ಶಾರ್ಜಾ: ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಆಟಗಾರ ನಿಕೋಲಸ್ ಪೂರನ್ ಅದ್ಭುತ ಫೀಲ್ಡಿಂಗ್ ಮಾಡಿ ಕ್ರಿಕೆಟಿಗರ ಮನ ಗೆದ್ದಿದ್ದಾರೆ.
ಸ್ಪಿನ್ನರ್ ಮುರುಗನ್ ಅಶ್ವಿನ್ ಎಸೆದ 8ನೇ ಓವರಿನ 4ನೇ ಎಸೆತವನ್ನು ಸಂಜು ಸ್ಯಾಮ್ಸನ್ ಸಿಕ್ಸರ್‌ಗೆ ಅಟ್ಟಲು ಬಲವಾಗಿ ಎಡಗಡೆಗೆ ಬೀಸಿದ್ದರು. ಈ ವೇಳೆ ಬೌಂಡರಿ ಲೈನ್ ಬಳಿ ಇದ್ದ ವಿಂಡೀಸ್ ಆಟಗಾರ ಪೂರನ್ ಗಾಳಿಯಲ್ಲಿ ಹಾರಿ ಬಾಲನ್ನು ತಡೆದು ಕ್ಷಣ ಮಾತ್ರದಲ್ಲಿ ಹಿಂದಕ್ಕೆ ಎಸೆದಿದ್ದರು.
Advertisement
Advertisement
ಈ ಪ್ರಯತ್ನ ಯಶಸ್ವಿಯಾಗಿದೆಯೋ ಇಲ್ಲವೋ ಎಂಬುದನ್ನು ಟಿವಿ ರಿಪ್ಲೇಯಲ್ಲಿ ನೋಡಿದಾಗ ಪೂರನ್ ಫೀಲ್ಡಿಂಗ್ ಯಶಸ್ವಿಯಾಗಿರುವುದು ಸೆರೆಯಾಗಿತ್ತು. ಬಾಲ್ ಕೈಗೆ ಸಿಕ್ಕಿದ ಕೂಡಲೇ ಅದನ್ನು ಹಿಂದಕ್ಕೆ ಹಾಕಿದ ಪ್ರಯತ್ನ ಕಂಡು ಪೂರನ್ ಅವರನ್ನು ಅಭಿಮಾನಿಗಳು ಸೂಪರ್ ಮ್ಯಾನ್‌ಗೆ ಹೋಲಿಸಿ ಅಭಿನಂದಿಸಿದ್ದಾರೆ.
Advertisement
This is the best save I have seen in my life. Simply incredible!! ????#IPL2020 #RRvKXIP pic.twitter.com/2r7cNZmUaw
— Sachin Tendulkar (@sachin_rt) September 27, 2020
Advertisement
ಒಂದು ವೇಳೆ ಈ ಪ್ರಯತ್ನ ನಡೆಯದಿದ್ದರೆ ಬಾಲ್ ಬೌಂಡರಿ ಗೆರೆ ದಾಟುತ್ತಿತ್ತು. ಈ ಪ್ರಯತ್ನದಿಂದ ಪೂರನ್ 4 ರನ್ ಸೇವ್ ಮಾಡಿ 2 ರನ್ ಮಾತ್ರ ಬಿಟ್ಟುಕೊಟ್ಟಿದ್ದರು.
Gravity naamak cheez hi bhula di. Aisa kaise.
Defied Gravity, Pooran. What a save. pic.twitter.com/1HReADpmVh
— Virender Sehwag (@virendersehwag) September 27, 2020
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ನನ್ನ ಜೀವಮಾನದಲ್ಲೇ ನೋಡಿದ ಅತ್ಯುತ್ತಮ ಸೇವ್ ಎಂದು ಟ್ವೀಟ್ ಮಾಡಿದ್ದಾರೆ. ನೆಟ್ಟಿಗರು ಈ ರೀತಿ ರನ್ ಸೇವ್ ಮಾಡಲು ಸಾಧ್ಯವೇ? ಎಂದು ಪ್ರಶ್ನಿಸಿ ಮೆಚ್ಚುಗೆ ಸೂಚಿಸಿದ್ದಾರೆ.
https://twitter.com/Bunny_I_/status/1310265554066747392
2015ರಲ್ಲಿ ಪೂರನ್ ಅವರಿಗೆ ಅಪಘಾತವಾಗಿತ್ತು. ಈ ವೇಳೆ ಕಾಲಿಗೆ ಬಲವಾದ ಏಟು ಬಿದ್ದಿತ್ತು. ಹಲವು ಮಂದಿ ಮುಂದೆ ಪೂರನ್ ಕ್ರಿಕೆಟ್ ಆಡುವುದು ಅನುಮಾನ ಕಷ್ಟವಾಗಬಹುದು ಎಂದು ಎಂದು ಹೇಳಿದ್ದರು. ಆದರೆ ಪೂರನ್ ಎಲ್ಲ ಲೆಕ್ಕಚಾರವನ್ನು ಉಲ್ಟಾ ಮಾಡಿ ನಾನೊಬ್ಬ ಉತ್ತಮ ಆಟಗಾರ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಈ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲೂ ಮಿಂಚಿದ್ದ ಪೂರನ್ 8 ಎಸೆತದಲ್ಲಿ 3 ಸಿಕ್ಸರ್ ಚಚ್ಚಿ ಔಟಾಗದೇ 25 ರನ್ ಹೊಡೆದಿದ್ದರು.
This is the same Nicholas Pooran who had an accident in 2015 and broke his legs which almost ended his career. Today he saved a blinder of a six towards the boundary rope, superb from Pooran. pic.twitter.com/ZnRaawszQL
— Mufaddal Vohra (@mufaddal_vohra) September 27, 2020