ಬೆಂಗಳೂರು: ಚಾಮರಾಜನಗರದಲ್ಲಿ ಆಕ್ಸಿಜನ್ ಸಿಗದೇ 24 ಜನರ ದುರಂತ ಸಾವು ಪ್ರಕರಣ ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಗರಂ ಆಗಿದ್ದಾರೆ.
ಅಂತ್ಯ ಸಂಸ್ಕಾರಕ್ಕೆ ಎಲ್ಲಾದ್ರೂ ಜಾಗ ಹುಡ್ಕಿ ಅಂದಾಗ ಜಾಗ ಹುಡ್ಕಿದರು. ಆಕ್ಸಿಜನ್ ವಿಚಾರದಲ್ಲಿ ಯಾರು ಮಾನಿಟರ್ ಮಾಡ್ತಿಲ್ಲ. ನಾನೇ ಚೀಫ್ ಸೆಕ್ರೆಟರಿ ಜೊತೆ ಮಾತನಾಡುತ್ತೇನೆ. ಸಿಎಲ್ ಪಿ ಮೀಟಿಂಗ್ ಮುಗಿಸಿಕೊಂಡು, ಚೀಫ್ ಸೆಕ್ರೆಟರಿಯನ್ನ ಭೇಟಿ ಮಾಡ್ತೇನೆ. ಆಕ್ಸಿಜನ್ ಸಮಸ್ಯೆ ಬಗ್ಗೆ, ನಿತ್ಯ ಸುಮಾರು ಕರೆಗಳು ಬರ್ತಿವೆ ನನಗೆ ಸರ್ಕಾರದ ಮಂತ್ರಿಗಳು, ತಜ್ಞರು ನಂಬಿಕೆ ಕಳೆದುಕೊಂಡಿದ್ದಾರೆ ಎಂದಿದ್ದಾರೆ.
ಆಕ್ಸಿಜನ್‍ನನ್ನ ಒದಗಿಸಿಕೊಡೊದಕ್ಕೆ ಆಗಲ್ಲ ಎಂದರೆ ಹೆಲ್ತ್ ಸೆಕ್ರೆಟರಿ, ಚೀಫ್ ಸೆಕ್ರೆಟರಿಯ ಗಮನಕ್ಕೆ ತರುತ್ತೇನೆ. ಆಕ್ಸಿಜನ್ ಸಿಗದೇ 24 ಜನರ ಸಾವಿನ ವಿಚಾರ ಮಾಧ್ಯಮಗಳಲ್ಲಿ ಬರೋದು ಸುಳ್ಳಾ ಹಾಗಿದ್ರೆ? ವಾಸ್ತವ ಹೇಳಲಿ.. ಸರ್ಕಾರದ ಮಂತ್ರಿಗಳ ಬಗ್ಗೆ ನಂಬಿಕೆ ಹೋಗಿದೆ. ಅದ್ಕೆ ನಾನು ಚೀಫ್ ಸೆಕ್ರೆಟರಿ ಮೊರೆ ಹೋಗ್ತೇನೆ ಎಂದು ಆಡಳಿತ ಸರ್ಕಾರದ ವಿರುದ್ಧವಾಗಿ ಗುಡುಗಿದ್ದಾರೆ.