– ಟೆಸ್ಟಿಂಗ್ ನಲ್ಲಿಯೂ ಇಳಿಕೆ
ಬೆಂಗಳೂರು: ಕಳೆದ ನಾಲ್ಕೈದು ದಿನಗಳಿಂದ ಅರ್ಧ ಲಕ್ಷಕ್ಕೆ ಸನೀಹದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ವರದಿಯಾಗುತಿತ್ತು. ಇಂದು ಈ ಪ್ರಮಾಣದಲ್ಲಿ ಕೊಂಚ ಇಳಿಕೆಯಾಗಿದ್ದು, 39,305 ಹೊಸ ಪ್ರಕರಣಗಳು ವರದಿಯಾಗಿವೆ. ಆದ್ರೆ ರಾಜ್ಯದಲ್ಲಿ ಮರಣ ಕೇಕೆ ಮುಂದುವರಿದಿದ್ದು 596 ಜನ ಸಾವನ್ನಪ್ಪಿದ್ದಾರೆ. ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 19,372ಕ್ಕೆ ಏರಿಕೆಯಾಗಿದೆ.
Advertisement
ಇಂದು 32,188 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.31.66 ಮತ್ತು ಮರಣ ಪ್ರಮಾಣ ಶೇ.1.51ರಷ್ಟಿದೆ. ಟೆಸ್ಟಿಂಗ್ ಇಳಿಕೆಯಾಗಿದ್ದು, ಇಂದು 1,24,110 ಸ್ಯಾಂಪಲ್ ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ.
Advertisement
Advertisement
ರಾಜಧಾನಿ ಬೆಂಗಳೂರಿನಲ್ಲಿ ಇವತ್ತು 16,747 ಹೊಸ ಪ್ರಕರನಗಳು ವರದಿಯಾಗಿದ್ದು, 374 ಸೋಂಕಿತರು ಸಾವನ್ನಪ್ಪಿದ್ದಾರೆ. ಸದ್ಯ ಬೆಂಗಳೂರಿನಲ್ಲಿ 3,52,454 ಸಕ್ರಿಯ ಪ್ರಕರಣಗಳಿವೆ.
Advertisement
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 968, ಬಳ್ಳಾರಿ 973, ಬೆಳಗಾವಿ 736, ಬೆಂಗಳೂರು ಗ್ರಾಮಾಂತರ 704, ಬೆಂಗಳೂರು ನಗರ 16,747, ಬೀದರ್ 305, ಚಾಮರಾಜನಗರ 623, ಚಿಕ್ಕಬಳ್ಳಾಪುರ 599, ಚಿಕ್ಕಮಗಳೂರು 362, ಚಿತ್ರದುರ್ಗ 172, ದಕ್ಷಿಣ ಕನ್ನಡ 1,175, ದಾವಣಗೆರೆ 197, ಧಾರವಾಡ 1,006, ಗದಗ 332, ಹಾಸನ 1,800, ಹಾವೇರಿ 214, ಕಲಬುರಗಿ 988, ಕೊಡಗು 534, ಕೋಲಾರ 755, ಕೊಪ್ಪಳ 412, ಮಂಡ್ಯ 1,133, ಮೈಸೂರು 1,537, ರಾಯಚೂರು 582, ರಾಮನಗರ 337, ಶಿವಮೊಗ್ಗ 820, ತುಮಕೂರು 2,168, ಉಡುಪಿ 855, ಉತ್ತರ ಕನ್ನಡ 885, ವಿಜಯಪುರ 659 ಮತ್ತು ಯಾದಗಿರಿಯಲ್ಲಿ 727 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.