ಅಂತರ್ಜಾತಿ ಯುವತಿ ಜೊತೆ ಮದ್ವೆ- ವರನ ತಂದೆಗೆ ಗುಂಡಿಟ್ಟು ಕೊಲೆ

Public TV
1 Min Read
crime

-ಮನೆಯ ಮುಂದೆ ನಿಂತಿದ್ದ ವೃದ್ಧನಿಗೆ ಗುಂಡೇಟು

ಲಕ್ನೋ: ಮಗ ಅಂತರ್ಜಾತಿ ಯುವತಿಯನ್ನ ಮದುವೆಯಾಗಿದ್ದಕ್ಕೆ ತಂದೆಗೆ ಗುಂಡೇಟು ಕೊಲೆಗೈದಿರುವ ಘಟನೆ ಬುಲಂದ್‍ಶಹರ್ ನಗರದ ಖುರ್ಜಾದ ಬಳಿಯ ಕೋತ್ವಾಲಿಯಲ್ಲಿ ನಡೆದಿದೆ.

marriage fb 020419062152 e1601448365714

ಕೆಲ ದಿನಗಳ ಹಿಂದೆ ಮೃತ ವೃದ್ಧನ ಮಗ ಪ್ರೇಮ ವಿವಾಹವಾಗಿದ್ದನು. ಆದ್ರೆ ಈ ಮದುವೆಗೆ ಜಾತಿ ಕಾರಣ ನೀಡಿ ಯುವತಿಯ ಕುಟುಬಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ಅದೇ ದ್ವೇಷದ ಮೇಲೆ ಯುವತಿ ಕುಟುಂಬಸ್ಥರು ಕೊಲೆ ಮಾಡಿದ್ದಾರೆ ಮೃತನ ಪರಿವಾರ ಆರೋಪಿಸಿದೆ.

marriage app fina

ಮಗನ ಮದುವೆ ಬಳಿಕ ನಮ್ಮ ಜೀವಕ್ಕೆ ಅಪಾಯವಿದೆ ಎಂದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಪೊಲೀಸರು ರಕ್ಷಣೆ ನೀಡಿದ್ದರು ಮನೆಯ ಯಜಮಾನ ಕೊಲೆಯಾಗಿದೆ. ಬೈಕ್ ನಲ್ಲಿ ಬಂದ ನಾಲ್ವರು ನಾಲ್ಕು ಬಾರಿ ಗುಂಡು ಹಾರಿಸಿ ಎಸ್ಕೇಪ್ ಆದ್ರು. ಕೂಡಲೇ ವೃದ್ಧನನ್ನ ಆಸ್ಪತ್ರೆಗೆ ದಾಖಲಿಸಿದರೂ ವೈದ್ಯರು ಮೃತರಾಗಿರೋದನ್ನ ಖಚಿತ ಪಡಿಸಿದರು ಎಂದು ಮೃತ ವೃದ್ಧನ ಪತ್ನಿ ಕಣ್ಣೀರು ಹಾಕಿದ್ದಾರೆ.

crime scene e1602054934159

ಕುಟುಂಬದ ಭದ್ರತೆಯ ಕರ್ತವ್ಯದಲ್ಲಿದ್ದ ಇಬ್ಬರು ಪೇದೆಗಳನ್ನು ಅಮಾನತು ಮಾಡಲಾಗಿದೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ. ಬೈಕ್ ನಲ್ಲಿ ಬಂದ ನಾಲ್ವರ ಗುರುತು ಸಹ ಪತ್ತೆಯಾಗಿಲ್ಲ. ಕುಟುಂಬಸ್ಥರ ಹೇಳಿಕೆಯನ್ನ ದಾಖಲಿಸಿಕೊಳ್ಳಲಾಗಿದೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *