– ದಾಳಿ ಹೆಸರಲ್ಲಿ ದುಡ್ಡು ವಸೂಲಿಗೆ ಹೋಗಿರ್ಬೇಕು, ಹೆಚ್‍ಡಿಕೆ ಕಿಡಿ
ಮಂಡ್ಯ: ಕನ್ನಂಬಾಡಿ ಅಣೆಕಟ್ಟು ವಿಷಯದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಮಂಡ್ಯ ಸಂಸದೆ ಸುಮಲತಾ ನಡುವಿನ ನೇರ ಸಂಘರ್ಷ ಇನ್ನಷ್ಟು ತೀವ್ರಗೊಂಡಿದೆ. ಅಕ್ರಮ ಕಲ್ಲುಗಣಿಗಾರಿಕೆ ಬಗ್ಗೆ ಸಿಬಿಐ ತನಿಖೆಗೆ ಆಗ್ರಹಿಸಿರುವ ಸುಮಲತಾ ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದ್ದಾರೆ.
ಶ್ರೀರಂಗಪಟ್ಟಣ ತಾಲೂಕಿನ ಚೆನ್ನನಕೆರೆ ಮತ್ತು ಹಂಗರಹಳ್ಳಿಯಲ್ಲಿ ನಡೆಯುತ್ತಿದ್ದ ಗಣಿಗಾರಿಕೆ ವೀಕ್ಷಣೆಗೆ ಹೋಗದಂತೆ ಅಡ್ಡಿಪಡಿಸಿದ್ದನ್ನು ನೋಡಿ ಸುಮಲತಾ, ಇದೇನ್ ಭಾರತ-ಪಾಕಿಸ್ತಾನ ಗಡಿನಾ ಎಂದು ಆಘಾತ ವ್ಯಕ್ತಪಡಿಸಿದ್ದಾರೆ. ಗಣಿಗಾರಿಕೆಯಿಂದ ಬಿರುಕು ಬಿಟ್ಟಿರುವ ಊರವರ ಮನೆಗಳನ್ನು ನೋಡಿ ಶಾಕ್ ಆದರು. ಅಕ್ರಮ ಗಣಿಗಾರಿಕೆ ಬಗ್ಗೆ ಮಾತಾಡುವ ವೇಳೆ ವಿಷಯವನ್ನು ಬೇರೆಡೆಗೆ ತಿರುಗಿಸುವ ಯತ್ನ ಮಾಡಲಾಗ್ತಿದೆ…? ಶಾಸಕರಿಗೆ ನಿಮ್ಮ ಕೊಡುಗೆ ಏನು..? ನಿಮ್ಮ ಕಣ್ಣ ಮುಂದೆಯೇ ಇಷ್ಟು ಭ್ರಷ್ಟಾಚಾರ, ಅನ್ಯಾಯ ನಡೆಯುತ್ತಿದ್ದರೂ ಏಕೆ ಸುಮ್ಮನಿದ್ದೀರಿ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯಗೆ ತಿರುಗೇಟು ನೀಡಿದ್ದಾರೆ. ಆದ್ರೆ ಸಂಸದೆ ಬೇಬಿ ಬೆಟ್ಟಕ್ಕೆ ಭೇಟಿ ನೀಡಲಿಲ್ಲ. ಇದನ್ನೂ ಓದಿ: ಹೆಣ್ಣಿನ ಬಗ್ಗೆ ಹೇಗೆ ಮಾತಾಡ್ಬೇಕು ಅಂತ ಮಾಜಿ ಸಿಎಂ ಅರ್ಥ ಮಾಡಿಕೊಳ್ಳಬೇಕು: ಸುಮಲತಾ ಕಿಡಿ
ಇನ್ನು ಶ್ರೀರಂಗಪಟ್ಟಣದಲ್ಲಿ ಸಂಸದೆ ಕಾರಿಗೆ ಮುತ್ತಿಗೆ ಹಾಕಿದ ಶಾಸಕರ ಬೆಂಬಲಿಗರು ಮಾಜಿ ಶಾಸಕ ಬಂಡಿಸಿದ್ದೇಗೌಡ ಮಾಲೀಕತ್ವದ ಗಣಿಗಾರಿಕೆಗೂ ಭೇಟಿ ನೀಡುವಂತೆ ಘೋಷಣೆ ಕೂಗಿದರು. ಆ ಬಳಿಕ ಬಂಡಿಸಿದ್ದೇಗೌಡ ಮಾಲೀಕತ್ವದ ಗಣಿಗಾರಿಕೆಗೂ ಸುಮಲತಾ ಭೇಟಿ ನೀಡಿ ಪರಿಶೀಲಿಸಿದರು. ಇದನ್ನೂ ಓದಿ: ನಾನು ಕ್ಷಮೆ ಕೇಳೋದಿಲ್ಲ ಸುಮಲತಾ ಕುತಂತ್ರಿ: ಎಚ್‍ಡಿಕೆ
ಇನ್ನು ಸುಮಲತಾ ಮತ್ತು ಕುಮಾರಸ್ವಾಮಿ ನಡುವಿನ ವಾಕ್ಸಮರ ಮುಂದುವರಿದಿದೆ. ತಮ್ಮನ್ನು ಭ್ರಷ್ಟಾಚಾರದ ರಾಯಭಾರಿ, ಡೀಲ್ ಮಾಸ್ಟರ್, ಚೈಲ್ಡಿಶ್ ಎಂದು ಕರೆದಿರುವ ಸುಮಲತಾಗೆ ಕುಮಾರಸ್ವಾಮಿ ‘ಗಣಿ ಮಾಲೀಕರಿಂದ ಹಣ ವಸೂಲಿಗೆ ಹೋಗಿರಬಹುದು’ ತಿರುಗೇಟು ನೀಡಿದ್ದಾರೆ. ಪ್ರಜ್ವಲ್ ರೇವಣ್ಣ ಭವಿಷ್ಯದ ಬಗ್ಗೆ ಮಾತಾಡಲು ಸುಮಲತಾ ಏನು ಜ್ಯೋತಿಷಿನಾ ಎಂದು ಮಾಜಿ ಪ್ರಧಾನಿ ದೇವೇಗೌಡರು ಟಾಂಗ್ ನೀಡಿದ್ದಾರೆ. ಇದನ್ನೂ ಓದಿ: ಮಾಜಿ ಸಿಎಂ ಹೆಚ್‍ಡಿಕೆ ಪ್ರತಿಯೊಂದು ಕೆಲಸದಲ್ಲಿ ಡೀಲ್ ಮಾಡುವ ಮಾಸ್ಟರ್: ಸುಮಲತಾ ಅಂಬರೀಶ್