– 6 ಮಂದಿ ಸಾವು, 18 ಜನರು ಗಂಭೀರ ಗಾಯ
ಮುಂಬೈ: ಅಂಕುಡೊಂಕಾದ ರಸ್ತೆಯಲ್ಲಿ ಚಲಿಸುತ್ತಿದ್ದ ವಾಹನವೊಂದು ಪ್ರಪಾತಕ್ಕೆ ಬಿದ್ದು, 6 ಮಂದಿ ಸಾವನ್ನಪ್ಪಿ 18 ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ನಂದರ್‍ಬಾರ್‍ನಲ್ಲಿ ನಡೆದಿದೆ.
ಈ ರಸ್ತೆ ಅಫಘಾತದಲ್ಲಿ ಸಾವನ್ನಪ್ಪಿದ 8 ಮಂದಿ ಝಾಪಿ ಫಲಾಯಿ ಗ್ರಾಮದವರಾಗಿದ್ದಾರೆ. 18 ಜನ ಗಾಯಾಳುಗಳಲ್ಲಿ 7 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ.
Advertisement
Advertisement
ಅಪಘಾತಕ್ಕಿಡಾದ ವಾಹನದಲ್ಲಿ ಸುಮಾರು 24 ಮಂದಿ ಕಾರ್ಮಿಕರು ಮಹೀಂದ್ರಾ ಮ್ಯಾಕ್ಸ್ ವಾಹನದಲ್ಲಿ ತೋರನ್ಮಾಲ್‍ರೆ ಹೋಗುತ್ತಿದ್ದರು. ಏಕಾಏಕಿ ವಾಹನವು ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿದ ಪರಿಣಾಮ ಈ ಅಪಘಾತ ಸಂಭವಿಸಿದೆ. 400 ಅಡಿ ಆಳದ ಪ್ರಪಾತಕ್ಕೆ ವಾಹನ ಬಿದ್ದಿದೆ. ವಾಹನದಲ್ಲಿ ಐವರು ಮಹಿಳೆಯರಿದ್ದರು. ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
Advertisement
Advertisement
ಅಂಕುಡೊಂಕಾದ ಬೆಟ್ಟದ ಮಾರ್ಗದಲ್ಲಿ ವಾಹನ ಚಲಿಸುತ್ತಿರುವಾಗ ವಾಹನ ಚಾಲಕನ ನಿಯಂತ್ರಣವನ್ನು ಕಳೆದುಕೊಂಡು ಪ್ರಪಾತಕ್ಕೆ ಬಿದ್ದಿದೆ. ಇದರಿಂದ ಸಾವು ನೋವು ಸಂಭವಿಸಿದೆ. ಗಾಯಾಳುಗಳನ್ನು ನಂದೂರ್‍ಬಾರ್‍ನ ಸಿವಿಲ್ ಆಸ್ಪತ್ರೆ ಮತ್ತು ತೋರನ್ಮಲ್ ಗ್ರಾಮೀಣ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ನಂದೂರ್ಬಾರ್ ಪೊಲೀಸ್ ವರಿಷ್ಠಾಧಿಕಾರಿ ಮಹೇಂದ್ರ ಪಂಡಿತ್ ಹೇಳಿದ್ದಾರೆ.