ಅಜ್ಜಿ ಮೊಬೈಲ್ ಗಿಫ್ಟ್ ಕೊಡದ್ದಕ್ಕೆ ಕತ್ತು ಸೀಳಿ ಡೈನಿಂಗ್ ಟೇಬಲ್ ಮೇಲಿಟ್ಟ

Public TV
1 Min Read
mobile call

ಮುಂಬೈ: ಅಜ್ಜಿ ಮೊಬೈಲ್ ಗಿಫ್ಟ್ ಕೊಡುವುದನ್ನು ನಿರಾಕರಿಸಿದ್ದಕ್ಕೆ 24 ವರ್ಷದ ಯುವಕ ಆಕೆಯ ಕತ್ತು ಸೀಳಿ ಕೊಲೆ ಮಾಡಿ, ಬಳಿಕ ತಲೆಯನ್ನು ಡೈನಿಂಗ್ ಟೇಬಲ್ ಮೇಲಿಟ್ಟು ವಿಕೃತಿ ಮೆರೆದಿದ್ದಾನೆ.

Police Jeep 1 2 medium

ಪಶ್ಚಿಮ ಬಾಂದ್ರಾದಲ್ಲಿ ಘಟನೆ ನಡೆದಿದ್ದು, ಆರೋಪಿ ಡ್ರಗ್ಸ್ ಅಡಿಕ್ಟ್ ಆಗಿದ್ದ, ಅಲ್ಲದೆ ಚಿಕಿತ್ಸೆ ಪಡೆಯುತ್ತಿದ್ದ ಎನ್ನಲಾಗಿದೆ. ಆರೋಪಿಯನ್ನು ಕ್ರಿಸ್ಟೋಫರ್ ಡಯಾಸ್ ಎಂದು ಗುರುತಿಸಲಾಗಿದೆ. ಈತ ಥಾಣೆಯಲ್ಲಿರುವ ರೆಹಾಬ್ ಸೆಂಟರ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಆದರೆ ಚಿಕಿತ್ಸೆಗೆ ಹಣದ ಕೊರತೆ ಉಂಟಾಗಿ ಕೆಲ ದಿನಗಳ ಹಿಂದೆ ಪೋಷಕರು ಆತನನ್ನು ಮನೆಗೆ ಕರೆ ತಂದಿದ್ದರು. ಡಯಾಸ್‍ನ ಪೋಷಕರು ಮನೆಯ ಮೊದಲ ಮಹಡಿಯಲ್ಲಿ ವಾಸಿಸುತ್ತಿದ್ದರೆ, ಕುಟುಂಬದ ಇತರ ಸದಸ್ಯರು ನೆಲ ಮಹಡಿಯಲ್ಲಿದ್ದರು. ಆರೋಪಿಯ ಅಜ್ಜಿಯನ್ನು ರೋಸಿ ಎಂದು ಗುರುತಿಸಲಾಗಿದೆ.

MOBILE USE

ರಾತ್ರಿ ಊಟದ ಬಳಿಕ ಆರೋಪಿ ಅಜ್ಜಿಯ ಬಳಿ ತೆರಳಿದ್ದು, ಈ ವೇಳೆ ಮೊಬೈಲ್ ಗಿಫ್ಟ್ ನೀಡುವಂತೆ ಅಜ್ಜಿಯನ್ನು ಕೇಳಿದ್ದಾನೆ. ಆದರೆ ಅಜ್ಜಿ ರೋಸಿ ಮೊಮ್ಮಗನ ಬೇಡಿಕೆಯನ್ನು ನಿರಾಕರಿಸಿದ್ದಾಳೆ. ಇದರಿಂದ ಕೋಪಿತನಾದ ಆರೋಪಿ ಅಜ್ಜಿಯನ್ನೇ ಕೊಲೆ ಮಾಡಿದ್ದಾನೆ. ಅಜ್ಜಿ ಮಲಗಿದ ಬಳಿಕ ಹೊಂಚು ಹಾಕಿ ಆಕೆಯ ತಲೆಯನ್ನೇ ಕತ್ತರಿಸಿ ಕೊಲೆ ಮಾಡಿದ್ದಾನೆ. ಅಲ್ಲದೆ ಕತ್ತರಿಸಿದ ತಲೆಯನ್ನು ಡೈನಿಂಗ್ ಟೇಬಲ್ ಮೇಲೆ ಇಟ್ಟು ವಿಕೃತಿ ಮೆರೆದಿದ್ದಾನೆ.

police 1 e1585506284178 2 medium

ಆರೋಪಿ ಡಯಾಸ್ ಸೋದರ ಸಂಬಂಧಿ ನೆಲ ಮಹಡಿಗೆ ಬಂದು ನೋಡಿದ್ದಾರೆ. ಈ ವೇಳೆ ಮನೆಯ ತುಂಬಾ ರಕ್ತ ಬಿದ್ದಿರುವುದನ್ನು ಗಮನಿಸಿದ್ದಾರೆ. ಬಳಿಕ ಡಯಾಸ್ ತಂದೆಯನ್ನು ಕರೆದಿದ್ದು, ಘಟನೆ ಕುರಿತು ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿ, ಕೊಲೆ ಪ್ರಕರಣ ದಾಖಲಿಸಿದ್ದಾರೆ. ನಂತರ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಅಕ್ಟೋಬರ್ 17ರ ವರೆಗೆ ನ್ಯಾಯಾಲಯ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

Share This Article