ಬೆಂಗಳೂರು: ಸಿಲಿಕಾನ್ ಸಿಟಿಯ ದಾಸರಳ್ಳಿ ಅಗ್ರಹಾರ ಸ್ಲಂ ಬೋರ್ಡ್ ಮನೆ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಮನೆ ಕಳೆದಕೊಂಡವರಿಂದ ನಿನ್ನೆ ಇಡೀ ರಾತ್ರಿ ಧರಣಿ ಮುಂದುವರಿಸಿದ್ದಾರೆ.
ಸುಮಾರು 16 ಕುಟುಂಬದ ಸದಸ್ಯರು ರಾತ್ರಿಯಿಡೀ ಬೀದಿಯಲ್ಲಿ ಚಳಿಯಲ್ಲಿಯೇ ಮಲಗಿದ್ದಾರೆ. ಸ್ಲಂ ಬೋರ್ಡ್ ನಿರ್ಮಾಣದ ಬಿಲ್ಡಿಂಗ್ ಮುಂದೆಯೇ ಮಲಗಿದ್ದಾರೆ. ಚಳಿಯ ನಡುವೆಯೇ ಪುಟ್ಟ ಪುಟ್ಟ ಮಕ್ಕಳ ಜೊತೆಗೆ ವಾಸ್ತವ್ಯ ಹೂಡಿದ್ದಾರೆ.
Advertisement
Advertisement
ಸದ್ಯ ಕೋರ್ಟ್ ಆದೇಶಕ್ಕಾಗಿ ಎದುರು ನೋಡ್ತಿದ್ದಾರೆ. ಕೋರ್ಟ್ ಆದೇಶ ನಂತರ ಎಲ್ಲವೂ ಇತ್ಯರ್ಥವಾಗುವ ಸಾಧ್ಯತೆ ಇದೆ. ಮಧ್ಯಾಹ್ನದ ಹೊತ್ತಿಗೆ ಕೋರ್ಟ್ ಆದೇಶ ಬರುವ ಸಾಧ್ಯತೆ ಇದೆ.
Advertisement
ಇಂದು ಸಂಜೆ ಒಳಗಡೆ ನ್ಯಾಯ ಸಿಗದಿದ್ರೆ ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಸಾಧ್ಯತೆ ಇದೆ. ನಮಗೆ ನ್ಯಾಯ ಬೇಕು, ಮನೆ ಬೇಕು ಸಿಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ತೀವಿ ಅಂತ ನಿನ್ನೆ ಮಹಿಳೆಯರು ಹೇಳಿದ್ದರು. ಅಲ್ಲದೆ ಮನೆಕಳೆದುಕೊಂಡ ಮಹಿಳೆಯರು ನಿನ್ನೆಯೇ ಆತ್ಮಹತ್ಯೆಗೆ ಯತ್ನಿಸಿದ್ದರು.
Advertisement
ಇಂದು ನ್ಯಾಯ ಸಿಗದಿದ್ದರೆ ಮನೆ ಕಳೆದುಕೊಂಡವರ ಮುಂದಿನ ಹೋರಾಟ ಯಾವ ರೀತಿ ಇರುತ್ತೋ ಕಾದು ನೋಡಬೇಕಿದೆ. ಇತ್ತ ಪೊಲೀಸರು ಕೂಡ ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ. ಹೆಚ್ಚಿನ ಭದ್ರತೆಗಾಗಿ ಇಡೀ ರಾತ್ರಿ ಸ್ಲಂ ನಿವಾಸಿಗಳ ಏರಿಯಾದಲ್ಲಿಯೇ ಪೊಲೀಸರು ಠಿಕಾಣಿ ಹೂಡಿದ್ದಾರೆ.