ನವದೆಹಲಿ: ಅಂದು ಭಾರತದ ಸೈನಿಕರನ್ನು ಪ್ರಶ್ನಿಸಿದ್ದರು. ಇಂದು ಭಾರತದಲ್ಲಿ ತಯಾರಾದ ಲಸಿಕೆಯ ಬಗ್ಗೆ ಅಸಮಾಧಾನ ಹೊಂದಿದ್ದಾರೆ ಎಂದು ಬಿಜೆಪಿ ಕಾಂಗ್ರೆಸ್ ನಾಯಕರನ್ನು ಟೀಕಿಸಿದೆ.
ಭಾರತ್ ಬಯೋಟೆಕ್ ಅಭಿವೃದ್ಧಿ ಪಡಿಸಿದ ಕೊವಾಕ್ಸಿನ್ ಲಸಿಕೆಗೆ ಡಿಸಿಜಿಐ ಅನುಮತಿ ನೀಡಿದ ಬೆನ್ನಲ್ಲೇ ಕಾಂಗ್ರೆಸ್ ಇದನ್ನು ಟೀಕಿಸಿತ್ತು. ಇದೀಗ ಕಾಂಗ್ರೆಸ್‍ನ ಟೀಕೆ ಮಾಡುವ ಮೂಲಕ ಜನರನ್ನು ಭಯಭೀತಗೊಳಿಸಲು ಮುಂದಾಗುತ್ತಿದೆ ಎನ್ನುವ ಮೂಲಕ ಬಿಜೆಪಿ ಮುಖಂಡರು ಈ ಟೀಕೆಗೆ ತಿರುಗೇಟು ನೀಡಿದ್ದಾರೆ.
Advertisement
The Covaxin has not yet had Phase 3 trials. Approval was premature and could be dangerous. @drharshvardhan should please clarify. Its use should be avoided till full trials are over. India can start with the AstraZeneca vaccine in the meantime. https://t.co/H7Gis9UTQb
— Shashi Tharoor (@ShashiTharoor) January 3, 2021
Advertisement
ಲಸಿಕೆಗೆ ಒಪ್ಪಿಗೆ ಸಿಕ್ಕ ಕೂಡಲೇ ಕಾಂಗ್ರೆಸ್ ನಾಯಕರು ಕಳವಳ ವ್ಯಕ್ತಪಡಿಸಿದ್ದರು. ತಿರುವಂತಪುರಂದ ಸಂಸದ, ಮಾಜಿ ಕೇಂದ್ರ ಮಂತ್ರಿ ಶಶಿ ತರೂರ್ ಅವರು ಕೊವಾಕ್ಸಿನ್ ಇನ್ನೂ 6ನೇ ಹಂತದ ಲಸಿಕೆ ಪ್ರಯೋಗ ಪೂರ್ಣಗೊಳಿಸಿಲ್ಲ . ಅವಧಿಗೂ ಮುನ್ನ ಅನುಮತಿ ನೀಡಿರುವುದು ಅಪಾಯಕಾರಿ ಎಂದು ಹೇಳಿದ್ದದ್ದರು.
Advertisement
ಆನಂದ್ ಶರ್ಮಾ ಅವರು, ಕಡ್ಡಾಯವಾಗಿ ನಿಯಮಗಳು ಮತ್ತು ದತ್ತಾಂಶಗಳನ್ನು ಪರಿಶೀಲನೆಮಾಡಿ ಹೇಗೆ ವಿತರಣೆಗೆ ಅವಕಾಶ ಕೊಡಲಾಗಿದೆ ಎಂದು ವಿವರಿಸುವಂತೆ ಸರ್ಕಾರವನ್ನು ಪ್ರಶ್ನಿಸಿದ್ದರು.
Advertisement
Our in-house cynics M/s Jairam, Tharoor & Akhilesh are behaving true to form.
They first questioned the valour of our soldiers & are now unhappy that the two vaccines to get DCGI nod are made in India.
Clearly they are on a quest for permanent political marginalization.
— Hardeep Singh Puri (@HardeepSPuri) January 3, 2021
ಕಾಂಗ್ರೆಸ್ ನಾಯಕರ ಆರೋಪಕ್ಕೆ ನಾಗರೀಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಪ್ರತಿಕ್ರಿಯಿಸಿ, ಈ ಮೊದಲು ಅವರು ನಮ್ಮ ಸೈನಿಕರ ಶೌರ್ಯವನ್ನು ಪ್ರಶ್ನಿಸಿದರು. ಈಗ ಸ್ವದೇಶಿಯವಾಗಿ ತಯಾರಿಸಿದ 2 ಲಸಿಕೆಗೆ ಡಿಜಿಸಿಐ ಅನುಮೋದನೆ ನೀಡಿದ್ದಕ್ಕೆ ಅಸಮಾಧಾನಗೊಂಡಿದ್ದಾರೆ ಎಂದು ಟೀಕಿಸಿದ್ದಾರೆ.
India’s opposition is indulging in worst kind of fear mongering with regard to the Covid vaccine.
But this isn’t the first time. We have seen similar vicious campaigns during the anti-polio drive too. But Covid, unlike polio, is fatal.
Does the opposition want more people dead?
— Amit Malviya (@amitmalviya) January 3, 2021
ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯಾ ಪ್ರತಿಕ್ರಿಯಿಸಿ, ಕೋವಿಡ್ ಲಸಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮಾಡುತ್ತಿರುವ ಟೀಕೆ ಭಯವನ್ನುಂಟು ಮಾಡಿರುವುದು ಇದು ಮೊದಲ ಬಾರಿ ಅಲ್ಲ. ಈ ಹಿಂದೆ ಪೋಲಿಯೋ ಲಸಿಕೆ ನೀಡುವಾಗ ಪ್ರಶ್ನೆ ಮಾಡಿದ್ದರು. ಪೋಲಿಯೋದಂತೆ ಸಾಮಾನ್ಯ ರೋಗವಲ್ಲ ಇದೂ ಮಾರಕ ರೋಗ. ಈ ರೋಗ ಬಂದು ಹೆಚ್ಚಿನ ಜನ ಸಾಯಲಿ ಎಂಬುದು ಪ್ರತಿಪಕ್ಷಗಳ ಬಯಕೆ ಇದ್ದಂತಿದೆ ಎಂದು ಕಾಂಗ್ರೆಸ್‍ನ ಟೀಕೆಗೆ ತಿರುಗೇಟು ನೀಡಿದರು.
Congi objection to Covaxin is inspired by foreign interests. Gigolo ST only knows about poison and assisting suicides.
— Subramanian Swamy (@Swamy39) January 3, 2021