ಮುಂಬೈ: ಯುವಕನೊಬ್ಬ ಬಾಲಿವುಡ್ ನಟ ಅಜಯ್ ದೇವಗನ್ ಕಾರು ತಡೆದು ಕೃಷಿ ಕಾನೂನುಗಳ ವಿರುದ್ಧ ನೀವೇಕೆ ಪ್ರಶ್ನಿಸಿಲ್ಲ ಎಂದು ರಸ್ತೆ ಮಧ್ಯೆ ರಂಪಾಟ ಮಾಡಿರುವ ಘಟನೆ ಮುಂಬೈನಲ್ಲಿ ನಡೆದಿದೆ.
ರೈತರ ಪ್ರತಿಭಟನೆಯ ಕುರಿತು ಟ್ವೀಟ್ ಮಾಡುವ ಮೂಲಕವಾಗಿ ಹಲವು ತಾರೆಯರು ಗಮನ ಸೆಳೆದಿದ್ದರು. ರೈತರನ್ನು ಬೆಂಬಲಿಸಿ ಟ್ವೀಟ್ ಮಾಡಿದ ಪಾಪ್ ತಾರೆ ರಿಯಾನ್ ಅವರಿಗೆ ಅಜಯ್ ನಮ್ಮ ದೇಶದ ಆಂತರಿಕ ವಿಚಾರದಲ್ಲಿ ನೀವು ಮೂಗು ತೋರಿಸಬೇಡಿ ಎಂದಿದ್ದರು.
A visibly deranged man claiming to be a supporter of farmers, stops Ajay Devgn’s moving car and hurls expletives at him for urging farmers to not indulge in violence at the instigation of foreign forces. pic.twitter.com/yHDpaMc84x
— Sonam Mahajan (@AsYouNotWish) March 2, 2021
ಈ ವಿಚಾರವಾಗಿ ನೊಂದ ಯುವಕ ಅಜಯ್ ದೇವಗನ್ ಗೊರಗಾಂವ್ ಫಿಲ್ಮ್‍ಸಿಟಿ ಬಳಿ ಹೋಗುತ್ತಿರುವಾಗ ಕಾರ್ ತಡೆದು ನೀವು ರೈತ ಪ್ರತಿಭಟನೆಗೆ ಬೆಂಬಲ ನೀಡಿ. ನೀವು ನನ್ನೊಂದಿಗೆ ರೈತ ಪ್ರತಿಭಟನೆ ಕುರಿತಾಗಿ ಮಾತನಾಡಿ ಎಂದು ಒತ್ತಾಯಿಸಿದ್ದಾನೆ.
ಅಜಯ್ ಅವರ ಬಾಡಿಗಾರ್ಡ್ ಅತನನ್ನು ಪಕ್ಕಕ್ಕೆ ಸರಿಸಲು ಮುಂದಾದಾಗ ಯುವಕ ನೀವೆಲ್ಲಾ ಪಂಜಾಬ್ ವಿರೋಧಿಗಳು, ನಿಮ್ಮ ಬಗ್ಗೆ ನಾವು ನಾಚಿಕೆ ಪಡಬೇಕು. ಪಂಜಾಬ್ ಅನ್ನ ತಿಂದಿದ್ದೀರ ಈಗ ಹೀಗೆ ಅರಗಿಸಿಕೊಳ್ಳುತ್ತಿರಾ. ಸಿನಿಮಾದಲ್ಲಿ ಹೆಮ್ಮೆಯಿಂದ ಪೇಟ ಹಾಕುತ್ತೀರಾ ನಾಚಿಕೆಯಾಗಲ್ವ ನಿಮಗೆ. ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಯಾಕೆ ನೀವು ಟ್ವೀಟ್ ಮಾಡಿಲ್ಲ. ನನ್ನ ಮೇಲೆ ಕಾರ್ ಹತ್ತಿಸುತ್ತೀರಾ? ಇಳಿದು ಬಂದು ಮಾತನಾಡಿ ಎಂದು ರಂಪಾಟ ಮಾಡಿದ್ದಾನೆ.
ಈ ವಿಚಾರವಾಗಿ ಮಾಹಿತಿ ಪಡೆದ ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ ಆತನನ್ನು ವಶಕ್ಕೆ ತಡೆದಿದ್ದಾರೆ. ಆತನ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.