ಹಾಸನ: ಶಿವಮೊಗ್ಗ ಕ್ವಾರೆಯೊಂದರಲ್ಲಿ ನಡೆದ ಸ್ಫೋಟದ ನಂತರ ಹಾಸನ ಜಿಲ್ಲೆಯ ಪೊಲೀಸರು ಎಚ್ಚೆತ್ತಿದ್ದಾರೆ. ಐ.ಎಸ್.ಡಿ. ಹಾಗೂ ಗೊರೂರು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಜಿಲೆಟಿನ್ ಹಾಗೂ ಇತರೆ ವಸ್ತಗಳನ್ನು ವಶಪಡಿಸಿಕೊಂಡಿದ್ದಾರೆ.
ಹಾಸನ ತಾಲೂಕಿನ ಕಟ್ಟಾಯ ಹೋಬಳಿ ಇಂದ್ರಾಪುರ ಗ್ರಾಮದ ಬಳಿಯಿರುವ ಕ್ವಾರೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ 1,200 ಜಿಲೆಟಿನ್ ಟ್ಯೂಬ್, 2 ಡೀಟೇನೆಟರ್, 10 ಕೆಜಿ ಅಮೋನಿಯಂ ನೈಟ್ರೆಟ್, ಕನೆಕ್ಟಿಂಗ್ ವೈರ್ ಗಳು ವಶಪಡಿಸಿಕೊಳ್ಳಲಾಗಿದೆ. ಹನುಮಂತಪುರದ ಮಂಜೇಗೌಡ ಎಂಬವರಿಗೆ ಸೇರಿದ ಕ್ವಾರೆ ಇದಾಗಿದ್ದು ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement
Advertisement
ಐ.ಎಸ್.ಡಿ. ಮೈಸೂರು ವಿಭಾಗದ ಡಿ.ಎಸ್.ಪಿ. ಪ್ರಭಾಕರ್ ರಾವ್ ಸಿಂದೆ, ಹಾಸನ-ಕೊಡಗು ಪಿಐ ಗೋಪಾಲಕೃಷ್ಣ, ಹಾಸನ ವೃತ್ತ ನಿರೀಕ್ಷಕ ಸುರೇಶ್, ಗೊರೂರು ಠಾಣೆ ಪಿ.ಎಸ್.ಐ. ಸಾಗರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
Advertisement