– ಶವವನ್ನ ಚೀಲದಲ್ಲಿ ತುಂಬಿ ಕಿಟಕಿಯಿಂದ ಹೊರ ಎಸೆದ
– ಮನನೊಂದು ಬಾಲಕಿ ತಂದೆ ಆತ್ಮಹತ್ಯೆ
ನವದೆಹಲಿ: ಅತ್ಯಾಚಾರದ ವೇಳೆ ಬಾಲಕಿಯ ಕತ್ತು ಸೀಳಿ ಕೊಂದು ದೇಹವನ್ನು ಚೀಲದಲ್ಲಿ ಕಟ್ಟಿ ಬಾತ್‍ರೂಮ್ ಕಿಟಕಿಯಿಂದ ಹೊರಗೆ ಎಸೆದಿರುವ ಭಯಾನಕ ಘಟನೆ ದಾದರ್‍ನ ಹವೇಲಿಯಲ್ಲಿ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ 30 ವರ್ಷದ ಓರ್ವನನ್ನ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈತ 4 ವರ್ಷದ ಬಾಲಕಿ ಮೇಲೆ ಆತ್ಯಾಚಾರ ಮಾಡಲು ಪ್ರಯತ್ನಿಸಿದ್ದಾನೆ. ಬಾಲಕಿ ಜೋರಾಗಿ ಅತ್ತಿದ್ದರಿಂದ ಕೊಲೆ ಮಾಡಿ ಜೈಲು ಪಾರಾಗಿದ್ದಾನೆ. ಮಗಳ ವಿಚಾರವಾಗಿ ಮನನೊಂದ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬಾಲಕಿ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದಳು. ಈ ವೇಳೆ ಆರೋಪಿ ಬಾಲಕಿಯನ್ನು ಪುಸಲಾಯಿಸಿ ಅಪಾರ್ಟ್‍ಮೆಂಟ್‍ಗೆ ಕರೆದುಕೊಂಡು ಹೋಗಿದ್ದಾನೆ. ಈ ವೇಳೆ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಅದರೆ ಬಾಲಕಿ ಜೋರಾಗಿ ಅಳಲಾರಂಭಿಸಿದ್ಧಾಳೆ. ಆ ರಜತ್ ಕೋಪಗೊಂಡು ಆಕೆಯ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ನಂತರ ಆಕೆಯ ದೇವಹನ್ನು ಚೀಲದಲ್ಲಿ ಕಟ್ಟಿ ಬಾತ್‍ರೂಮ್ ಕಿಟಕಿ ಒಡೆದು ಹೊರಗೆ ಎಸೆದಿದ್ದಾನೆ.
ಬಾಲಕಿ ಕಾಣದೆ ಇದ್ದಾಗ ಆಕೆಯ ಪೋಷಕರು ಹುಡುಕಿದ್ದಾರೆ. ನಂತರ ನಾಪತ್ತೆ ಪ್ರಕರಣವನ್ನು ಠಾಣೆಯಲ್ಲಿ ದಾಖಲಿಸಿದ್ದಾರೆ. ತನಿಖೆ ಆರಂಭಿಸಿದ ಪೊಲೀಸರು ಫ್ಲ್ಯಾಟ್‍ಗಳಲ್ಲಿ ಹುಡುಕಾಟ ನಡೆಸಿದಾಗ ಆರೋಪಿ ಮನೆಯಲ್ಲಿ ರಕ್ತದ ಕಲೆಗಳು ಇರುವುದು ಪತ್ತೆಯಾಗಿದೆ. ನಂತರ ಆರೋಪಿಯನ್ನ ವಿಚಾರಣೆಗೆ ಒಳಪಡಿಸಿದಾಗ ತಪ್ಪನ್ನು ಒಪ್ಪಿಕೊಂಡು ಪೊಲೀಸರಿಗೆ ಶರಣಾಗಿದ್ದಾನೆ.