ಬೆಂಗಳೂರು: ಅಕ್ಟೋಬರ್‍ನಲ್ಲಿ 3ನೇ ಅಲೆ ಅಪ್ಪಳಿಸುವ ಸಾಧ್ಯತೆ ಇದೆ ಹಾಗೂ ಮಕ್ಕಳಿಗಿಂತ ವ್ಯಾಕ್ಸಿನ್ ಹಾಕಿಸಿಕೊಳ್ಳದವರೇ ಟಾರ್ಗೆಟ್ ಆಗುತ್ತಾರೆ ಎಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಡಾ. ಮಂಜುನಾಥ್ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತಂತೆ ಮಾತನಾಡಿದ ಅವರು, ಮೂರನೇ ಅಲೆ ಯಾವ ರೀತಿ ಬರುತ್ತದೆ ಎಂಬುವುದನ್ನು ನಾವು ಈಗಲೇ ನಿಖರವಾಗಿ ಹೇಳುವುದಕ್ಕೆ ಆಗುವುದಿಲ್ಲ. ಎರಡನೇ ಅಲೆ ಕಡಿಮೆಯಾಗುತ್ತಾ, ಮೂರನೇ ಅಲೆಗೆ ಸೇರಿಕೊಳ್ಳುತ್ತದೆ. ಮೂರನೇ ಅಲೆ ಬಹುಶಃ ಅಕ್ಟೋಬರ್ ಅಥವಾ ನವೆಂಬರ್ ತಿಂಗಳಿನಲ್ಲಿ ಬರುವ ಸಾಧ್ಯತೆಗಳಿದೆ. ಆದರೆ ಸಾರ್ವಜನಿಕರು ಯಾವ ರೀತಿ ವರ್ತಿಸುತ್ತಾರೆಯೋ ಅದರ ಮೇಲೆ ಅವಲಂಬಿತವಾಗಿರುತ್ತದೆ. ಜನರು ಸಹಕರಿಸದೇ ಇದ್ದರೆ, ಮೂರನೇ ಅಲೆಯನ್ನು ಬೇಗನೇ ಆಹ್ವಾನ ಮಾಡಿಕೊಂಡಂತೆ ಆಗುತ್ತದೆ. ಜನರಿಗೆ ಉಚಿತವಾಗಿ ಕೊರೊನಾ ಟೆಸ್ಟ್, ಚಿಕಿತ್ಸೆ, ಇದೀಗ ಉಚಿತವಾಗಿ ಲಸಿಕೆ ಹೀಗೆ ಸರ್ಕಾರ ಎಲ್ಲ ರೀತಿಯ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಹೀಗಾಗಿ ಕೊರೊನಾ ಮೂರನೇ ಅಲೆಯನ್ನು ನಿಯಂತ್ರಿಸಬೇಕಾದರೆ ಸರ್ಕಾರದ ಜೊತೆಗೆ ಸಾರ್ವಜನಿಕರು ಸಹಕರಿಸಬೇಕಾಗುತ್ತದೆ.
ಈಗಾಗಲೇ ಎರಡನೇ ಅಲೆಯಲ್ಲಿ ನಿಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡಿದ್ದೀರಾ. ಹಾಗಾಗಿ ಈ ಎಲ್ಲಾವನ್ನು ಮನಗೊಂಡು ನಡೆದುಕೊಳ್ಳಬೇಕಾಗುತ್ತದೆ. ಇದೀಗ ಎರಡನೇ ಅಲೆಯಿಂದ ಮೂರನೇ ಅಲೆ ಬರುತ್ತದೆ. ಇನ್ನೂ ಕೆಲವರು ನಾಲ್ಕನೇ ಅಲೆ ಕೂಡ ಬರಬಹುದು ಎಂದು ಹೇಳುತ್ತಿದ್ದಾರೆ.
ಇಷ್ಟೇಲ್ಲಾ ಮಾಹಿತಿ ಇರುವಾಗ ವರ್ಷಗಟ್ಟಲೇ ಲಾಕ್‍ಡೌನ್ ಮಾಡಲು ಸಾಧ್ಯವಿಲ್ಲ. ಹಾಗಾಗಿ ನಾವು ದಿನನಿತ್ಯದ ಕೆಲಸಗಳನ್ನು ಮಾಡುತ್ತಾ, ಲಸಿಕೆ ಪಡೆದು, ಮುನ್ನೆಚ್ಚರಿಕೆ ಕ್ರಮವನ್ನು ವಹಿಸಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ:ನರ್ಸ್ ಬದಲು ತಾನೇ ಲಸಿಕೆ ಕೊಟ್ಟ ಕೌನ್ಸಿಲರ್