ಯಾದಗಿರಿ: ರಾಯಚೂರು ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಲಾಕ್‍ಡೌನ್ ಘೋಷಣೆ ಮಾಡಲಾಗಿದೆ. ಮದ್ಯ ಸಿಗದಿರುವ ಕಾರಣ ಎರಡು ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟ ಮತ್ತು ಸಾಗಾಟ ಹೆಚ್ಚಾಗಿದೆ. ವಿಜಯಪುರದಿಂದ ರಾಯಚೂರು ಮತ್ತು ಯಾದಗಿರಿಗೆ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ದಂಧೆಕೊರರನ್ನು ಸೆರೆ ಹಿಡಿಯುವಲ್ಲಿ ಯಾದಗಿರಿ ಪೊಲೀಸರು ಯಶಸ್ವಿಯಾಗಿದ್ದಾರೆ.
ವಿಜಯಪುರದಿಂದ ಅಕ್ರಮವಾಗಿ ಮದ್ಯ ಸಾಗಾಣಿಕೆ ಖಚಿತ ಮಾಹಿತಿ ಪಡೆದ ಹುಣಸಗಿ ಸಿಪಿಐ ದೌಲತ್ ಕುರಿ ನೇತೃತ್ವದ ತಂಡ, ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಚೆಕ್ ಪೊಸ್ಟ್ ನಲ್ಲಿ ಅಕ್ರಮದಂಧೆಕೊರರನ್ನು ಬಂಧಿಸಿದ್ದಾರೆ. ಬಂಧಿತರಿಂದ ಲಕ್ಷಾಂತರ ರೂ ಬೆಲೆಬಾಳುವ ಮದ್ಯ ಜಪ್ತಿ ಮಾಡಿಕೊಂಡಿದೆ.
ಅಕ್ರಮ ದಂಧೆಕೊರರು ರಾಯಚೂರು ಜಿಲ್ಲೆಯ ಮಸ್ಕಿ, ಕವಿತಾಳ ಮೂಲದವರಾಗಿದ್ದಾರೆ. ವಿಜಯಪುರದಿಂದ ರಾಯಚೂರಿಗೆ ಮದ್ಯ ಕಳ್ಳಸಾಗಣೆ ಮಾಡುತ್ತಿದ್ದ ವೇಳೆ ಯಾದಗಿರಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಒಟ್ಟು 13 ಜನ ಆರೋಪಿಗಳ ಬಂಧನವಾಗಿದ್ದು, 38 ಮದ್ಯದ ಬಾಟಲ್, 4 ಕಾರು ಜಪ್ತಿ ಮಾಡಲಾಗಿದೆ. ನಾರಾಯಣಪುರ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.