ಭೋಪಾಲ್: ಕೋವಿಡ್-19 ರೋಗಿಗಳ ಚಿಕಿತ್ಸೆಗೆಂದು ರೆಮ್ ಡಿಸಿವರ್ ಚುಚ್ಚುಮದ್ದುಗಳನ್ನು ಆಕ್ರಮವಾಗಿ ಮಾರಾಟ ಮಾಡುತ್ತಿದ್ದ ಮೆಡಿಕಲ್ ಶಾಪ್ ಮಾಲೀಕ ಹಾಗೂ ಮತ್ತಿಬ್ಬರನ್ನು ಮಧ್ಯಪ್ರದೇಶದ ಪೊಲೀಸರ ವಿಶೇಷ ಕಾರ್ಯಪಡೆ(ಎಸ್‍ಟಿಎಫ್) ಗುರುವಾರ ಬಂಧಿಸಿದೆ.
ಆರೋಪಿಗಳನ್ನು ರಾಜೇಶ್ ಪಟಿದಾರ್, ಜ್ಞಾನೇಶ್ವರ ಬಾರಸ್ಕರ್ ಮತ್ತು ಅನುರಾಗ್ ಸಿಂಗ್ ಸಿಸೋಡಿಯಾ ಎಂದು ಗುರುತಿಸಲಾಗಿದೆ. ಈ ವಿಚಾರವಾಗಿ ಮಾಹಿತಿ ದೊರೆತ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದ್ದು, ಅವರ ಬಳಿ ಇದ್ದ ಎಸ್‍ಟಿಎಫ್ ಸ್ಲೀತ್‍ನ ಎರಡು ವಿಭಿನ್ನ ಬ್ರಾಂಡ್‍ಗಳ 12 ಬಾಟಲ್ ಚುಚ್ಚುಮದ್ದುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಮನೀಶ್ ಖತ್ರಿ ಹೇಳಿದ್ದಾರೆ.
ಬಾಟಲುಗಳ ಮೇಲೆ ಮಾರಾಟದ ನಿಗದಿ ಬೆಲೆಯನ್ನು ಮುದ್ರಿಸಿರಲಿಲ್ಲ. ಆದರೆ ಆರೋಪಿಗಳು ಪ್ರತಿ ಚುಚ್ಚುಮದ್ದಿಗೆ 20,000ರೂ. ಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.