ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪನವರ ಅಡ್ಜಸ್ಟ್‌ಮೆಂಟ್ ಪಾಲಿಟಿಕ್ಸ್ ಕುರಿತು ಮತ್ತಷ್ಟು ಮಾಹಿತಿ ಹೊರಬೀಳುತ್ತಲೇ ಇವೆ. ವಿಪಕ್ಷ ನಾಯಕರಾದ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಮೇಲೆ ಯಡಿಯೂರಪ್ಪ ಸಾಫ್ಟ್ ಕಾರ್ನರ್ ಹೊಂದಿದ್ದಾರೆ. ವಿಪಕ್ಷ ನಾಯಕರ ಕ್ಷೇತ್ರಗಳಿಗೆ ಅನುದಾನದ ಹೊಳೆ ಹರಿಯುತ್ತಿದೆ ಎಂಬ ಬಿಜೆಪಿ ಶಾಸಕರ ಆರೋಪಕ್ಕೆ ಪೂರಕ ಸಾಕ್ಷ್ಯಗಳು ಸಿಗುತ್ತಿವೆ.
ಕೇವಲ ಯಡಿಯೂರಪ್ಪ ಮಾತ್ರವಲ್ಲ, ಅವರ ಸಂಪುಟದ ಸದಸ್ಯರು ಕೂಡ ವಿಪಕ್ಷ ನಾಯಕರ ಕ್ಷೇತ್ರಗಳ ಅಭಿವೃದ್ಧಿಗೆ ಟೊಂಕ ಕಟ್ಟಿದ್ದಾರೆ ಎಂಬ ಆರೋಪ ನಿಜ ಎಂಬಂತೆ ಇಂದು ಬಾದಾಮಿಯಲ್ಲಿ 75 ಕೋಟಿ ವೆಚ್ಚದ ಅಭಿವೃದ್ಧಿ ಯೋಜನೆಗಳಿಗೆ ಡಿಸಿಎಂ ಗೋವಿಂದ ಕಾರಜೋಳ ಚಾಲನೆ ನೀಡಿದ್ದಾರೆ.
Advertisement
Advertisement
ಯಾಕೋ ಏನೋ ಸಚಿವ ಶ್ರೀರಾಮುಲು ಕೊನೆ ಕ್ಷಣದಲ್ಲಿ ಈ ಕಾರ್ಯಕ್ರಮಕ್ಕೆ ಗೈರಾದರು. ಪ್ರತಿಪಕ್ಷಗಳ ಮುಖಂಡರ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡುತ್ತಿರುವುದಕ್ಕೆ ಬಿಜೆಪಿಯಲ್ಲಿ ಇನ್ನಷ್ಟು ಆಕ್ರೋಶ ಸ್ಫೋಟಗೊಂಡಿದೆ.
Advertisement
ನಮ್ಮ ಕ್ಷೇತ್ರಗಳಿಗೂ ಅನುದಾನ ಕೊಡಿ ಎಂದು ಸಿಎಂ ಮೇಲೆ ಹಲವರು ಒತ್ತಡ ಹೇರುತ್ತಿದ್ದಾರೆ ಎಂದು ತಿಳಿದುಬಂದಿದೆ. ಅಡ್ಜಸ್ಟ್‌ಮೆಂಟ್ ಪಾಲಿಟಿಕ್ಸ್‌ಗೆ ಯತ್ನಾಳ್ ಕಿಡಿಕಾರಿದ್ದಾರೆ. ಎಲ್ಲವನ್ನು ಹೈಕಮಾಂಡ್ ಗಮನಿಸ್ತಿದೆ ಎಂದು ಯತ್ನಾಳ್ ಹೇಳಿದ್ದಾರೆ.
Advertisement
ಬಾದಾಮಿಗೆ ಎಷ್ಟು ಅನುದಾನ?
* ಪಿಡಬ್ಲ್ಯೂಡಿ ಇಲಾಖೆ – 52.48 ಕೋಟಿ ರೂ.
* ಗ್ರಾಮೀಣಾಭಿವೃದ್ಧಿ ಇಲಾಖೆ – 31.30 ಕೋಟಿ ರೂ.
* ಜಲಸಂಪನ್ಮೂಲ ಇಲಾಖೆ – 36 ಕೋಟಿ ರೂ.
* ಸಣ್ಣ ನೀರಾವರಿ ಇಲಾಖೆ – 11.86 ಕೋಟಿ ರೂ.
* ಸಮಾಜ ಕಲ್ಯಾಣ ಇಲಾಖೆ – 12.04 ಕೋಟಿ ರೂ.
* ನಗರಾಭಿವೃದ್ಧಿ ಇಲಾಖೆ – 227.80 ಕೋಟಿ ರೂ.
* ಒಟ್ಟು ಅನುದಾನ – 371.48 ಕೋಟಿ ರೂ.
ಚನ್ನಪಟ್ಟಣಕ್ಕೆ ಎಷ್ಟು ಅನುದಾನ?
* ಪಿಡಬ್ಲ್ಯೂಡಿ ಇಲಾಖೆ – 130.66 ಕೋಟಿ ರೂ.
* ಗ್ರಾಮೀಣಾಭಿವೃದ್ಧಿ ಇಲಾಖೆ – 15.75 ಕೋಟಿ ರೂ.
* ಸಣ್ಣ ನೀರಾವರಿ ಇಲಾಖೆ – 3.37 ಕೋಟಿ ರೂ.
* ಸಮಾಜ ಕಲ್ಯಾಣ ಇಲಾಖೆ – 10.19 ಕೋಟಿ ರೂ.
* ಒಟ್ಟು ಅನುದಾನ – 160 ಕೋಟಿ ರೂ.