– ವರ್ಕಿಂಗ್ ಟೈಮ್ನಲ್ಲಿ ಹೋಮ್ ಗಾರ್ಡ್ನಿಂದ ಕಾರು ಕ್ಲೀನ್
ಯಾದಗಿರಿ: ಕೆಂಬಾವಿ ಠಾಣೆಯ ವರ್ಕಿಂಗ್ ಟೈಮ್ ನಲ್ಲಿ ಹೋಮ್ ಗಾರ್ಡ್ ಕೈಯಲ್ಲಿ ಖಾಸಗಿ ವಾಹನ ಕ್ಲೀನ್ ಮಾಡಿಸಿ ಪಿಎಸ್ಐ ದಬ್ಬಾಳಿಕೆ ಮೆರೆದಿದ್ದಾರೆ. ಠಾಣೆಯ ಪಿಎಸ್ಐ ಗಜಾನನ ಹೋಮ್ ಗಾರ್ಡ್ ಕೈಯಲ್ಲಿ ತಮ್ಮ ಖಾಸಗಿ ಕಾರನ್ನು ಕ್ಲೀನ್ ಮಾಡಿಸಿಕೊಂಡಿದ್ದಾರೆ.
Advertisement
ಬಂದೋಬಸ್ತ್ ಡ್ಯೂಟಿಗೆ ಬಂದ ಹೋಮ್ ಗಾರ್ಡ್ ಸಮವಸ್ತ್ರ ಕಳಚಿ ಠಾಣೆಯ ಮೈದಾನದಲ್ಲಿ ಪಿಎಸ್ಐ ಗಜಾನನ ಕಾರನ್ನು ಕ್ಲೀನ್ ಮಾಡಿದ್ದಾರೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನಲ್ಲಿ ಕೆಂಬಾವಿ ಪೊಲೀಸ್ ಠಾಣೆ ಇದೆ.
Advertisement
Advertisement
ಪಿಎಸ್ಐ ವರ್ತನೆಗೆ ಸಾರ್ವಜನಿಕರು ಅಸಮಾಧಾನ ಹೊರಹಾಕಿತ್ತಿದ್ದು, ಕಾನೂನು ಕರ್ತವ್ಯ ನಿರ್ವಹಿಸುವವರು ಎಲ್ಲರೂ ಒಂದೇ. ಆದರೆ ಯಾದಗಿರಿ ಪೊಲೀಸ್ ಇಲಾಖೆಯಲ್ಲಿ ಮಾತ್ರ ಹಿರಿಯ ಅಧಿಕಾರಿಗಳು, ಕೆಳ ಹಂತದ ಸಿಬ್ಬಂದಿಯನ್ನು ಗುಲಾಮರಂತೆ ಕಾಣುತ್ತಿರುವುದು ಬ್ರಿಟಿಷ್ ಅಧಿಕಾರಿಗಳ ದರ್ಪವನ್ನು ನೆನಪು ಮಾಡುತ್ತಿದೆ ಎಂದು ಅಸಮಾಧಾನ ಹೊರ ಹಾಕುತ್ತಿದ್ದಾರೆ. ಇದನ್ನೂ ಓದಿ: ಮಂಡ್ಯಕ್ಕೆ ಅಂಬರೀಶ್ ಕೊಡುಗೆ ಶೂನ್ಯ, ಸಿನಿಮಾದಂತೆಯೇ ಸಂಸದೆಯಾಗಿ ಸುಮಲತಾ ನಟನೆ : ಶಿವರಾಮೇಗೌಡ
Advertisement