ಉಡುಪಿ: ಸರ್ಕಾರಿ ಬಸ್ಸು ನೌಕರರ ಅಸಹಕಾರ ಹೋರಾಟದ ನಡುವೆಯೇ ಉಡುಪಿಯಲ್ಲಿ ಒಂದು ಐರಾವತ ಬಸ್ಸು ಓಡಿದೆ. ಅಧಿಕಾರಿಗಳು ಹೆಚ್ಚಿನ ಬಸ್ಸುಗಳನ್ನು ಸೇವೆಗಿಳಿಸುವ ಪ್ರಯತ್ನ ಮಾಡಿದರೂ ಯಶಸ್ಸು ಕಾಣಲಿಲ್ಲ.
Advertisement
ಏಪ್ರಿಲ್ 7ರಂದು ಉಡುಪಿ ಡಿಪೋದಿಂದ ಒಂದೂ ಬಸ್ಸು ರಸ್ತೆಗೆ ತಿಳಿದಿರಲಿಲ್ಲ. ಗುರುವಾರ ಬೆಳಗ್ಗೆ 9 ಗಂಟೆಗೆ ಮಣಿಪಾಲದಿಂದ ಹೊರಟ ಬಸ್ 9 19ಕ್ಕೆ ಗಂಟೆ ಹತ್ತಕ್ಕೆ ಕೆಎಸ್ಆರ್ ಟಿಸಿ ಬಸ್ ನಿಲ್ದಾಣಕ್ಕೆ ತಲುಪಿದೆ. ನಿಲ್ದಾಣದಲ್ಲಿ ಕಾಯುತ್ತಿದ್ದ ಎಂಟು ಮಂದಿಯನ್ನು ಹತ್ತಿಸಿಕೊಂಡು ಮಂಗಳೂರು ಮೂಲಕ ಬೆಂಗಳೂರಿಗೆ ಬಸ್ ಸಂಚರಿಸಿದೆ.
Advertisement
Advertisement
ಕನಿಷ್ಠ 30 ಜನ ಪ್ರಯಾಣಿಕರು ಇದ್ದರೆ ಮಾತ್ರ ಬಸ್ ಓಡಾಟದ ಖರ್ಚು ಗಿಟ್ಟುತ್ತದೆ. ಆ ಪ್ರಕಾರ ಸಂಪೂರ್ಣ ಲಾಸ್ ಟ್ರಿಪ್ ಇದು. ಮೇಲಾಧಿಕಾರಿಗಳ ನಿರಂತರ ಒತ್ತಡಕ್ಕೆ ಮಣಿದು ಚಾಲಕ ಮತ್ತು ನಿರ್ವಾಹಕರು ಡಿಪೋದಿಂದ ಬಸ್ ತೆಗೆದಿದ್ದಾರೆ ಎನ್ನಲಾಗಿದೆ.