ಮುಂಬೈ: ಹಲವು ಬಾರಿ ವಿಕಲಚೇತನರಿಗೆ ಯಾರೂ ಸಹಾಯ ಮಾಡುವುದಿಲ್ಲ. ಆದರೆ ಇಲ್ಲೊಬ್ಬ ಅಂಧ ವ್ಯಕ್ತಿಗೆ ನಾಯಿ ಸಹಾಯ ಮಾಡಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಲ್ಲದೆ ನೆಟ್ಟಿಗರು ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ನಾಯಿ ಅಂಧನಿಗೆ ಸಹಾಯ ಮಾಡುವ ವಿಡಿಯೋವನ್ನು ಪುಣೆಯ ಪೊಲೀಸ್ ಆಯಕ್ತರು ಟ್ವೀಟ್ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ. ಅಂಧ ವ್ಯಕ್ತಿಯೊಬ್ಬರು ನಡೆದು ಹೋಗುತ್ತಿರುವಾಗ ದಾರಿಯಲ್ಲಿ ಅಡ್ಡಲಾಗಿ ದೊಡ್ಡ ಕೋಲು ಬಿದ್ದಿರುತ್ತದೆ. ಇದನ್ನು ನಾಯಿಯ ಮುಂದೆ ತೆರಳಿದ ಮಾಲೀಕ ನೋಡುವುದಿಲ್ಲ. ಆದರೆ ನಾಯಿ ಅಂಧ ಬರುತ್ತಿರುವುದನ್ನು ನೋಡುತ್ತದೆ.
Advertisement
Humanity
pic.twitter.com/cjXdfpa8zi
— CP Pune City (@CPPuneCity) July 4, 2020
Advertisement
ಮನುಷ್ಯರಿಗಿಂತ ಪ್ರಾಣಿಗಳಿಗೆ ಸಹಾಯ ಮನೋಭಾವ ಹೆಚ್ಚು ಎಂಬುದನ್ನು ನಾಯಿ ತೋರಿಸಿದೆ. ಅಲ್ಲದೆ ನಾಯಿಗಳು ತುಂಬಾ ಸೂಕ್ಷ್ಮ, ಪ್ರಮಾಣಿಕ ಹಾಗೂ ಪರೋಪಕಾರಿ ಎಂಬುದನ್ನು ಮತ್ತೊಮೆ ತೋರಿಸಿದೆ. ಅಂಧ ವ್ಯಕ್ತಿ ಆ ಕೋಲಿನ ಬಳಿ ಬರುವುದಕ್ಕೂ ಮೊದಲು ತಕ್ಷಣವೇ ನಾಯಿ ಮರಳಿ ಬಂದು ದಾರಿಗೆ ಅಡ್ಡಲಾಗಿ ಬಿದ್ದಿದ್ದ ಕೋಲನ್ನು ಬಾಯಿಯಿಂದ ತೆಗೆಯುತ್ತದೆ. ಈ ಮೂಲಕ ಅಂಧನಿಗೆ ದಾರಿ ಮಾಡಿಕೊಡುತ್ತದೆ.
Advertisement
ನಾಯಿ ತನ್ನ ಮಾಲೀಕನೊಂದಿಗೆ ಹೋಗುತ್ತಿರುತ್ತದೆ. ಎದುರುಗಡೆಯಿಂದ ನಾಯಿ ಅಂಧ ವ್ಯಕ್ತಿ ನಡೆದು ಬರುತ್ತಿರುತ್ತಾರೆ. ನಡು ದಾರಿಯಲ್ಲಿ ದೊಡ್ಡ ಕೋಲು ಬಿದ್ದಿದೆ ಎಂಬುದು ಆತನಿಗೆ ತಿಳಿದಿರುವುದಿಲ್ಲ. ತನ್ನಷ್ಟಕ್ಕೆ ತಾನು ಕೋಲು ಹಿಡಿದು ಬರುತ್ತಿರುತ್ತಾನೆ. ಮುಂದೆ ಅಂಧ ವ್ಯಕ್ತಿ ಬರುತ್ತಿದ್ದಾನೆ ಕೋಲು ತಗೆಯಬೇಕು ಎಂಬ ಅರಿವು ನಾಯಿಯ ಮಾಲೀಕನಿಗೆ ಇರುವುದಿಲ್ಲ. ಆದರೆ ನಾಯಿ ಇದ್ದಕ್ಕಿದ್ದಂತೆ ಓಡಿ ಬಂದು ದಾರಿ ಮಧ್ಯೆ ಬಿದ್ದಿದ್ದ ಕೋಲನ್ನು ಬಾಯಿಯಿಂದ ಎತ್ತಿ ರಸ್ತೆ ಬದಿಗೆ ಹಾಕುತ್ತದೆ. ಆಗ ಅಂಧ ಸರಾಗವಾಗಿ ಮುಂದೆ ನಡೆಯುತ್ತಾನೆ.
Advertisement
ನಾಯಿಯ ಈ ಸಹಾಯ ಮನೋಭಾವವನ್ನು ಕಂಡು ನೆಟ್ಟಿಗರು ಫಿದಾ ಆಗಿದ್ದು, ಕಮೆಂಟ್ ಮಾಡಿ ನಾಯಿಯ ಕೆಲಸದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವ್ಯಕ್ತಿಯೊಬ್ಬರು ಕಮೆಂಟ್ ಮಾಡಿ, ಮತ್ತೊಬ್ಬರ ತೊಂದರೆಯನ್ನು ಜಗತ್ತು ಹೇಗೆ ನಿವಾರಿಸುತ್ತದೆ ಎಂಬುದನ್ನು ಇದರ ಮೂಲಕ ತಿಳಿಯಬಹುದಾಗಿದೆ ಎಂದಿದ್ದಾರೆ. ಮತ್ತೊಬ್ಬರು ಕಮೆಂಟ್ ಮಾಡಿ, ಮಾನುಷ್ಯನಿಗೆ ಯಾರು ಒಳ್ಳೆಯ ಸ್ನೇಹಿತ ಎಂಬುದನ್ನು ನಾಯಿಯನ್ನು ನೋಡಿ ಮಾನವರು ಕಲಿಯಬೇಕು ಎಂದು ತಿಳಿಸಿದ್ದಾರೆ.