ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ನಟಿ ರಿಯಾ ಚಕ್ರವರ್ತಿ ಬಂಧನಕ್ಕೆ ಸಂಬಂಧಿಸಿದಂತೆ ನಟ ಸುಶಾಂತ್ ಸಿಂಗ್ ರಜಪೂತ್ ಮಾಜಿ ಗೆಳತಿ, ನಟಿ ಅಂಕಿತಾ ಲೋಖಂಡೆ ‘ಜಸ್ಟಿಸ್’ ಎಂದು ಬರೆದು ಪೋಸ್ಟ್ ಮಾಡಿಕೊಂಡಿದ್ದಾರೆ. ಅಂಕಿತಾ ಪೋಸ್ಟ್ ಗೆ ಕಮೆಂಟ್ ಮಾಡಿರುವ ಚಂದನವನದ ನಟಿ ರಮ್ಯಾ, ನ್ಯಾಯಕ್ಕಾಗಿ ಪ್ರಾರ್ಥಿಸೋದು ಬೇಡ. ಅಲ್ಲಿ ನಮಗೆ ಕೆಲವು ಮಾತ್ರ ಸಿಗುತ್ತದೆ ಎಂದು ಸಾಲುಗಳನ್ನ ಬರೆದುಕೊಂಡಿದ್ದಾರೆ.
Advertisement
ಇನ್ನು ರಮ್ಯಾ ಅವರ ಟ್ವೀಟ್‍ಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು, ನ್ಯಾಯಕ್ಕಾಗಿ ಪ್ರಾರ್ಥಿಸಿದ್ರೆ ಎಲ್ಲ ಸತ್ಯಗಳ ಹೊರ ಬರಲ್ಲ. ಹಾಗಾಗಿ ಸತ್ಯಕ್ಕಾಗಿ ಪ್ರಾರ್ಥಿಸಬೇಕಿದೆ. ಸತ್ಯ ಹೊರ ಬಂದ್ರೆ ನ್ಯಾಯ ಖಂಡಿತ ಸಿಗುತ್ತದೆ ಎಂದು ಹೇಳುತ್ತಿದ್ದಾರೆ. ಇದನ್ನೂ ಓದಿ: ಡ್ರಗ್ಸ್ ಸೇವನೆ, ಮಾರಾಟ ಆರೋಪ- ರಿಯಾ ಚಕ್ರವರ್ತಿ ವಕೀಲ ಸ್ಪಷ್ಟನೆ
Advertisement
Never pray for justice, because you might get some
– Margaret Atwood https://t.co/xJZI3C75UX
— Ramya/Divya Spandana (@divyaspandana) September 8, 2020
Advertisement
ಅಂಕಿತಾ ಲೋಖಂಡೆ ಹೇಳಿದ್ದೇನು?: ಅದೃಷ್ಟದಿಂದ ಏನು ಸಾಧಿಸಲು ಸಾಧ್ಯವಿಲ್ಲ. ಅದು ಕೇವಲ ಕ್ಷಣಿಕ. ನೀವು ಮಾಡುವ ಕೆಲಸಗಳು ನಿಮ್ಮ ಅದೃಷ್ಟವನ್ನ ಬದಲಾಯಿಸುತ್ತದೆ. ಅದುವೇ ಕರ್ಮ ಎಂದು ಬರೆದಿರುವ ಸಾಲುಗಳ ಫೋಟೋವನ್ನ ಅಂಕಿತಾ ಲೋಖಂಡೆ ಹಂಚಿಕೊಂಡಿದ್ದಾರೆ. ಹಾಗೆ ಜಸ್ಟಿಸ್ ಎಂದು ಬರೆದು ನ್ಯಾಯದ ಪ್ರತೀಕ ತಕ್ಕಡಿ ಸಿಂಬಾಲ್ ಬಳಸಿದ್ದರು. ಇತ್ತ ಸುಶಾಂತ್ ಸೋದರಿ ಕೃತಿ ಸಹ, ದೇವರು ನಮ್ಮ ಜೊತೆಯಲ್ಲಿದ್ದಾನೆ. ಇದೊಂದು ಶುಭಸುದ್ದಿ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಕೃತಿ ಪ್ರತಿಕ್ರಿಯೆಗೆ ಕಮೆಂಟ್ ಮಾಡಿರುವ ಅಂಕಿತಾ ಲೋಖಂಡೆ, ದೀ (ಅಕ್ಕ) ಎಂದು ಬರೆದು ಹೃದಯದ ಎಮೋಜಿ ಹಾಕಿದ್ದಾರೆ. ಇದನ್ನೂ ಓದಿ: ರಿಯಾ ನನ್ನ ಮಗನಿಗೆ ಹಂತ ಹಂತವಾಗಿ ವಿಷ ನೀಡಿ ಕೊಂದ್ಳು: ಸುಶಾಂತ್ ತಂದೆ
Advertisement
ಸುಶಾಂತ್ ಸಿಂಗ್ ರಜಪೂತ್ ಪ್ರಕರಣ ಸಿಬಿಐಗೆ ವರ್ಗಾವಣೆಗೆ ಆಗುತ್ತಿದ್ದಂತೆ ಅಧಿಕಾರಿಗಳು ತನಿಖೆಯನ್ನ ಚುರುಕುಗೊಳಿಸಿದ್ದರು. ಈ ವೇಳೆ ರಿಯಾ ನಡೆಸಿದ್ದ ವಾಟ್ಸಪ್ ಚಾಟ್ ಡ್ರಗ್ಸ್ ಸೇವನೆಯ ಸುಳಿವು ನೀಡಿತ್ತು. ಸಿಬಿಐ ಡ್ರಗ್ಸ್ ಸಂಬಂಧಿಸಿದ ಪ್ರಕರಣದ ಮಾಹಿತಿಯನ್ನ ಎನ್‍ಸಿಬಿಗೆ ವರ್ಗಾಯಿಸಿತ್ತು. ಪ್ರಕರಣ ಕೈಗೆತ್ತಿಕೊಂಡ ಎನ್‍ಸಿಬಿ ಮೂರು ದಿನಗಳ ಹಿಂದೆ ರಿಯಾ ಸೋದರ ಶೌವಿಕ್, ಸ್ಯಾಮುಯೆಲ್ ಮಿರಂಡಾನನ್ನ ಬಂಧಿಸಿದೆ. ಭಾನುವಾರ ಆರು ಗಂಟೆ ಮತ್ತು ಸೋಮವಾರ ಎಂಟು ಗಂಟೆ ರಿಯಾ ಎನ್‍ಸಿಬಿ ಮುಂದೆ ಹಾಜರಾಗಿ ವಿಚಾರಣೆ ಎದುರಿಸಿದ್ದರು. ಇಂದು ವಿಚಾರಣೆಗೆ ಹಾಜರಾಗಿದ್ದ ವೇಳೆ ರಿಯಾರನ್ನ ಬಂಧಿಸಲಾಗಿದೆ. ಇದನ್ನೂ ಓದಿ: ಸರ್ ನಿಧನದ ಬಳಿಕ ಮನೆಯಲ್ಲಿದ್ದ ಡ್ರಗ್ ಸಿಗರೇಟ್ ರೋಲ್ ಮಾಯವಾಯ್ತು: ಸುಶಾಂತ್ ಮನೆಯ ಕುಕ್
ಇನ್ನು ವಿಚಾರಣೆ ವೇಳೆ ರಿಯಾ ಡ್ರಗ್ಸ್ ಸೇವನೆ ಮಾಡಿರೋದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳ ವರದಿ ಮಾಡಿವೆ. ಇದನ್ನೂ ಓದಿ: ಪ್ರಕರಣಕ್ಕೆ ಹೊಸ ತಿರುವು ನೀಡಿದ ಸುಶಾಂತ್ ಪಕ್ಕದ್ಮನೆ ಮಹಿಳೆ ಹೇಳಿಕೆ