ಲಕ್ನೋ: ಜೀವ ಅಪಾಯದಲ್ಲಿದ್ದಾಗ ರೋಗಿಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಅಂಬುಲೆನ್ಸ್ ಬಹಳ ಮುಖ್ಯ. ಯಾರಿಗೆ ಏನಾದರೂ ತಕ್ಷಣಕ್ಕೆ ಆಸ್ಪತ್ರೆಗೆ ಹೋಗಲು ಯಾವುದೇ ದಾರಿ ದೋಚದೇ ಇರುವಾಗ ತಕ್ಷಣ ಕರೆ ಮಾಡುವುದು ಅಂಬುಲೆನ್ಸ್ ಗೆ ಆದರೆ ಜೀವ ರಕ್ಷಿಸಲು ಸಹಾಯ ಮಾಡುವ ಅಂಬುಲೆನ್ಸ್ ಅಪಘಾತಕ್ಕೀಡಾಗಿರುವ ಘಟನೆ ಇಂದು ಮುಂಜಾನೆ ಸಂಭವಿಸಿದೆ.
ಬೆಳ್ಳಂಬೆಳ್ಳಗ್ಗೆ ಅಂಬುಲೆನ್ಸ್ ಅಪಘಾತಕ್ಕಿಡಾಗಿ ಸುಮಾರು 5 ಮಂದಿ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಭಾದೋಹಿಯಲ್ಲಿ ನಡೆದಿದೆ.
ಗೋಪಿಗಂಜ್ ಕೊಟ್ವಾಲಿ ಪ್ರದೇಶದ ಆಮ್ವಾ ಗ್ರಾಮದ ಬಳಿ ಅಪಘಾತ ಸಂಭವಿಸಿದ್ದು, ಅಂಬುಲೆನ್ಸ್ ಚಿತ್ತೋಗರ್ ಗೆ ತೆರಳುತ್ತಿರುವ ವೇಳೆ ಟ್ರಕ್ ಒಂದಕ್ಕೆ ಡಿಕ್ಕಿ ಹೊಡೆದಿದೆ. ಇನ್ನೂ ವರದಿಯಲ್ಲಿ ಅಂಬುಲೆನ್ಸ್ ಒಳಗಿದ್ದ 5 ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.