ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯು ಅಕ್ಟೋಬರ್ 2021ರ ವೇಳೆಗೆ ಹೊಸ ಎಕ್ಸ್ ಯುವಿ 700 ಎಸ್‍ಯುವಿ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಲಿದೆ. ಮಹೀಂದ್ರಾ ಈಗಾಗಲೇ ಎಕ್ಸ್ ಯುವಿ 700ಗಾಗಿ ಒಂದು ವೆಬ್ ಪೇಜನ್ನು ರಚಿಸಿದೆ. ಅಲ್ಲಿ ನೀವು ಈ ಕಾರಿನ ಅಪ್‍ಡೇಟ್ಸ್ ಗಾಗಿ ನೊಂದಾಯಿಸಿಕೊಳ್ಳಬಹುದು.
Advertisement
ಮಹೀಂದ್ರಾ ಎಕ್ಸ್ ಯುವಿ 700 ಹೊಸ ಶೈಲಿಯೊಂದಿಗೆ ಬರಲಿದ್ದರೂ ಇದು ಮೂಲ ಎಕ್ಸ್ ಯುವಿ 500ನ ಹೋಲಿಕೆಗಳನ್ನು ಹೊಂದಿರುತ್ತದೆ. ಹೊಸ ಗ್ರಿಲ್, ವಿಶಿಷ್ಟವಾದ ಎಲ್‍ಇಡಿ ಡಿಆರ್‍ಎಲ್‍ಗಳನ್ನು ಹೊಂದಿರುವ ಸಿ-ಆಕಾರದ ಹೆಡ್‍ಲ್ಯಾಂಪ್‍ಗಳು, ಹೊಸ ಹಿಂಬದಿ ಲೈಟ್‍ಗಳು, ಹೊಸ ಅಲಾಯ್ ವೀಲ್ ವಿನ್ಯಾಸ ಮತ್ತು ಮರು ವಿನ್ಯಾಸಗೊಳಿಸಿರುವ ಬಾನೆಟ್, ಬಂಪರ್ ಮತ್ತು ಹಿಂಬದಿ ಬಾಗಿಲನ್ನು ಈ ಹೊಸ ಕಾರು ಹೊಂದಿದೆ. ಕಾರಿನ ಡೋರ್ ಹ್ಯಾಂಡಲ್ಸ್ ಫ್ಲಶ್ ಮೌಂಟೆಡ್ ಲಿವರ್ಸ್‍ನೊಂದಿಗೆ ಬರಲಿದ್ದು ಹೆಚ್ಚು ಆಧುನಿಕ ನೋಟವನ್ನು ನೀಡುತ್ತದೆ.
Advertisement
ಎಕ್ಸ್ ಯುವಿ 700 ಕಾರಿನಲ್ಲಿ ಡ್ಯಯಲ್ ಸ್ಕ್ರೀನ್ ಲೇಔಟ್ ಇರಲಿದೆ. ಒಂದು ಸ್ಕ್ರೀನ್ ಇನ್ಪೋಟೈನ್‍ಮೆಂಟ್‍ಗೆ ಮತ್ತು ಇನ್ನೊಂದು ಇನ್ಸ್ಟ್ರುಮೆಂಟ್ ಕ್ಲಸ್ಟರ್ ಗಾಗಿ. ಈ ಸೆಟಪ್ ಮರ್ಸಿಡಿಸ್ ಬೆಂಜ್ ಕಾರಿನ ಕೆಲವು ಮಾದರಿಗಳಲ್ಲಿ ಕಂಡು ಬರುತ್ತದೆ. ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ, ಸ್ವಯಂಚಾಲಿತ ಹವಾಮಾನ ನಿಯಂತ್ರಣ, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಹಿಲ್ ಹೋಲ್ಡ್ ಕಂಟ್ರೋಲ್(ಆಟೋಮ್ಯಾಟಿಕ್ ಆವೃತ್ತಿಗಾಗಿ), ವಿವಿಧ ಡ್ರೈವ್ ಮೋಡ್‍ಗಳು, ಪ್ಯಾನರೋಮಿಕ್ ಸನ್‍ರೂಫ್, ಕ್ಯಾಪ್ಟನ್ ಸೀಟ್ಸ್ ಹೊಂದಿರುವ 6 ಆಸನಗಳ ವಿನ್ಯಾಸ ಮತ್ತು ಮಧ್ಯದ ಸಾಲಿನಲ್ಲಿ ಬೆಂಚ್ ಸೀಟ್ ಹೊಂದಿರುವ 7 ಆಸನಗಳ ವಿನ್ಯಾಸ, ಇತ್ಯಾದಿಗಳನ್ನು ಹೊಸ ಎಸ್‍ಯುವಿ ಹೊಂದಿರಲಿದೆ.
Advertisement
Advertisement
ಎಕ್ಸ್ ಯುವಿ 700 ಪ್ರಸ್ತುತ ಮಾರುಕಟ್ಟೆಯಲ್ಲಿರುವ ಎಕ್ಸ್ ಯುವಿ 500ಗಿಂತ ಹೆಚ್ಚು ಉದ್ದದ ವೀಲ್‍ಬೇಸ್ ಮತ್ತು ಅಗಲವನ್ನ ಹೊಂದಿರುತ್ತದೆ. ಇದರಿಂದ ಎರಡನೇ ಮತ್ತು ಮೂರನೇ ಸಾಲಿನ ಪ್ರಯಾಣಿಕರಿಗೆ ಹೆಚ್ಚಿನ ಸ್ಥಳಾವಕಾಶ ದೊರೆಯುತ್ತದೆ. ಎಕ್ಸ್ ಯುವಿ 700 ಅಡ್ವಾನ್ಸ್ ಡ್ ಡ್ರೈವಿಂಗ್ ಅಸಿಸ್ಟ್ ಸಿಸ್ಟಂ 2(ಎಡಿಎಎಸ್ 2) ನೊಂದಿಗೆ ಬರಲಿದೆ.
ಮಹೀಂದ್ರಾ ಎಕ್ಸ್ ಯುವಿ 700 ಕಾರು ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಗಳಲ್ಲಿ ದೊರೆಯುತ್ತದೆ. ಹೊಚ್ಚ ಹೊಸ 2.2 ಲೀಟರ್, 4 ಸಿಲಿಂಡರ್ ಎಂ-ಹಾಕ್ ಡೀಸೆಲ್ ಎಂಜಿನ್ 185 ಹೆಚ್‍ಪಿ ಶಕ್ತಿ ಉತ್ಪಾದಿಸುವ ನಿರೀಕ್ಷೆಯಿದೆ. 2.0 ಲೀಟರ್, 4 ಸಿಲಿಂಡರ್ ಎಂ-ಫಾಲ್ಕಾನ್ ಪೆಟ್ರೋಲ್ ಎಂಜಿನ್ 190 ಹೆಚ್‍ಪಿ ಶಕ್ತಿ ಉತ್ಪಾದಿಸುತ್ತದೆ. ಈ ಎರಡೂ ಎಂಜಿನ್‍ಗಳು ಈಗಾಗಲೇ ಹೊಸ ಥಾರ್ ಜೀಪ್‍ನಲ್ಲಿ ಬಳಕೆಯಾಗುತ್ತಿವೆ. 6 ಸ್ಪೀಡ್ ಮ್ಯಾನ್ಯುಯಲ್ ಮತ್ತು 6 ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳನ್ನು ಎಕ್ಸ್ ಯುವಿ 700 ಹೊಂದಿದೆ.
ಎಕ್ಸ್ ಯುವಿ 700 ಅತ್ಯಂತ ಜನಪ್ರಿಯ ಎಸ್‍ಯುವಿ ವಿಭಾಗದಲ್ಲಿ ಟಾಟಾ ಸಫಾರಿ, ಎಂಜಿ ಹೆಕ್ಟರ್ ಪ್ಲಸ್ ಮತ್ತು ಮುಂಬರುವ ಹ್ಯುಂಡೈ ಅಲ್ಕಜ್ ನೊಂದಿಗೆ ದಿಗೆ ಸ್ಪರ್ಧಿಸಲಿದೆ.
ಎಕ್ಸ್‍ಯುವಿ 500 ಕಾರನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುವುದು ಎಂದು ಮಹೀಂದ್ರಾ ಕಂಪನಿಯು ಈಗಾಗಲೇ ದೃಢಪಡಿಸಿದೆ. ಎಕ್ಸ್ ಯುವಿ 700 ಕಾರಿನ ಐದು ಆಸನಗಳ ಆವೃತ್ತಿಗೆ ಎಕ್ಸ್ ಯುವಿ 500 ಹೆಸರನ್ನು ಬಳಸಲು ಇದಕ್ಕೆ ಕಾರಣವಿರಬಹುದು.