ಬೆಂಗಳೂರು: ಸ್ಯಾಂಡಲ್‍ವುಡ್ ನಟ, ಯುವ ಸಾಮ್ರಾಟ ದಿವಂಗತ ಚಿರಂಜೀವಿ ಸರ್ಜಾ ಅವರ ಹುಟ್ಟುಹಬ್ಬ ಇಂದು ಆಗಿದ್ದು, ಇದೇ ದಿನ ಸಹೋದರ ಧ್ರುವ ಸರ್ಜಾರ ಹೊಸ ಸಿನಿಮಾದ ಸ್ಕ್ರಿಪ್ಟ್ ಪೂಜೆ ನೆರವೇರಿದೆ.
ಬೆಂಗಳೂರಿನ ಬಸವೇಶ್ವರ ನಗರದಲ್ಲಿರೋ ಗಣಪತಿ ದೇವಸ್ಥಾನದಲ್ಲಿ ಸ್ಕ್ರಿಪ್ಟ್ ಪೂಜೆ ನೆರೆವೇರಿಸಿದ್ದಾರೆ. ಅಣ್ಣನ ಹುಟ್ಟಿದ ದಿನವನ್ನ ಧ್ರುವ ಹೊಸ ಸಿನಿಮಾ ಅನೌನ್ಸ್ ಮಾಡುವ ಮೂಲಕ ಆಚರಿಸಿದ್ದಾರೆ. ಇದನ್ನು ಓದಿ: ಹಳೆಯ ಫೋಟೋ ಹಂಚಿಕೊಂಡು ಅಣ್ಣನಿಗೆ ಧ್ರುವ ವಿಶ್
ಧ್ರುವ ಹೊಸ ಸಿನಿಮಾಗೆ ನಂದಕಿಶೋರ್ ನಿರ್ದೇಶನ ಮಾಡಿದ್ದಾರೆ. ಈ ಮೂಲಕ ಪೊಗರು ಚಿತ್ರದ ಬಳಿಕ ಮತ್ತೊಮ್ಮೆ ಧ್ರುವ ಹಾಗೂ ನಂದಕಿಶೋರ್ ಜೊತೆಯಾಗಿದ್ದಾರೆ. ಈ ಚಿತ್ರ ಉದಯ್ ಕೆ ಮೆಹ್ತಾ ನಿರ್ಮಾಣದಲ್ಲಿ ಮೂಡಿ ಬರಲಿದೆ. ಇದನ್ನು ಓದಿ: ಅವಳಿ ಮಕ್ಕಳು ಆದ್ರೂ ಆಗ್ಬೋದು: ನಸುನಕ್ಕ ಮೇಘನಾ
ನವೆಂಬರ್ ನಿಂದ ಶೂಟಿಂಗ್ ಪ್ರಾರಂಭವಾಗಲಿದೆ. ಪ್ರತಿ ಸಿನಿಮಾ ಪೂಜೆ ಇದ್ದಾಗ ಧ್ರುವನ ಜೊತೆ ಇರುತ್ತಿದ್ದ ಚಿರಂಜೀವಿ ಸರ್ಜಾ, ಈ ವರ್ಷ ಅಣ್ಣ ಇಲ್ಲದಿದ್ದಕ್ಕೆ ಚಿರು ಬರ್ತ್ ಡೇ ದಿನವೇ ಹೊಸ ಚಿತ್ರದ ಸ್ಕ್ರಿಪ್ಟ್ ಪೂಜೆ ನೆರವೇರಿಸಿದ್ದಾರೆ. ಆದರೆ ಸಿನಿಮಾದ ಟೈಟಲ್ ಇನ್ನೂ ಫೈನಲ್ ಆಗಿಲ್ಲ. ಇದನ್ನು ಓದಿ: ಕೇಕ್ ಕತ್ತರಿಸಿ, ಮಗುವನ್ನೆತ್ತಿ ಮುದ್ದಾಡಿದ ಚಿರು – ಕ್ಷತ್ರಿಯ ಟೀಸರಿನಲ್ಲಿದೆ ಡಬ್ಬಲ್ ಸರ್ಪ್ರೈಸ್