ಬೆಂಗಳೂರು: ಗಲಭೆ ವಿಚಾರಕ್ಕೆ ಸಂಬಂಧಿಸಿದಂತೆ ಇಂಥಾದ್ದೇ ಹೇಳಿಕೆ ಕೊಡಿ ಅಂತಾ ನಮ್ಮ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮೇಲೆ ಬಿಜೆಪಿ ಸರ್ಕಾರ ಒತ್ತಡ ಹೇರುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.
ಗಲಭೆಗೆ ಕಾಂಗ್ರೆಸ್ಸಿನಲ್ಲಿ ಆಂತರಿಕ ಭಿನ್ನಾಭಿಪ್ರಾಯಗಳೇ ಕಾರಣ ಎಂದಿದ್ದ ಗೃಹ ಸಚಿವರನ್ನು ಏಕ ವಚನದಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಮಾತು ಹೇಳಲು ಬೊಮ್ಮಾಯಿ ಯಾರು, ಅವರೇನು ಇನ್ಸ್‍ಪೆಕ್ಟರ್ರಾ..? ಆಯೋಗನಾ ಎಂದು ಪ್ರಶ್ನಿಸಿದ್ದಾರೆ. ಬಿಜೆಪಿಯವರ ಒಳ ತಂತ್ರದಿಂದಲೇ ಗಲಭೆ ನಡೆದಿದೆ ಎಂದು ತಿರುಗೇಟು ನೀಡಿದ್ದಾರೆ. ಪಾಲಿಕೆ ಸದಸ್ಯರಿಗೆ ನೊಟೀಸ್ ಕೊಟ್ಟು ಬ್ಲಾಕ್‍ಮೇಲ್ ಮಾಡುತ್ತಿದ್ದಾರೆ. ನಾವಿದಕ್ಕೆ ಹೆದರುವ ಪ್ರಶ್ನೆಯೇ ಇಲ್ಲ ಎಂದು ಡಿಕೆಶಿ ಸ್ಪಷ್ಟಪಡಿಸಿದ್ದಾರೆ. ಈ ಸರ್ಕಾರದಲ್ಲಿ ಒಬ್ಬ ಸಚಿವ, ಶಾಸಕನನ್ನು ನಿಯಂತ್ರಿಸಲು ಅವರಿಂದಲೇ ಸಾಧ್ಯ ಆಗ್ತಿಲ್ಲ ಎಂದು ಸರ್ಕಾರವನ್ನು ಡಿಕೆಶಿ ಟೀಕಿಸಿದ್ದಾರೆ.
Advertisement
ಕೆಪಿಸಿಸಿಯಿಂದ ರಚಿಸಲಾದ ಸತ್ಯ ಶೋಧನಾ ಸಮಿತಿಯಿಂದ ಪುಲಕೇಶಿ ನಗರ ಕ್ಷೇತ್ರದ ಗಲಭೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಾಗಿದೆ.
ನವೀನ್ ಎಂಬ ವ್ಯಕ್ತಿ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ವಿರುದ್ದ ಅವಹೇಳನಕಾರಿ ಪೋಸ್ಟ್ ನ್ನು ಪ್ರಕಟಿಸಿದ ಹಿನ್ನೆಯಲ್ಲಿ ಗಲಭೆ ನಡೆದಿದೆ ಎನ್ನುವುದು ಮೇಲ್ನೋಟಕ್ಕೆ ಕಾಣುತ್ತಿದೆ.
– @DrParameshwara pic.twitter.com/1mNMu5UEzu
— Karnataka Congress (@INCKarnataka) August 15, 2020
Advertisement
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ನೊಟೀಸ್ ಕೊಟ್ರೆ ತಪ್ಪೇನು? ತಪ್ಪು ಮಾಡದಿದ್ರೆ ಏಕೆ ಹೆದರಬೇಕು? ನಾವು ಯಾರನ್ನು ಬ್ಲಾಕ್ ಮೇಲೆ ಮಾಡ್ತಿಲ್ಲ ಎಂದಿದ್ದಾರೆ. ಶಾಸಕರು ಭದ್ರತೆ ಕೇಳಿದ್ದಾರೆ. ಕೊಟ್ಟಿದ್ದೀವಿ ಅಷ್ಟೇ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.
Advertisement
ಗಲಭೆಯನ್ನು ತಡೆಯುವಲ್ಲಿ @BJP4Karnataka ಸರ್ಕಾರ, ಗೃಹ ಇಲಾಖೆ ಸಂಪೂರ್ಣ ವಿಫಲವಾಗಿದೆ. ಇದನ್ನು ಮರೆ ಮಾಚಲು ಘಟನೆಯನ್ನು ಕಾಂಗ್ರೆಸ್ ಜೊತೆಗೆ ತಳಕು ಹಾಕಲಾಗುತ್ತಿದೆ.
ಈ ಬಗ್ಗೆ ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು, ತಪ್ಪಿತಸ್ಥರು ಯಾರೇ ಇದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು.
– @DrParameshwara pic.twitter.com/2VQWWlt6TF
— Karnataka Congress (@INCKarnataka) August 15, 2020
Advertisement
ಇನ್ನು ಡಿಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಶಾಸಕ ಅಖಂಡ ಶ್ರೀನಿವಾಸಮೂರ್ತಿ, ನನ್ನ ಮೇಲೆ ಯಾರು ಒತ್ತಡ ಹಾಕಿಲ್ಲ. ಅವರು ಯಾಕೆ ಆ ರೀತಿ ಹೇಳಿದ್ರೋ ಗೊತ್ತಿಲ್ಲ ಎಂದಿದ್ದಾರೆ. ಇದೇ ವೇಳೆ, ತಮಗೆ ಸರ್ಕಾರ ಇನ್ನೂ ರಕ್ಷಣೆ ಒದಗಿಸಿಲ್ಲ ಅಂತಲೂ ಅಸಮಾಧಾನ ಹೊರಹಾಕಿದ್ದಾರೆ. ಇದಕ್ಕೂ ಮುನ್ನ ಶಾಸಕ ಅಖಂಡಗೆ ಮೆಲುದನಿಯಲ್ಲಿ, ಒತ್ತಡದ ಬಗ್ಗೆ ಮಾತಾಡ್ಬೇಡ ಅಂತಾ ಡಿಕೆಶಿ ಸೂಚನೆ ನೀಡಿದ್ರು. ಆದ್ರೆ ಡಿಕೆಶಿ ಮಾತನ್ನು ಶಾಸಕ ಅಖಂಡ ಪರಿಗಣಿಸಲ್ಲ. ಇನ್ನು ಗೃಹಸಚಿವರ ವಿರುದ್ಧ ಏಕವಚನ ಪದ ಪ್ರಯೋಗಕ್ಕೆ ಡಿಕೆಶಿ ಸಂಜೆ ವಿಷಾದ ವ್ಯಕ್ತಪಡಿಸಿದ್ದಾರೆ. ಗೃಹ ಸಚಿವರ ಹುದ್ದೆ ಬಗ್ಗೆ ತಮಗೆ ಗೌರವವಿದೆ. ಮಾತನಾಡುವ ಭರದಲ್ಲಿ ತಪ್ಪಾಗಿದೆ ಅಂತಲೂ ಸ್ಪಷ್ಪಪಡಿಸಿದ್ದಾರೆ.