– ಇದ್ರಲ್ಲಿ ಪ್ರಭಾವಿಗಳ ಕೈವಾಡ ಇದೆ
ಶಿವಮೊಗ್ಗ: ಸಿಎಂ ತವರು ಜಿಲ್ಲೆಯಲ್ಲಿ ಅಕ್ರಮ ಕ್ರಷರ್ ಮಾಫಿಯಾ ನಡೆಯುತ್ತಿರುವುದು ಬಯಲಾಗಿದೆ. ನಿನ್ನೆ ರಾತ್ರಿ 10.30ರ ಸಮಯಕ್ಕೆ ಏಕಾಏಕಿ ಭಾರೀ ಶಬ್ದಕ್ಕೆ ಜಿಲ್ಲೆಯ ಜನ ಬೆಚ್ಚಿಬಿದ್ದಿದ್ದಾರೆ. ಬಳಿಕ ಇದು ಅಕ್ರಮ ಕ್ರಷರ್ ನಲ್ಲಿ ಜಿಲೆಟಿನ್ ಕಡ್ಡಿಗಳು ಒಮ್ಮೆಲೆ ಸ್ಫೋಟಗೊಂಡಿದ್ದು ಎಂಬುದಾಗಿ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಇದೀಗ ಹುಣಸೋಡು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
ಅಕ್ರಮ ಕ್ರಷರ್ ನಿಲ್ಲಿಸಿ, ನಮ್ಮನ್ನು ಕಾಪಾಡಿ. ನಮ್ಮನ್ನು ಹಾಗೂ ನಮ್ಮ ಬದುಕನ್ನು ಕಾಪಾಡಿ. ಇದರಲ್ಲಿ ಪ್ರಭಾವಿಗಳ ಕೈವಾಡ ಇದೆ. ನಮ್ಮನ್ನು ಇಲ್ಲೆಲ್ಲಿಗೂ ಬಿಟ್ಟುಕೊಳ್ಳಲ್ಲ ಯಾಕೆ..? ಸತ್ತವರು ಮನುಷ್ಯರಲ್ವಾ ಎಂದು ಪ್ರಶ್ನಿಸುವ ಮೂಲಕ ಪೊಲೀಸರ ವಿರುದ್ಧವೂ ಆಕ್ರೋಶ ಹೊರಹಾಕಿದ್ದಾರೆ.
Advertisement
Advertisement
ಶಿವಮೊಗ್ಗದ ಸುತ್ತಮುತ್ತ ಪ್ರದೇಶಗಳಾದ ಅಬ್ಬಲಗೆರೆ ಪಂಚಾಯತಿ, ಕಲ್ಲುಗಂಗೂರು ಗ್ರಾಮ, ಹುಣಸೋಡು, ಬಸವನಗಂಗೂರು, ಮತ್ತೋಡು, ಗೆಜ್ಜೆನಹಳ್ಳಿ ಎಲ್ಲಿ ನೊಡಿದ್ರೂ ಅಕ್ರಮ ಕ್ರಷರ್‍ಗಳ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಇಲ್ಲಿನ ಇಡೀ ಪರಿಸರ ಸಂಪೂರ್ಣ ಸರ್ವನಾಶವಾಗಿದೆ. ಸದ್ಯ ನಡೆದ ಈ ಘನಘೋರ ದುರಂತಕ್ಕೆ ಯಾರು ಹೊಣೆ? ಜಲ್ಲಿ ಕ್ರಷರ್‍ಗಳ ಹಿಂದೆ ಜಿಲ್ಲೆಯ ಪ್ರಭಾವಿಗಳ ಪಾತ್ರವಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
Advertisement
ಘಟನೆಯಲ್ಲಿ 15 ಮಂದಿ ಕಾರ್ಮಿಕರು ಬಲಿಯಾಗಿರುವ ಶಂಕೆ ವ್ಯಕ್ತವಾಗಿದೆ. ಇನ್ನು ದುರಂತ ಸಂಬಂಧ ನಿನ್ನೆ ರಾತ್ರಿ ಶಿವಮೊಗ್ಗ ಜಿಲ್ಲಾಧಿಕಾರಿ ಶಿವಕುಮಾರ್ ಪ್ರತಿಕ್ರಿಯಿಸಿ, ಶಿವಮೊಗ್ಗದ ಅಬಲಗೇರೆ ಬಳಿ ಗಣಿಗಾರಿಕೆ ನಡೆಯುವ ಸ್ಥಳದಲ್ಲಿ ಜಿಲೆಟಿನ್ ಕಡ್ಡಿ ತುಂಬಿದ ಲಾರಿ ಸ್ಪೋಟ್ ಅಗಿರುವ ಬಗ್ಗೆ ಶಂಕೆಯಿದೆ. ಸದ್ಯಕ್ಕೆ ಲಾರಿಯೊಂದು ಸುಟ್ಟಿದೆ ಕೆಲವೂಂದು ಮೃತದೇಹಗಳು ಪತ್ತೆಯಾಗಿವೆ. ರಾತ್ರಿ ಸುಮಾರು 10-30ರ ವೇಳೆಗೆ ದೊಡ್ಡ ಶಬ್ದವೂಂದು ಕೇಳಿಬಂದಿದೆಯೆಂದು ಸಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು. ಈ ಹಿನ್ನೆಲೆ ಸ್ಥಳಕ್ಕೆ ಬಂದಿ ಪರಿಶೀಲನೆ ಮಾಡಿದ ಬಳಿಕ ನಮಗೆ ಇಷ್ಟೂ ಮಾಹಿತಿ ತಿಳಿದಿದೆ. ಸದ್ಯಕ್ಕೆ ಕತ್ತಲೆಯಾಗಿರುವ ಕಾರಣ ಯಾವುದರ ಬಗ್ಗೆ ನಿಖರ ಮಾಹಿತಿ ನೀಡಲು ಸಾಧ್ಯವಿಲ್ಲ. ನಾಳೆ ಬೆಂಗಳೂರಿನಿಂದ ವಿಧಿವಿಜ್ಞಾನ ತಂಡ ಹಾಗೂ ಸಿಆರ್‍ಎಫ್ ತಂಡ ಅಗಮಿಸಲಿದೆ. ಬಳಿಕ ವಷ್ಟೇ ಮಾಹಿತಿ ನೀಡಲು ಸಾಧ್ಯವೆಂದು ಹೇಳಿದ್ದರು.