ಬೆಂಗಳೂರು: ಸಿಎಂ ಯಡಿಯೂರಪ್ಪ ನಮ್ಮ ಕ್ಷೇತ್ರಗಳಿಗೆ ಅನುದಾನ ನೀಡುತ್ತಿಲ್ಲ ಎನ್ನುವುದು ಕೆಲ ಬಿಜೆಪಿ ಶಾಸಕರ ಆರೋಪ. ಆದರೆ ಈಗ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರಿಗೆ ಸಿಎಂ ಯಡಿಯೂರಪ್ಪ ಅವರು ಯಾವ ಶಾಸಕರಿಗೆ ಎಷ್ಟು ಅನುದಾನ ನೀಡಿದ್ದೇನೆ ಎಂಬ ಮಾಹಿತಿ ಇರುವ ರಹಸ್ಯ ವರದಿ ನೀಡಿದ್ದಾರೆ.
Advertisement
ವಿರೋಧಿ ಬಣದ ಶಾಸಕರು ತುಟಿಕ್ ಪಿಟಿಕ್ ಅನ್ನದಿರಲು ಸಿಎಂ ಮೆಗಾ ಪ್ಲ್ಯಾನ್ ಮಾಡಿದ್ದು, ಅರುಣ್ ಸಿಂಗ್‍ಗೆ ಸಾಕ್ಷಿ ಸಮೇತ ರಹಸ್ಯ ವರದಿ ಸಲ್ಲಿಕೆ ಮಾಡಿದ್ದಾರೆ. ಈ ಮೂಲಕ ನಾನು ಯಾರಿಗೂ ಮೋಸ ಮಾಡಿಲ್ಲ, ಎಲ್ಲರಿಗೂ ಅನುದಾನ ಕೊಟ್ಟಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 18 ವರ್ಷಗಳಿಂದ ಐಸಿಸಿ ಟೂರ್ನಿಯಲ್ಲಿ ಕೀವಿಸ್ ವಿರುದ್ಧ ಭಾರತ ಗೆದ್ದಿಲ್ಲ – ಈ ಬಾರಿ ಗೆಲುವು ಯಾರಿಗೆ?
Advertisement
Advertisement
ಯಾರಿಗೆ ಎಷ್ಟು ಅನುದಾನ?
1,000 ಕೋಟಿ ರೂ.ಗಿಂತ ಹೆಚ್ಚು ಅನುದಾನವನ್ನು 3 ಶಾಸಕರಿಗೆ ಮಂಜೂರು ಮಾಡಿದ್ದರೆ, 500 ಕೋಟಿ ರೂ.ಗಿಂತ ಹೆಚ್ಚಿನ ಅನುದಾನವನ್ನು 21 ಶಾಸಕರಿಗೆ ನೀಡಲಾಗಿದೆ. 19 ಶಾಸಕರಿಗೆ 300 ಕೋಟಿಗೂ ಹೆಚ್ಚು, 71 ಶಾಸಕರಿಗೆ 100 ಕೋಟಿಗೂ ಹೆಚ್ಚು, 7 ಶಾಸಕರಿಗೆ 100 ಕೋಟಿಗಿಂತಲೂ ಕಡಿಮೆ ಅನುದಾನ ನೀಡಲಾಗಿದೆ.
Advertisement
ಹೆಚ್ಚು ಅನುದಾನ ಪಡೆದ ಟಾಪ್ 5 ಶಾಸಕರು
1. ಬಿ.ಎಸ್. ಯಡಿಯೂರಪ್ಪ(ಶಿಕಾರಿಪುರ) – 1,299 ಕೋಟಿ ರೂ.
2. ರಮೇಶ್ ಜಾರಕಿಹೊಳಿ(ಗೋಕಾಕ್) – 1,178 ಕೋಟಿ ರೂ.
3. ರಾಜೇಶ್ ಗೌಡ(ಶಿರಾ) – 1,151 ಕೋಟಿ ರೂ.
4: ಶಿವನಗೌಡ ನಾಯಕ್(ದೇವದುರ್ಗ) – 990 ಕೋಟಿ ರೂ.
5. ಮಸಾಲೆ ಜಯರಾಂ(ತುರುವೇಕೆರೆ) – 922 ಕೋಟಿ ರೂ.
ಕಡಿಮೆ ಅನುದಾನ ಪಡೆದವರು
1. ಎಲ್.ನಾಗೇಂದ್ರ(ಚಾಮರಾಜ) – 82 ಕೋಟಿ ರೂ.
2. ಶಶಿಕಲಾ ಜೊಲ್ಲೆ(ನಿಪ್ಪಾಣಿ) – 89 ಕೋಟಿ ರೂ.
3. ಶರಣು ಸಲಗಾರ್(ಬಸವಕಲ್ಯಾಣ) – 91 ಕೋಟಿ ರೂ.
4. ಶ್ರೀಮಂತ ಪಾಟೀಲ್(ಕಾಗವಾಡ) – 93 ಕೋಟಿ ರೂ.
5. ರೇಣುಕಾಚಾರ್ಯ(ಹೊನ್ನಾಳಿ) – 96 ಕೋಟಿ ರೂ.
ಧ್ವನಿ ಎತ್ತಿದ ಶಾಸಕರಿಗೆ ಎಷ್ಟು ಅನುದಾನ?
1. ಅರವಿಂದ್ ಬೆಲ್ಲದ್(ಧಾರವಾಡ ಪಶ್ಚಿಮ) 137 ಕೋಟಿ ರೂ.
2. ಬಸನಗೌಡ ಪಾಟೀಲ್ ಯತ್ನಾಳ್(ವಿಜಯಪುರ ನಗರ) 232 ಕೋಟಿ ರೂ.
3. ಸುನೀಲ್ ಕುಮಾರ್(ಕಾರ್ಕಳ) 329 ಕೋಟಿ ರೂ.