ಚಿಕ್ಕಮಗಳೂರು: ದಾನಿಗಳು ನೀಡಿದ ದಿನಸಿ ಕಿಟ್ ಸಂಗ್ರಹಿಸಿಟ್ಟುಕೊಂಡು ಬಡವರಿಗೂ ಸಿಗದಹಾಗೆ ಮಾಡುವ ಜನರಿದ್ದಾರೆ. ಆದರೆ ಈ ವಿಚಾರದಲ್ಲಿ ಮಂಗಳಮುಖಿಯರು ಮಾದರಿಯಾಗಿದ್ದು, ದಾನಿಗಳು ತಮಗೆ ನೀಡಿದ ಕಿಟ್‍ನ್ನು ಕಷ್ಟದಲ್ಲಿರುವವರಿಗೆ ನೀಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
Advertisement
ಲಾಕ್‍ಡೌನ್ ಹಿನ್ನೆಲೆ ಹಲವು ಜನ ಸಂಕಷ್ಟ ಎದುರಿಸುತ್ತಿದ್ದಾರೆ. ಹೀಗಾಗಿ ಧನವಂತರು ಬಡವರಿಗೆ ಸಹಾಯ ಮಾಡುತ್ತಿದ್ದಾರೆ, ಅದೇ ರೀತಿ ಮಂಗಳಮುಖಿಯರಿಗೂ ನೀಡಿದ್ದಾರೆ. ಆದರೆ ಮಂಗಳಮುಖಿಯರು ಸಾಮಾನ್ಯ ಜನರಂತೆ ಸಂಗ್ರಹಿಸಿಟ್ಟುಕೊಳ್ಳದೆ, ಬೇಕಾದಷ್ಟು ಇಟ್ಟುಕೊಂಡು ಉಳಿದಿದ್ದನ್ನು ಮತ್ತೊಬ್ಬರಿಗೆ ನೀಡುತ್ತಿದ್ದಾರೆ. ಸ್ವತಃ ಮಂಗಳಮುಖಿಯರೇ ಕಿಟ್‍ಗಳನ್ನು ಬಡವರಿಗೆ ಹಂಚುತ್ತಿದ್ದಾರೆ.
Advertisement
ಇಂತಹ ಕೆಲಸ ಸೇವೆಯಾಗಿರಬೇಕು, ಪ್ರಚಾರವಾಗಬಾರದು ಎಂದು ವಿಡಿಯೋ ಕೂಡ ಮಾಡಿಕೊಂಡಿಲ್ಲ. ತಮ್ಮ ನೆನಪು ಹಾಗೂ ಸಮಾಧಾನಕ್ಕಾಗಿ ಫೋಟೋ ಮಾತ್ರ ಕ್ಲಿಕ್ಕಿಸಿಕೊಂಡು ಯಾರಿಗೂ ಹೇಳದೆ ಏನೂ ಗೊತ್ತಿಲ್ಲದಂತೆ ಇದ್ದಾರೆ. ಜಿಲ್ಲೆಯ ಬಹುತೇಕ ಭಾಗಗಳಿಗೆ ತೆರಳಿ ಬಡವರಿಗೆ ಕಿಟ್ ಕೊಡುತ್ತಿದ್ದಾರೆ.
Advertisement
Advertisement
ಜಿಲ್ಲೆಯ ಮಂಗಳಮುಖಿಯರ ಮಡಿಲು ಸಂಘದಿಂದ ಕಿಟ್ ವಿತರಿಸುತ್ತಿದ್ದಾರೆ. ಕೊರೊನಾ ಆರಂಭವಾದಾಗಿನಿಂದ ಇವರು ಕಿಟ್ ವಿತರಿಸುತ್ತಿದ್ದು, ಇದು ಯಾರಿಗೂ ತಿಳಿದಿಲ್ಲ. ತಮಗೆ ಬೇಕಾದಷ್ಟು ದಿನಸಿ ಇಟ್ಟಿಕೊಂಡು ಇಳಿದದ್ದೆಲ್ಲವನ್ನೂ ದಾನ ಮಾಡಿದ್ದಾರೆ.