ಮುಂಬೈ: ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಐಪಿಎಲ್ ಪಂದ್ಯದ ವೇಳೆ ಅಂಪೈರ್ ನೀಡಿರುವ ಶಾರ್ಟ್ ರನ್ ತೀರ್ಪನ್ನು ಟೀಂ ಇಂಡಿಯಾ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಕಟುವಾಗಿ ಟೀಕಿಸಿದ್ದಾರೆ.
Very Poor Umpiring at #IPL2020. How is this even a Short Run! This Run Could Have Changed the Match! Really Feeling Sad for #MayankAgarwal. The Irony Thing is That Even With So much Technology, They Couldn’t Do Anything!#DCvKXIP #Umpires pic.twitter.com/bRQsgVGpAF
— ᴀᴅᴀʀꜱʜ ʙʜᴀᴠɪʜᴀʟ (@AdarshBhavihal) September 21, 2020
Advertisement
ನಿನ್ನೆ ರೋಚಕ ಅಂತದಲ್ಲಿ ಟೈ ಆದ ಪಂದ್ಯ ಸೂಪರ್ ಓವರ್ ಗೆ ದಾರಿ ಮಾಡಿಕೊಟ್ಟಿತ್ತು. ಸೂಪರ್ ಓವರ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ ಡೆಲ್ಲಿ ಗೆಲುವು ಪಡೆಯುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿತ್ತು. ಆದರೆ ಪಂದ್ಯದ 18ನೇ ಓವರಿನಲ್ಲಿ ಅಂಪೈರ್ ನೀಡಿದ್ದ ಶಾರ್ಟ್ ರನ್ ತೀರ್ಪು ಪಂದ್ಯದ ದಿಕ್ಕನ್ನೇ ಬದಲಿಸಿತ್ತು. ಓವರಿನ 3ನೇ ಎಸೆತದಲ್ಲಿ ಮಯಾಂಕ್ ಕವರ್ ಡ್ರೈವ್ ಕಡೆ ಚೆಂಡನ್ನು ಬಾರಿಸಿ 2 ರನ್ ಓಡಿದ್ದರು. ಆದರೆ ಲೆಗ್-ಅಂಪೈರ್ ನಾನ್ ಸ್ಟ್ರೈಕ್‍ನಲ್ಲಿದ್ದ ಕ್ರಿಸ್ ಜೋರ್ಡನ್ ಮೊದಲ ರನ್ ಪಡೆಯುವ ವೇಳೆ ಕ್ರಿಸ್ ಟಚ್ ಮಾಡಿಲ್ಲ ಎಂದು ನಿರ್ಧರಿಸಿ ಶಾರ್ಟ್ ರನ್ ಎಂದು ತೀರ್ಪು ನೀಡಿದ್ದರು. ಇದನ್ನೂ ಓದಿ: ಮಯಾಂಕ್ ಅಗರ್ವಾಲ್ ಕಿಚ್ಚಿನ ಆಟಕ್ಕೆ ಕಿಚ್ಚನ ಮೆಚ್ಚುಗೆ
Advertisement
I travelled enthusiastically during a pandemic,did 6 days of Quarantine & 5covid tests with a smile but that one Short Run hit me hard. What’s the point of technology if it cannot be used? It’s time @BCCI introduces new rules.This cannot happen every year. #DCvKXIP @lionsdenkxip https://t.co/uNMXFJYfpe
— Preity G Zinta (@realpreityzinta) September 21, 2020
Advertisement
ಆದರೆ, ರಿಪ್ಲೇನಲ್ಲಿ ಬ್ಯಾಟ್ಸ್ ಮನ್ ಗೆರೆಯನ್ನು ಟಚ್ ಮಾಡಿದ್ದು ಸ್ಪಷ್ಟವಾಗಿತ್ತು. ಸದ್ಯ ಈ ಅಂಪೈರ್ ಅವರ ಕಳಪೆ ತೀರ್ಪಿನ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕ್ರಿಕೆಟ್ ಅಭಿಮಾನಿಗಳು ಹಾಗೂ ಹಿರಿಯ ಆಟಗಾರರು ಅಸಮಾಧಾನ ಹೊರಹಾಕಿದ್ದಾರೆ.
Advertisement
ಈ ಕುರಿತು ಟ್ವೀಟ್ ಮಾಡಿರುವ ಸೆಹ್ವಾಗ್, ಮ್ಯಾನ್ ಆಫ್ ದಿ ಮ್ಯಾಚ್ ಆಯ್ಕೆಗೆ ನನ್ನ ಸಹಮತವಿಲ್ಲ. ಶಾರ್ಟ್ ರನ್ ತೀರ್ಪು ನೀಡಿದ್ದ ಅಂಪೈರ್ ಗೆ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ನೀಡಬೇಕು. ಆದರೆ ಅದು ಶಾರ್ಟ್ ರನ್ ಅಲ್ಲ ಎಂದು ಸೆಹ್ವಾಗ್ ಹೇಳಿದ್ದಾರೆ. ಮತ್ತೊಬ್ಬ ಮಾಜಿ ಆಟಗಾರ ಇರ್ಫಾನ್ ಪಠಾಣ್ ಕೂಡ ಅಂಪೈರ್ ತೀರ್ಪಿನ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ಇದನ್ನೂ ಓದಿ: ಕೊಹ್ಲಿ Vs ವಾರ್ನರ್, ಬೇರ್ಸ್ಟೋವ್ Vs ಎಬಿಡಿ- ಆರ್‌ಸಿಬಿ, ಹೈದರಾಬಾದ್ ತಂಡಗಳ ಬಲಾಬಲ
I don’t agree with the man of the match choice . The umpire who gave this short run should have been man of the match.
Short Run nahin tha. And that was the difference. #DCvKXIP pic.twitter.com/7u7KKJXCLb
— Virender Sehwag (@virendersehwag) September 20, 2020
ಪಂದ್ಯದಲ್ಲಿ ಏಕಾಂಗಿ ಹೋರಾಟ ನಡೆಸಿದ್ದ ಮಯಾಂಕ್ ಶ್ರಮಕ್ಕೆ ತಕ್ಕ ಪ್ರತಿಫಲ ಲಭಿಸಲಿಲ್ಲ. ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಂದರ್ಭದಲ್ಲಿ ಮೂರನೇ ಅಂಪೈರ್ ನೆರವು ಪಡೆಯಬಹುದಾಗಿತ್ತು. ಆಧುನಿಕ ತಂತ್ರಜ್ಞಾನ ಲಭ್ಯವಿದ್ದ ಸಂದರ್ಭದಲ್ಲೂ ಇಂತಹ ನಿರ್ಣಯ ಕೈಗೊಳ್ಳುವುದು ತಪ್ಪು. ಈ ಕುರಿತ ನಿಯಮಗಳಲ್ಲಿ ಬದಲಾವಣೆ ಆಗಬೇಕಿದೆ ಎಂದು ಕೆಲ ಕ್ರಿಕೆಟ್ ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇತ್ತ ಪಂದ್ಯವನ್ನು ಗೆದ್ದ ಡೆಲ್ಲಿ ತಂಡದ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದು, 3 ಅಂಕಗಳನ್ನು ಪಡೆದಿದೆ. ಇದನ್ನೂ ಓದಿ: ಡೆಬ್ಯು ಪಂದ್ಯದ ಮೊದ್ಲ ಓವರ್‌ನಲ್ಲೇ 2 ವಿಕೆಟ್ ಕಬಳಿಸಿ ಗಂಭೀರವಾಗಿ ಗಾಯಗೊಂಡ ಅಶ್ವಿನ್
What abt that one short run call???? #IPL2020
— Irfan Pathan (@IrfanPathan) September 20, 2020