ಬೆಂಗಳೂರು: ಈ ಹೋರಾಟವನ್ನು ಇಲ್ಲಿಗೆ ನಿಲ್ಲಿಸಲ್ಲ. ಬುಧವಾರ ಮತ್ತೆ ಸಭೆ ಮಾಡುವುದಾಗಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಗುಡುಗಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಡ ಸಂಘಟನೆಗಳ ಹೋರಾಟ ಇಲ್ಲಿಗೆ ನಿಲ್ಲಲ್ಲ. ಬುಧವಾರ ಮತ್ತೆ ಸಭೆ ನಡೆಸಲು ಕನ್ನಡ ಸಂಘಟನೆಗಳು ನಿರ್ಧಾರ ಮಾಡಿವೆ. ಬೆಂಗಳೂರಲ್ಲಿ ಬುಧವಾರ ಸಭೆ ನಡೆಸಿ ಹೋರಾಟ ತೀವ್ರಗೊಳಿಸಲು ಚರ್ಚೆ ನಡೆಸಲಾಗುತ್ತಿದೆ ಎಂದರು.
Advertisement
Advertisement
ವಾಟಾಳ್ ನಾಗರಾಜ್ ಮತ್ತು ಸಾರಾ ಗೋವಿಂದ್ ತಮ್ಮ ಕಾರ್ಯಕರ್ತರ ಜೊತೆ ಕಾರ್ಪೋರೇಷನ್ ನಿಂದ ಟೌನ್ ಹಾಲ್ ವರೆಗೂ ರಸ್ತೆಯುದ್ದಕ್ಕೂ ಕಾಲ್ನಡಿಗೆಯಲ್ಲಿ ಬಂದರು. ಟೌನ್ ಹಾಲ್ ಬಳಿ ಧಿಕ್ಕಾರ ಕೂಗುತ್ತಾ ಆಕ್ರೋಶ ಹೊರ ಹಾಕಿದ ವಾಟಾಳ್ ನಾಗರಾಜ್ ಮುಖ್ಯಮಂತ್ರಿಗಳು ಪರಬಾಷಿಗರ ಏಜೆಂಟ್, ಕಮೀಷನರ್ ಬಿಜೆಪಿ ಏಜೆಂಟ್ ನಮ್ಮ ಬಂದ್ ಅನ್ನು ವಿಫಲ ಮಾಡಲು ಎಲ್ಲಾ ಪ್ಲಾನ್ ಮಾಡಿದ್ದಾರೆ. ಈ ಪ್ರಾಧಿಕಾರ ಹಿಂಪಡೆಯಲಿಲ್ಲ ಅಂದರೆ ಮುಂದೆ ಉಗ್ರ ಹೋರಾಟ ಇರುತ್ತೆ. ಜೈಲ್ ಭರೋ ಚಳುವಳಿ ಮಾಡಬೇಕಾಗುತ್ತೆ ಅಂತ ಎಚ್ಚರಿಸಿದ್ರು.
Advertisement
Advertisement
ಮರಾಠ ಪ್ರಾಧಿಕಾರದ ರಚನೆ ವಿರುದ್ಧ ಕನ್ನಡ ಪರ ಸಂಘಟನೆಗಳು ಹೋರಾಟ ಜೋರಾಗಿತ್ತು. ಬೃಹತ್ ಪ್ರತಿಭಟನೆ ಮಾಡಲು ಕನ್ನಡ ಸಂಘಟನೆಗಳು ನಿರ್ಧಾರ ಮಾಡಿದ್ರು. ಆದರೆ ಪೊಲೀಸ್ ಇಲಾಖೆ ಪ್ರತಿಭಟನೆ ಮತ್ತು ರ್ಯಾಲಿ ಅವಕಾಶ ನೀಡದ ಹಿನ್ನೆಲೆ ಬಂದ್ ಬಿಸಿ ಕಡಿಮೆ ಇತ್ತು. ಅನುಮತಿ ನಿರಾಕರಣೆ ಮಧ್ಯೆಯು ಟೌನ್ ಹಾಲ್ ಬಳಿ 12ಕ್ಕೂ ಹೆಚ್ಚು ಸಂಘಟನೆಗಳು ರ್ಯಾಲಿ ಮಾಡಿದ್ರು. ಕನ್ನಡ ಪರ ಸಂಘಟನೆಗಳು ಟೌನ್ ಹಾಲ್ ಆಗಮಿಸುತ್ತಿದ್ದಂತೆ ಪ್ರತಿಭಟನೆ ಮಾಡಲು ಅವಕಾಶ ಕೊಡದೆ ಪೊಲೀಸರು ವಶಕ್ಕೆ ಪಡೆಯುತ್ತಿದ್ರು. ಪೊಲೀಸರ ನಡೆ ಕನ್ನಡ ಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಯ್ತು.