ಹಾವೇರಿ: ಕೊರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಹತ್ತಿರ ಯಾರು ಸುಳಿಯುತ್ತಿಲ್ಲ. ಕುಟುಂಬ ಸದಸ್ಯರೇ ಅಂತ್ಯಕ್ರಿಯೆ ಮಾಡಲು ಹಿಂದೇಟು ಹಾಕಿದ್ದು, ಕೊರೊನಾದಿಂದ ಸಾವನ್ನಪ್ಪಿದ 45 ವರ್ಷದ ವ್ಯಕ್ತಿ ಅಂತ್ಯಕ್ರಿಯೆಯನ್ನ 4 ಜನ ಮುಸ್ಲಿಂ ಯುವಕರು ನೆರೆವೇರಿಸಿದ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಖುರ್ದವೀರಾಪುರ ಗ್ರಾಮದಲ್ಲಿ ನಡೆದಿದೆ.
ಯುವಕರು ಪಿಪಿಇ ಕಿಟ್ ಧರಿಸಿ ಅಂತ್ಯಕ್ರಿಯೆಯನ್ನ ಬ್ಯಾಡಗಿ ಪಟ್ಟಣದ ನಾಲ್ವರು ಮುಸ್ಲಿಂ ಯುವಕರು ನೆರವೇರಿಸಿದ್ದಾರೆ. ಮಂಜೂರ ಅಲಿ ಹಕೀಂ, ಮುಕ್ತಿಯಾರ್ ಅಹಮ್ಮದ ಮುಲ್ಲಾ, ಅಜೀಜ್ ಬಿಜಾಪುರ ಮತ್ತು ಹಸನ ಅಲಿ ಕುಪ್ಪೇಲೂರ ಎಂಬುವರಿಂದ ಅಂತ್ಯಕ್ರಿಯೆ ನೆರೆವೇರಿಸಿದರು.
ಆರೋಗ್ಯ ಇಲಾಖೆ ನೆರವಿನೊಂದಿಗೆ ಸರ್ಕಾರದ ನಿಯಮಾವಳಿ ಪ್ರಕಾರ ಅಂತ್ಯಕ್ರಿಯೆ ನಡೆಸಿದರು. ಜಾತಿ ಬೇಧವೆನಿಸದೆ ಮೃತ ಹಿಂದೂ ವ್ಯಕ್ತಿಯ ಅಂತ್ಯಕ್ರಿಯೆ ನೆರವೇರಿಸಿದ ಮುಸ್ಲಿಂ ಯುವಕರ ಕಾರ್ಯಕ್ಕೆ ಜಿಲ್ಲೆಯ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.