಲವೊಮ್ಮೆ ತೀವ್ರವಾಗಿ ಹಂಬಲಿಸಿ ಸಾಕಷ್ಟು ತಯಾರಿ ನಡೆಸಿದರೂ ಸಿನಿಮಾ ಅವಕಾಶವೆಂಬುದು ಅದೆಷ್ಟೋ ನಟ ನಟಿಯರ ಪಾಲಿಗೆ ಸತಾಯಿಸಿ ಬಿಡುತ್ತೆ. ಇದೀಗ ಯಶಸ್ವಿಯಾಗಿರೋ ಅದೆಷ್ಟೋ ಕಲಾವಿದರ ಹಿನ್ನೆಲೆಯಲ್ಲಿ ಅಂಥಾದ್ದೇ ಸೈಕಲ್ಲು ಹೊಡೆದ ಕಥಾನಕಗಳಿದ್ದಾವೆ. ಆದರೆ ಇನ್ನೂ ಕೆಲ ಅದೃಷ್ಟವಂತರ ಪಾಲಿಗೆ ಅದೃಷ್ಟವೆಂಬುದು ಇದ್ದಲ್ಲಿಗೇ ಸಾಗಿ ಬಂದು ಬರಸೆಳೆದುಕೊಳ್ಳುತ್ತದೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಮಿಸ್ಟರ್ ಆಂಡ್ ಮಿಸಸ್ ರಾಮಾಚಾರಿ ಚಿತ್ರದ ಮೂಲಕ ನಟಿಯರಾಗೋ ಅವಕಾಶ ಗಿಟ್ಟಿಸಿಕೊಂಡು ಈಗ ಬೇಡಿಕೆಯ ನಾಯಕಿಯರಾಗಿರುವ ಅದ್ವಿತಿ ಶೆಟ್ಟಿ ಮತ್ತು ಅದ್ವಿತಿ ಶೆಟ್ಟಿ ಎಂಬ ಅವಳಿ ಸಹೋದರಿಯರು ಆ ಸಾಲಿಗೆ ಸೇರಿಕೊಳ್ಳುತ್ತಾರೆ. ಇದೀಗ ಎಲ್ಲರ ಕುತೂಹಲಕ್ಕೆ ಕಾರಣರಾಗಿರುವ ಈ ಅವಳಿ ಸೋದರಿಯರ ಬಗೆಗಿನ ಕೆಲ ಅಚ್ಚರಿಯ ಸಂಗತಿಗಳು ಇಲ್ಲಿವೆ.

ADVITHI SHETTY 5

ಸಿನಿಮಾ ನಟಿಯರಾಗೋದೆಂದರೆ ಅದೇನು ಸಲೀಸಿನ ಸಂಗತಿಯಲ್ಲ. ಅದೇನೇ ಟ್ಯಾಲೆಂಟಿದ್ದರೂ ಕೂಡಾ ಮೊದಲ ಅವಕಾಶ ಗಿಟ್ಟಿಸಿಕೊಳ್ಳಲು ಅದೆಷ್ಟೋ ಗಾವುದ ದೂರ ಸಾಗಿ ಬರಬೇಕಾಗುತ್ತೆ. ಅಲ್ಲೆದುರಾಗೋ ನೋವು, ನಿರಾಸೆಗಳನ್ನು ನುಂಗಿಕೊಂಡು ಮುಂದುವರೆದರಷ್ಟೇ ಬದುಕು ಗುರಿಯ ನೇರಕ್ಕೆ ಬಂದು ನಿಲ್ಲುತ್ತದೆ. ಆದರೆ ಯಾವುದೋ ದಾರಿ ಮತ್ಯಾವುದೋ ನಿರೀಕ್ಷಿಸದ ನಿಲ್ದಾಣಕ್ಕೆ ತಂದು ಬಿಡುವಂಥ ಮಿರ್ಯಾಕಲ್‍ಗಳೂ ವಿರಳವೆಂಬಂತೆ ಘಟಿಸುತ್ತಿರುತ್ತವೆ. ಬಹುಶಃ ಅಂಥಾದ್ದೊಂದು ಪವಾಡದಂಥಾ ಅವಕಾಶ ಅರಸಿ ಬರದೇ ಇದ್ದಿದ್ದರೆ ಈವತ್ತಿಗೆ ಮಂಗಳೂರು ಮೂಲದ ಅದ್ವಿತಿ ಶೆಟ್ಟಿ ಮತ್ತು ಅಶ್ವಿತಿ ಶೆಟ್ಟಿಯೆಂಬ ಅವಳಿಗಳು ಎಂಎನ್‍ಸಿ ಕಂಪೆನಿಯಲ್ಲಿ ಕಾರ್ಯ ನಿರ್ವಹಿಸುತ್ತಾ ಅನಾಮಿಕರಾಗಿಯೇ ಉಳಿದು ಬಿಡುತ್ತಿದ್ದರೇನೋ.

ADVITHI SHETTY

ಮಿಸ್ಟರ್ ಆಂಡ್ ಮಿಸಸ್ ರಾಮಾಚಾರಿ ಚಿತ್ರವನ್ನು ನೋಡಿದ ಯಾರೇ ಆದರೂ ಅದ್ವಿತಿ ಮತ್ತು ಅಶ್ವಿತಿಯನ್ನು ಮರೆಯಲು ಸಾಧ್ಯವೇ ಇಲ್ಲ. ಅದರಲ್ಲಿ ರಾಧಿಕಾ ಪಂಡಿತ್ ಸ್ನೇಹಿತೆಯರಾಗಿ ನಟಿಸಿದ್ದ ಇವರದ್ದು ಡಬಲ್ ರೋಲ್ ಅಂತ ಬಹುತೇಕರು ಅಂದುಕೊಂಡಿದ್ದರೆ ಅದರಲ್ಲಿ ಅಚ್ಚರಿಯಾಗುವಂಥಾದ್ದೇನೂ ಇಲ್ಲ. ಅಂಥಾ ಅಪರೂಪದ ಚಹರೆಯೊಂದಿಗೆ ಈ ಸೋದರಿಯರು ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದಾರೆ. ಯಾರೇ ಕಲಾವಿದರಾದರೂ ಸಾಮಾಜಿಕ ಜವಾಬ್ದಾರಿಗಳಿರುತ್ತವೆ. ತಮ್ಮ ಕಷ್ಟಕೋಟಲೆಗಳಾಚೆಗೂ ಸಿನಿಮಾ ನೋಡಿ ಆರಾಧಿಸುವ ಜನರ ಸಂಕಷ್ಟಗಳಿಗೆ ಮಿಡಿಯುವವರೇ ನಿಜವಾದ ನಾಯಕ ನಾಯಕಿಯರಾಗಿಯೂ ಬಿಂಬಿತರಾಗುತ್ತಾರೆ. ಈ ನಿಟ್ಟಿನಲ್ಲಿ ನೋಡ ಹೋದರೆ ಕೊರೋನಾ ಬಾಧೆಯಿಂದ ಗೃಹ ಬಂಧನಕ್ಕೀಡಾಗಿ ದಿಕ್ಕೆಟ್ಟವರಿಗೆ ಸಹಾಯ ಮಾಡುವ ಮೂಲಕವೂ ಅದ್ವಿತಿ ಮತ್ತು ಅಶ್ವಿತಿ ಮೆಚ್ಚುಗೆ ಗಳಿಸಿಕೊಂಡಿದ್ದಾರೆ.

ADVITHI SHETTY 4

ಅದ್ವಿತಿ ಮತ್ತು ಅಶ್ವಿತಿ ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಚೆಂದಗೆ ಅರಿತುಕೊಂಡಿದ್ದಾರೆ. ಆದ್ದರಿಂದಲೇ ತಮ್ಮ ಸಿನಿಮಾ ತಯಾರಿಯೂ ಸೇರಿದಂತೆ ಎಲ್ಲವನ್ನೂ ಬದಿಗೊತ್ತಿ ಇತ್ತೀಚೆಗೆ ಸ್ಲಂ ಏರಿಯಾಗಳ ಬಡವರಿಗೆ ಅಗತ್ಯ ವಸ್ತುಗಳನ್ನು ವಿತರಿಸಿದ್ದಾರೆ. ಈಗ ಎಲ್ಲೆಡೆ ಒಂದಷ್ಟು ಮಾನವೀಯ ಮನಸುಗಳು ಸಂಕಷ್ಟದಲ್ಲಿರುವವರ ನೆರವಿಗೆ ಧಾವಿಸುತ್ತಿವೆ. ಆದರೆ ಅದರಾಚೆಗೂ ಅಗತ್ಯವಿರುವವರಿಗೆ ನೆರವಾಗಬೇಕೆಂಬ ಉದ್ದೇಶದಿಂದ ಇವರಿಬ್ಬರೂ ಒಳ ಪ್ರದೇಶಗಳ ಸ್ಲಂ ಏರಿಯಾಗಳನ್ನು ಹುಡುಕಿ ಸಹಾಯಹಸ್ತ ಚಾಚಿದ್ದಾರೆ. ಪ್ರತಾಪ್, ಶಿವಾಜಿ ಮತ್ತು ಚೇತನ್ ಎಂಬವರ ಸಹಾಯದೊಂದಿಗೆ ಈ ಸಾರ್ಥಕ ಕೆಲಸವನ್ನು ಅವಳಿ ಸಹೋದರಿಯರು ಮಾಡಿದ್ದಾರೆ.

ADVITHI SHETTY 3

ಹೀಗೆ ಸಹಾಯ ಹಸ್ತ ನೀಡುವ ಪ್ರಸ್ತಾಪವನ್ನು ಸಾಮಾಜಿಕ ಜಾಲತಾಣದ ಮೂಲಕ ಅದ್ವಿತಿ ಮತ್ತಯು ಅಶ್ವಿತಿ ಅಭಿಮಾನಿಗಳ ಮುಂದಿಟ್ಟಿದ್ದರಂತೆ. ಅದಕ್ಕೆ ನೆರವಿನ ಮಹಾಪೂರವೇ ಹರಿದು ಬಂದಿದೆ. ಅದನ್ನು ಅವಶ್ಯಕತೆ ಇರುವವರಿಗೆ ಮುಟ್ಟಿಸಲಾಗಿದೆ. ಹಾಗಂತ ಅವರು ಅಷ್ಟಕ್ಕೇ ಸುಮ್ಮನಾಗಿಲ್ಲ. ಮುಂದೆ ಇನ್ನೊಂದಷ್ಟು ನೆರವು ನೀಡಲೂ ಕಾರ್ಯ ಯೋಜನೆ ಸಿದ್ಧಪಡಿಸಿಕೊಂಡಿದ್ದಾರೆ. ಅದರನ್ವಯ ಸ್ಲಂ ಪ್ರದೇಶದ ಮಕ್ಕಳು ಮತ್ತು ಗರ್ಭಿಣಿ ಮಹಿಳೆಯರಿಗೆ ಪೌಂಶ್ಟಿಕಾಂಶಯುಕ್ತ ಆಹಾರದ ಕಿಟ್‍ಗಳನ್ನು ವಿತರಿಸುವ ಕಾರ್ಯಕ್ಕೂ ನೀಲನಕ್ಷೆ ಸಿದ್ಧಗೊಂಡಿದೆ. ಈ ಮೂಲಕ ಸದ್ದಿಲ್ಲದೆ ಕೊರೋನಾ ಕಾಲದಲ್ಲಿ ದಿಕ್ಕೆಟ್ಟವರಿಗೆ ನೆರವಾಗಿವ ಮಹತ್ಕಾರ್ಯವನ್ನೂ ಚಾಲನೆಯಲ್ಲಿಟ್ಟಿದ್ದಾರೆ.

ADVITHI SHETTY FINAL

ಹೀಗೆ ಸಿನಿಮಾ, ಸಾಮಾಜಿಕ ಕಾರ್ಯಗಳ ಮೂಲಕ ಹೆಸರಾಗಿರುವ ಈ ಅವಳಿ ಸೋದರಿಯರು ಸಾಗಿ ಬಂದ ಹಾದಿಯೇ ಭಿನ್ನವಾಗಿದೆ. ಸಾಮಾನ್ಯವಾಗಿ ಯಾರೇ ನಟನ ನಟಿಯರ ಹಿನ್ನೆಲೆ ಕೆದಕಿದರೆ ಅದಕ್ಕಾಗಿ ಅದೆಷ್ಟೋ ವರ್ಷಗಳಿಂದ ಕಂಡ ಕನಸಿನ ಕಥೆಯಿರುತ್ತದೆ. ಆದರೆ ಅದ್ವಿತಿ ಮತ್ತು ಅಶ್ವಿತಿಗೆ ಅಂಥಾ ಯಾವ ಇರಾದೆಯೂ ಇರಲಿಲ್ಲ. ಮಂಗಳೂರು ಸೀಮೆಯವರಾಗಿ ಅಲ್ಲಿಯೇ ವ್ಯಾಸಂಗ ಪೂರೈಸಿದ್ದ ಇವರಿಬ್ಬರಿಗೂ ಪ್ರತಿಷ್ಠಿತ ಕಂಪೆನಿಯ ಹೆಚ್‍ಆರ್ ಕೆಲಸ ಸಿಕ್ಕಿತ್ತು. ಆ ಪ್ರಪಂಚದಲ್ಲಿ ಮುಳುಗಿದ್ದವರಿಗೆ ನಟಿಯರಾಗಬೇಕೆಂಬ ಯಾವ ಮೋಹವೂ ಇರಲಿಲ್ಲ. ಆ ಕ್ಷೇತ್ರದಲ್ಲಿಯೇ ಮಹತ್ತರವಾದುದನ್ನು ಸಾಧಿಸಬೇಕೆಂಬ ಮಹತ್ವಾಕಾಂಕ್ಷೆ ಹೊಂದಿದ್ದವರಿಗೆ ಅನಿರೀಕ್ಷಿತವಾಗಿ ಒದಗಿಬಂದಿದ್ದು ಮಿಸ್ಟರ್ ಆಂಡ್ ಮಿಸಸ್ ರಾಮಾಚಾರಿ ಚಿತ್ರದಲ್ಲಿ ನಟಿಸೋ ಆಫರ್!

ADVITHI SHETTY 6

ಹಾಗೆ ರಾಕಿಂಗ್ ಸ್ಟಾರ್ ಯಶ್ ಚಿತ್ರದಲ್ಲಿ ಇವರಿಬ್ಬರೂ ಟ್ವಿನ್ಸ್ ಎಂಬ ಕಾರಣದಿಂದಲೇ ನಟಿಸೋ ಅವಕಾಶ ಒದಗಿ ಬಂದಿತ್ತು. ಆದರೆ ಆರಂಭದಲ್ಲಿ ಅದನ್ನು ನಿರಾಕರಿಸಿದದ್ದರಂತೆ. ಆ ಪಾತ್ರಕ್ಕೆ ಇವರಿಬ್ಬರೂ ಹೇಳಿ ಮಾಡಿಸಿದಂತಿದ್ದದ್ದರಿಂದ ಕಡೆಗೂ ನಿರ್ದೇಶಕರು ಒಪ್ಪಿಸಿದ್ದರಂತೆ. ನಂತರದ್ದೆಲ್ಲವೂ ಹೊಸಾ ಅನುಭವ. ರಾಧಿಕಾ ಸೇರಿದಂತೆ ಎಲ್ಲರೂ ಹೆಜ್ಜೆ ಹೆಜ್ಜೆಗೂ ಜೊತೆಗಿದ್ದು ಪೊರೆದಿದ್ದರಿಂದಾಗಿ ಅದ್ವಿತಿ ಮತ್ತು ಅಶ್ವಿತಿಗೆ ಸಿನಿಮಾ ನಟನೆಯ ಬಗ್ಗೆ ಮೆಲ್ಲಗೆ ಮೋಹ ಮೂಡಿಕೊಂಡಿತ್ತು. ಆ ಚಿತ್ರವೇ ಅವರಿಬ್ಬರಿಗೂ ವ್ಯಾಪಕ ಜನಪ್ರಿಯತೆಯನ್ನೂ ತಂದುಕೊಟ್ಟಿತ್ತು. ಆ ನಂತರದಲ್ಲಂತೂ ಪ್ರತೀ ನಟಿಯರೂ ಬಯಸುವಂಥಾ ಅಪರೂಪದ ಅವಕಾಶವೇ ಈ ಅವಳಿ ಅಕ್ಕ ತಂಗಿಯರ ಕೈ ಹಿಡಿದಿತ್ತು.

d7e7b472 30a8 48bb 96af e7e1764ad5c2

ಪಿ.ಎಚ್ ವಿಶ್ವನಾಥ್ ನಿರ್ದೇಶನದ ಸುಳಿ ಎಂಬ ಕಲಾತ್ಮಕ ಚಿತ್ರದಲ್ಲಿ ಅದ್ವಿತಿ ಮತ್ತು ಅಶ್ವಿತಿ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದರು. ಅದು ಅವರ ಪಾಲಿಗೆ ಎರಡನೇ ಚಿತ್ರ. ಹಿರಿಯ ನಟ ಶ್ರೀನಾಥ್ ಮಕ್ಕಳಾಗಿ ನಟಿಸಿದ್ದ ಅವರಿಗೆ ಇದೊಂದು ಸವಾಲು. ಯಾಕೆಂದರೆ ಅದು ಹೆಜ್ಜೆ ಹೆಜ್ಜೆಗೂ ಭಿನ್ನ ಅಭಿವ್ಯಕ್ತಿಯನ್ನು ಬಯಸುವಂಥಾ ಪಾತ್ರ. ಇದಕ್ಕಾಗಿ ನಿರ್ದೇಶಕರು ನೀನಾಸಂ ತಂಡದಿಂದ ಒಂದು ತಿಂಗಳ ಕಾಲ ನಟನಾ ತರಬೇತಿ ಕೊಡಿಸಿದ್ದರಂತೆ. ಅದಾದ ನಂತರ ಮಂಗಳೂರು ಶೈಲಿಯ ಕನ್ನಡದಾಚೆಗಿನ ಮತ್ತೊಂದು ಧಾಟಿಯ ಕನ್ನಡವನ್ನು ಅಭ್ಯಸಿಸಿ ತಮ್ಮ ಪಾತ್ರಕ್ಕೆ ತಾವೇ ಡಬ್ಬಿಂಗ್ ಅನ್ನೂ ಮಾಡಿದ್ದರಂತೆ. ಇದು ಇವರಿಬ್ಬರನ್ನೂ ಕೂಡಾ ಪಳಗಿದ ನಟಿಯರನ್ನಾಗಿ ರೂಪಾಂತರಿಸಿತ್ತು. ಆ ಸಿನಿಮಾಗಾಗಿ ಹಲವಾರು ಪ್ರಶಸ್ತಿಗೂ ಅರಸಿ ಬಂದಿದ್ದವು.

ADVITHI SHETTY 1

ಅದಾದ ನಂತರ ಅದ್ವಿತಿ ದೊಡ್ಮನೆ ಹುಡುಗ ಸೇರಿದಂತೆ ಕೆಲ ಚಿತ್ರಗಳಲ್ಲಿ ಪಾತ್ರ ನಿರ್ವಹಿಸಿದ್ದರು. ಸೀರಿಯಲ್‍ನಲ್ಲಿಯೂ ಕಾಣಿಸಿಕೊಂಡಿದ್ದರು. ತದ ನಂತರ ಫ್ಯಾನ್ ಮತ್ತು ಕಾರ್ಮೋಡ ಸರಿದು ಎಂಬ ಚಿgತ್ರಗಳಲ್ಲಿಯೂ ಬಣ್ಣ ಹಚ್ಚಿದ್ದರು. ಸದ್ಯ 188 ಮತ್ತು ಧೀರ ಸಾಮ್ರಾಟ್ ಎಂಬ ಚಿತ್ರಗಳಲ್ಲಿ ಅದ್ವಿತಿ ನಟಿಸುತ್ತಿದ್ದಾರೆ. ಸೈಕೋ ಖ್ಯಾತಿಯ ನಿರ್ದೇಶಕರ ಎಸ್ ಎಂಬ ಚಿತ್ರದಲ್ಲಿಯೂ ಅವರದ್ದು ಮಹತ್ವದ ಪಾತ್ರ. ಇದೆಲ್ಲವೂ ಲಾಕ್‍ಡೌನ್ ಮುಗಿದಾದ ನಂತರವಷ್ಟೇ ಟೇಕಾಫ್ ಆಗಲಿದೆ. ಇನ್ನುಳಿದಂತೆ ಮಹಾನ್ ಹುತಾತ್ಮ ಎಂಬ ಶಾರ್ಟ್ ಮೂವಿ ಅದ್ವಿತಿ ಪಾಲಿಗೆ ರಾಷ್ಟ್ರಪ್ರಶಸ್ತಿಯ ಸವಿಯೂಡಿದೆ. ಮತ್ತೊಂದಷ್ಟು ಕಿರುಚಿತ್ರಗಳೂ ಅವರನ್ನು ನಟಿಯಾಗಿ ಪೊರೆದಿವೆ.

47419ad8 c2c7 4400 b4cb e883e818a924

ಇನ್ನುಳಿದಂತೆ ಅಶ್ವಿತಿ ಶೆಟ್ಟಿಯೂ ತಮ್ಮದೇ ರೀತಿಯಲ್ಲಿ ಸಕ್ರಿಯರಾಗಿದ್ದಾರೆ. ಸುಳಿಯ ನಂತರದಲ್ಲಿ ಏನ್ ಬರ್ತೀಯಾ ಎಂಬ ಶಾರ್ಟ್ ಮೂವಿಯಲ್ಲಿಯೂ ನಟಿಸಿ ಸೈ ಅನ್ನಿಸಿಕೊಂಡಿದ್ದಾರೆ. ಇದಕ್ಕಾಗಿ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾರೆ. ಚಂದನ್ ಶೆಟ್ಟಿಯ ಶೋಕಿಲಾಲ ಎಂಬ ಆಲ್ಬಂ ಸಾಂಗ್ ಕೂಡಾ ಅವರಿಗೆ ಮೈಲೇಜು ತಂದುಕೊಟ್ಟಿದೆ. ಜೈನ್ ಯುನಿವರ್ಸಿಟಿಯ ವಿಮೆನ್ ಅಚೀವರ್ಸ್ ಅವಾರ್ಡನ್ನೂ ಅಶ್ವಿತಿ ತಮ್ಮದಾಗಿಸಿಕೊಂಡಿದ್ದಾರೆ. ಅನಂತು ವರ್ಸಸ್ ನುಸ್ರತ್ ಚಿತ್ರದಲ್ಲಿನ ಪಾತ್ರಕ್ಕಾಗಿಯೂ ಅವರನ್ನು ಪ್ರಶಸ್ತಿ ಅರಸಿ ಬಂದಿದೆ. ಈ ಕ್ಷಣದವರೆಗೂ ಹೀಗೆ ಸಾಗಿ ಬಂದಿರುವ ಈ ಅವಳಿ ಸಹೋದರಿಯರ ಪ್ರಧಾನ ಆಸಕ್ತಿ ಡ್ಯಾನ್ಸ್. ಈಗಾಗಲೇ ಹಲವಾರು ಶೋಗಳನ್ನು ನೀಡಿರೋ ಅವರಿಗೆ ಆ ಕ್ಷೇತ್ರದಲ್ಲಿಯೂ ಸಾಧಿಸೋ ಹಂಬಲವಿದೆಯಾದರೂ ನಟನೆಗಾಗಿ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದಾರೆ.

DKzToeEV4AI IaH

ಹೀಗೆ ಈವತ್ತಿಗೆ ಕನ್ನಡ ಸಿನಿಮಾ ರಂಗದಲ್ಲಿಮೆಲ್ಲಗೆ ನೆಲೆ ಕಂಡುಕೊಳ್ಳುತ್ತಿರೋ ಅದ್ವಿತಿ-ಅಶ್ವಿತಿ ಶೆಟ್ಟಿ ತಕ್ಷಣಕ್ಕೆ ಗುರುತಿಸಲು ತುಣಿಕಾಡುವಷ್ಟು ಹೋಲಿಕೆಗಳಿರೋ ಅಪರೂಪದ ಅವಳಿಗಳು. ಈ ಇಬ್ಬರ ನಡುವೆ ಯಾರು ದೊಡ್ಡವರೆಂಬ ಕುತೂಹಲವಿದ್ದರೆ, ಅದಕ್ಕೆ ಕೇವಲ ಐದಾರು ಸೆಕೆಂಡುಗಳ ಸೀನಿಯಾರಿಟಿಯಷ್ಟೇ ಗೋಚರಿಸುತ್ತದೆ. ಅದರನ್ವಯ ಹೇಳೋಡಾದರೆ ಅದ್ವಿತಿ ಆಶ್ವಿತಿಗಿಂತ ಐದು ಸೆಕೆಂಡ್ ದೊಡ್ಡವರು ಅನ್ನಲಡ್ಡಿಯಿಲ್ಲ!

ಮಂಗಳೂರಿನಲ್ಲಿಯೇ ಹುಟ್ಟಿ ಬೆಳೆದ ಅದ್ವಿತಿ ಮತ್ತು ಆಶ್ವಿತಿ ಸದಾ ಸುತ್ತಲಿನವರಿಗೆ ನಡೆದಾಡುವ ಅಚ್ಚರಿಯಂತಿದ್ದವರು. ಹೇಳಿಕೊಳ್ಳುವಂಥಾ ಸಾಂಸ್ಕೃತಿಕ ಚಟುವಟಿಕೆಗಳ ಗುಂಗಿಲ್ಲದ ಇವರಿಬ್ಬರೂ ಅಚಾನಕ್ಕಾಗಿ ಶಾಲಾ ದಿನಗಳಲ್ಲಿ ಕೋಟಿ ಚೆನ್ನಯರಾಗಿ ಅಭಿನಯಿಸುವ ಸಂದರ್ಭ ಎದುರಾಗಿತ್ತು. ತುಳುನಾಡಿನ ಪರಂಪರೆಯ ಅಸ್ಮಿತೆಯಂತಿರೋ ಕೋಟಿ ಚೆನ್ನಯರಾಗಿ ಅಭಿನಯಿಸಿದ್ದೇ ತಮ್ಮ ಬದುಕಿನ ಕಲಾ ಯಾನಕ್ಕೆ ಶ್ರೀಕಾರ ಹಾಡಿದೆ ಎಂಬ ಸುಳಿವು ಈ ಸಹೋದರಿಯರಿಗೆ ಅಚಾನಕ್ಕಾದ ಅವಕಾಶ ಕೂಡಿ ಬರುವವರೆಗೂ ತಿಳಿದಿರಲಿಲ್ಲ. ತಾವು ಎತ್ತ ಹೊರಳಿಕೊಂಡರೂ ತಮ್ಮನ್ನು ತೆಕ್ಕೆಗೆಳೆದುಕೊಂಡಿರೋ ಕಲೆಗೆ ಈ ಸಹೋದರಿಯರೀಗ ಶರಣಾಗಿದ್ದಾರೆ. ನಟನೆಗೆ ಅವಕಾಶವಿರೋ ಪಾತ್ರಗಳಲ್ಲಿ ನಟಿಸುತ್ತಾ ಮತ್ತಷ್ಟು ಪ್ರೇಕ್ಷಕರಿಗೆ ಹತ್ತಿರಾಗಬೇಕೆಂಬ ಸಮಾನ ಆಸಕ್ತಿಯನ್ನೂ ಹೊಂದಿದ್ದಾರೆ.

TAGGED:Adhvithi ShettyAshvithi ShettycinemaPublic TVsistersಅದ್ವಿತಿ ಶೆಟ್ಟಿಅಶ್ವಿತಿ ಶೆಟ್ಟಿಪಬ್ಲಿಕ್ ಟಿವಿಸಿನಿಮಾಸೋದರಿಯರು
Share This Article
Facebook Whatsapp Whatsapp Telegram

Cinema news

BBK12 Kavya Shaiva congratulates Bigg Boss winner Gilli Nata
ಬಡವರ ಮಕ್ಕಳು ಬೆಳಿಬೇಕು ಕಣ್ರಯ್ಯ – ಗಿಲ್ಲಿಯನ್ನು ಅಭಿನಂದಿಸಿದ ಕಾವ್ಯ
Cinema Latest Main Post TV Shows
AR Rahman 2
ರೆಹಮಾನ್ ಕೋಮುರಾಗ – ಪುತ್ರಿಯರ ಬೆಂಬಲ
Cinema Latest Top Stories
ashwini gowda gilli nata
ಗಿಲ್ಲಿ ನಿಜವಾದ ಬಡವ ಅಲ್ಲ, ಬಡವನ ಥರ ಗೆಟಪ್‌ ಹಾಕ್ಕೊಂಡು ಗೆದ್ದಿದ್ದಾರೆ: ಅಶ್ವಿನಿ ಗೌಡ
Cinema Latest Main Post TV Shows
ashwini gowda 1
ನಾನು ವಿನ್ನರ್‌ ಆಗುವ ನಿರೀಕ್ಷೆ ಹೆಚ್ಚಿತ್ತು: 2ನೇ ರನ್ನರ್‌ ಅಪ್‌ ಅಶ್ವಿನಿ ಗೌಡ ರಿಯಾಕ್ಷನ್‌
Cinema Latest Main Post TV Shows

You Might Also Like

budget 2026 tax
Latest

Budget 2026 income tax expectations: ಹೊಸ ತೆರಿಗೆ ಪದ್ಧತಿ ಮತ್ತಷ್ಟು ಲಾಭದಾಯಕವಾಗುತ್ತಾ?

Public TV
By Public TV
2 hours ago
RCB Women vs Gujarat Giants Women won by 61 runs RCB QUALIFY FOR THE PLAYOFFS
Cricket

ಗುಜರಾತ್‌ ವಿರುದ್ಧ 61 ರನ್‌ಗಳ ಭರ್ಜರಿ ಜಯ – ಪ್ಲೇ ಆಫ್‌ ಪ್ರವೇಶಿಸಿದ ಆರ್‌ಸಿಬಿ

Public TV
By Public TV
2 hours ago
big bulletin 19 January 2026 part 1
Big Bulletin

ಬಿಗ್‌ ಬುಲೆಟಿನ್‌ 19 January 2026 ಭಾಗ-1

Public TV
By Public TV
3 hours ago
big bulletin 19 January 2026 part 2
Big Bulletin

ಬಿಗ್‌ ಬುಲೆಟಿನ್‌ 19 January 2026 ಭಾಗ-2

Public TV
By Public TV
3 hours ago
big bulletin 19 January 2026 part 3
Big Bulletin

ಬಿಗ್‌ ಬುಲೆಟಿನ್‌ 19 January 2026 ಭಾಗ-3

Public TV
By Public TV
3 hours ago
Nitin Nabin
Latest

ಹೊಸ ತಲೆಮಾರಿನತ್ತ ಹೆಜ್ಜೆ ಹಾಕಿದ ಬಿಜೆಪಿ – 45 ವರ್ಷಕ್ಕೆ ನಿತಿನ್ ನಬಿನ್‌ಗೆ ಅಧ್ಯಕ್ಷ ಪಟ್ಟ

Public TV
By Public TV
4 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?