ಅಕ್ರಮ ಸಂಬಂಧ ಉಳಿಸಿಕೊಳ್ಳಲು ತನ್ನ ರೂಮಿಂದ ಪ್ರೇಯಸಿ ಕೋಣೆಗೆ ಸುರಂಗ ತೋಡಿದ!

Public TV
2 Min Read
TUNNEL

– ವ್ಯಕ್ತಿ ಹಾಗೂ ಮಹಿಳೆ ಇಬ್ಬರೂ ವಿವಾಹಿತರಾಗಿದ್ರು
– ಮಹಿಳೆಯ ಪತಿ ನೈಟ್ ಶಿಫ್ಟ್ ಕೆಲಸಕ್ಕೆ ಹೋಗ್ತಿದ್ದಾಗ ಭೇಟಿ
– ಪ್ರಕರಣ ಬೆಳಕಿಗೆ ಬಂದಿದ್ದೇಗೆ..?

ವಾಷಿಂಗ್ಟನ್: ಪ್ರೀತಿ ಮಾಡಿದ ಗೆಳತಿಗೆ ಚಾಕ್ಲೇಟ್, ಗ್ರೀಟಿಂಗ್, ಗಿಫ್ಟ್ ಗಳನ್ನು ಕೊಡುವುದನ್ನು ನೋಡಿದ್ದೇವೆ. ಆದ್ರೆ ಇಲ್ಲೊಬ್ಬ ವ್ಯಕ್ತಿ ತನ್ನ ಪ್ರೇಯಸಿಯೊಂದಿಗಿನ ಅಕ್ರಮ ಸಂಬಂಧಕ್ಕಾಗಿ ನೂರಾರು ಮೀಟರ್ ಸುರಂಗವನ್ನೇ ತೊಡಿದ್ದು, ಭಾರೀ ಸುದ್ದಿಯಲ್ಲಿದ್ದಾನೆ.

ಹೌದು. ಅಕ್ರಮ ಸಂಬಂಧ ಉಳಿಸಿಕೊಳ್ಳುವ ಸಲುವಾಗಿ ವ್ಯಕ್ತಿಯೊಬ್ಬ ತನ್ನ ಪ್ರೇಯಸಿಯನ್ನು ಪ್ರತಿನಿತ್ಯ ಭೇಟಿ ಮಾಡಲು ಸುರಂಗ ಮಾರ್ಗವನ್ನೇ ನಿರ್ಮಿಸಿದ್ದಾನೆ. ಈ ಘಟನೆ ಮೆಕ್ಸಿಕೋದಲ್ಲಿ ನಡೆದಿದೆ.

teenage couple love marrige

ಆಲ್ಬರ್ಟೊ ಎಂಬ ವಿವಾಹಿತ ವ್ಯಕ್ತಿ ಮತ್ತು ವಿವಾಹಿತ ಮಹಿಳೆ ಇಬ್ಬರೂ ತಿಜುವಾನಾದ ಅಕ್ಕಪಕ್ಕದ ನಿವಾಸಿಗಳು. ಈ ಇಬ್ಬರ ನಡುವೆ ಪರಿಚಯವಾಗಿದೆ. ಮಹಿಳೆಯ ಪತಿ ಜಾರ್ಜ್ ಸೆಕ್ಯೂರಿಟಿ ಗಾರ್ಡ್ ಆಗಿ ನೈಟ್ ಶಿಫ್ಟ್ ಗಳಲ್ಲಿ ಕೆಲಸ ಮಾಡುತ್ತಿದ್ದನು. ಪತಿ ಇಲ್ಲದ ಸಮಯದಲ್ಲಿ ಪಕ್ಕದ ಮನೆಯ ಆಲ್ಬರ್ಟೊ ಮಹಿಳೆಯನ್ನು ಭೇಟಿ ಮಾಡಲು ತನ್ನ ಪತ್ನಿಗೆ ತಿಳಿಯದಂತೆ ಆಗಾಗ ಬರುತ್ತಿದ್ದನು. ಅಲ್ಲದೆ ಆಲ್ಬರ್ಟೊ ಆಕೆಯನ್ನು ಭೇಟಿ ಮಾಡಲು ಇನ್ನೂ ಸುಲಭವಾಗಲಿ ಎಂದು ತನ್ನ ಮನೆಯ ರೂಮ್‍ನಿಂದ ಆಕೆಯ ಮನೆಯ ರೂಮ್ ವರೆಗೆ ಸುರಂಗ ತೋಡಿದ್ದಾನೆ. ಹೀಗೆ ಇಬ್ಬರೂ ವರ್ಷಗಟ್ಟಲೆ ಅಕ್ರಮ ಸಂಬಂಧವನ್ನು ಮುಂದುವರಿಸಿದ್ದರು.

COUPLE

ಒಂದು ದಿನ ಮಹಿಳೆಯ ಪತಿ ಜಾರ್ಜ್ ಪತ್ನಿಗೆ ಮಾಹಿತಿ ನೀಡದೇ ಬೇಗ ಮನೆಗೆ ಬಂದಿದ್ದಾನೆ. ಈ ವೇಳೆ ಪತ್ನಿ ಯಾರೊಂದಿಗೋ ಜೋರಾಗಿ ಮಾತನಾಡುತ್ತಿರುವುದನ್ನು ಹೊರಗಡೆ ನಿಂತು ಕೇಳಿಸಿಕೊಂಡಿದ್ದಾನೆ. ಇನ್ನೂ ಮನೆಯೊಳಗಡೆ ಬಂದ ತಕ್ಷಣ ಮನೆಯಲ್ಲೆಲ್ಲ ಹುಡುಕಲು ಆರಂಭಿಸಿದನು. ಆಗ ಸೋಫಾದ ಹಿಂದೆ ಏನೋ ಇರುವುದನ್ನು ನೋಡಿ ಪರಿಶೀಲಿಸಿದಾಗ ಸುರಂಗ ಮಾರ್ಗ ಇರುವುದು ಗೊತ್ತಾಗಿದೆ. ಅಚ್ಚರಿಗೊಂಡ ಜಾರ್ಜ್, ಅದರೊಳಗಿನಿಂದ ಇಳಿದು ಮುಂದೆ ಸಾಗಿದಾಗ ಪಕ್ಕದ ಮನೆಯವರ ಬೆಡ್ ರೂಂಗೆ ಸಂಪರ್ಕ ಹೊಂದಿತ್ತು. ಇದನ್ನು ಕಂಡ ಪತಿಗೆ ಪತ್ನಿಯ ಅಕ್ರಮ ಸಂಬಂಧದ ಸತ್ಯ ಖಚಿತವಾಯಿತು.

ROOM

ಮೆಕ್ಸಿಕೋ ದೇಶಕ್ಕೆ ಬರುವುದಕ್ಕೂ ಮುನ್ನ ಜಾರ್ಜ್ ಪೆರು ದೇಶದಲ್ಲಿದ್ದು, ಒಮ್ಮೆ ಗೂಗಲ್ ಮ್ಯಾಪ್ ಉಪಯೋಗಿಸುವಾಗ ತಾಂತ್ರಿಕ ಸಮಸ್ಯೆ ಕಂಡುಬಂದು ಗೂಗಲ್ ಸ್ಟೀವ್ ವ್ಯೂನಲ್ಲಿ ದಾರಿ ಹುಡುಕುತ್ತಾ ಬರುತ್ತಿದ್ದ. ಈ ವೇಳೆ ಪ್ರೇಯಸಿಯೊಬ್ಬಳು ತ್ನನ ಪ್ರಿಯಕರನೊಂದಿಗೆ ಕುಳಿತಿರುವ ಕುತೂಹಲಕಾರಿ ಫೋಟೋ ಕಾಣಿಸಿತ್ತು. ಅದನ್ನು ಝೂಮ್ ಮಾಡಿ ನೋಡಿದಾಗ ಅದು ಈತನ ಪತ್ನಿಯೇ ಆಗಿದ್ದಳು. ಅದನ್ನು ನೋಡಿದ ಜಾರ್ಜ್, ತನ್ನ ಪತ್ನಿಯ ಅಕ್ರಮ ಸಂಬಂಧ ಇಂಟರ್ನೆಟ್ ನಲ್ಲಿಯೇ ಬಂದಿದೆಯಲ್ಲಾ ಎಂದು ದೇಶವನ್ನೇ ತೊರೆದು ಪತ್ನಿ ಜೊತೆಗೆ ಇರಲು ಮೆಕ್ಸಿಕೋಗೆ ಬಂದಿದ್ದಾನೆ. ಆದರೆ ಆಕೆ ಇಲ್ಲೂ ಕೂಡ ಮತ್ತೊಬ್ಬನ ಜೊತೆ ಸುರಂಗ ಮಾರ್ಗದ ಮೂಲಕ ಅಕ್ರಮ ಸಂಬಂಧ ಹೊಂದಿದ್ದು ನೋಡಿ ದಿಗ್ಭ್ರಾಂತನಾಗಿದ್ದಾನೆ.

room e1559542923353

Share This Article
Leave a Comment

Leave a Reply

Your email address will not be published. Required fields are marked *