ತುಮಕೂರು: ಮಹಾರಾಷ್ಟ್ರದಿಂದ ತಮಿಳುನಾಡಿನ ಸೇಲಂಗೆ ಅಕ್ರಮವಾಗಿ ಸಾಗಿಸುತ್ತಿದ್ದ ಒಂಟೆಗಳನ್ನು ರಕ್ಷಣೆ ಮಾಡಲಾಗಿದೆ.
ಖಚಿತ ಮಾಹಿತಿ ಪಡೆದ ತುಮಕೂರಿನ ಭಗತ್ ಕ್ರಾಂತಿ ಸೇನೆ ಯುವಕರ ತಂಡ ಶಿರಾ ತಾಲೂಕು ಕಳ್ಳಂಬೆಳ್ಳ ಬಳಿಯ ಕರೇಜವನಹಳ್ಳಿ ಟೋಲ್ ನಿಂದ ಲಾರಿಯನ್ನು ಹಿಂಬಾಲಿಸಿ ಕೊನೆಗೆ ತುಮಕೂರಿನ ಕ್ಯಾತ್ಸಂದ್ರ ಬಳಿ ಲಾರಿಯನ್ನು ತಡೆದಿದ್ದಾರೆ. ಭಗತ್ ಕ್ರಾಂತಿ ಸೇನೆಯ ಯುವಕರು ಒಟ್ಟು ಒಂಬತ್ತು ಒಂಟೆಗಳನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಸಂಬಂಧ ತುಮಕೂರಿನ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಒಂಟೆಗಳ ರಕ್ಷಣೆ ಕಾರ್ಯಾಚರಣೆಯಲ್ಲಿ ಭಗತ್ ಕ್ರಾಂತಿ ಸೇನೆ ಕಾರ್ಯಕರ್ತರಾದ ಆರಾಧ್ಯ ಮಂಚಲದೊರೆ, ರಾಧಾಕೃಷ್ಣ ನವಚೇತನ್ ನಾಗೇಶ್ ರಾಕೇಶ್ ರಾಜು ಮುಂತಾದವರು ಭಾಗಿಯಾಗಿದ್ದರು. ಇದನ್ನೂ ಓದಿ: ಅಕ್ರಮವಾಗಿ ಬೆಳೆದಿದ್ದ 50 ಕೆ.ಜಿ.ಗಾಂಜಾ ವಶ- ಜಮೀನು ಮಾಲೀಕನ ಬಂಧನ