– ಬಿಜೆಪಿ ಕಾರ್ಯಕರ್ತರು ರೈತರಿಗೆ ಸುಲಭವಾಗಿ ಅರ್ಥೈಸಿ
ನವದೆಹಲಿ: ಹಿಂದಿನ ಸರ್ಕಾರಗಳು ರೈತರಿಗೆ ಮತ್ತು ಕಾರ್ಮಿಕರಿಗೆ ಅರ್ಥವಾಗದ ಭರವಸೆ ಮತ್ತು ಕಾನೂನುಗಳನ್ನು ರೂಪಿಸಿದೆ. ಅದನ್ನು ಬದಲಿಸಲು ಎನ್ಡಿಎ ಸರ್ಕಾರ ನಿರಂತರ ಪ್ರಯತ್ನ ಮಾಡುತ್ತಿದೆ. ಹೊಸ ಕೃಷಿ ಸುಧಾರಣೆಗಳು ರೈತರಿಗೆ ಅರ್ಥವಾಗಬೇಕಿದ್ದು, ಬಿಜೆಪಿ ಕಾರ್ಯಕರ್ತರು ರೈತರ ಬಳಿ ಹೋಗಿ ಸುಲಭ ಭಾಷೆಯಲ್ಲಿ ಅರ್ಥೈಸಿ ಎಂದು ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಕಾರ್ಯಕರ್ತರಿಗೆ ಕರೆ ಕೊಟ್ಟಿದ್ದಾರೆ.
ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಜನ್ಮದಿನದ ಹಿನ್ನಲೆಯಲ್ಲಿ ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆಗೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು. ಎನ್ಡಿಎ ಸರ್ಕಾರ ರೈತ ಪರ ಹಲವು ಮಹತ್ವದ ನಿರ್ಧಾರಗಳನ್ನು ತಗೆದುಕೊಂಡಿದೆ ಎಂದರು.
Advertisement
Addressing @BJP4India Karyakartas on Deendayal Ji’s Jayanti. https://t.co/UgKJlUOR0O
— Narendra Modi (@narendramodi) September 25, 2020
Advertisement
ಎನ್ಡಿಎ ಸರ್ಕಾರ ತನ್ನ ಅವಧಿಯಲ್ಲಿ ರೈತರನ್ನು ಬ್ಯಾಂಕುಗಳೊಂದಿಗೆ ಸಂಪರ್ಕಿಸಿದೆ. ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿ ಒಂದು ಲಕ್ಷ ಕೋಟಿ ನೆರವು ನೀಡಿದ್ದು, ಇದರಿಂದ 10 ಲಕ್ಷ ಕೋಟಿ ರೈತರಿಗೆ ನೆರವಾಗಿದೆ. ಜೊತೆಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಿಂದ ರೈತರಿಗೆ ಸುಲಭವಾಗಿ ಸಾಲ ಸಿಗುತ್ತಿದ್ದು, ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಿದೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದರು.
Advertisement
Advertisement
ಸರ್ಕಾರ ಜಾರಿಗೆ ತಂದಿರುವ ಕಾರ್ಮಿಕ ಹೊಸ ನೀತಿಗಳು ಮಹತ್ವದ ಬದಲಾವಣೆ ತಂದಿದೆ ಕಾರ್ಮಿಕರ ಜೀವನವನ್ನು ಬದಲಿಸಿದೆ. ಈವರೆಗೂ 30% ಕಾರ್ಮಿಕರು ಕನಿಷ್ಠ ವೇತನದ ಅಡಿ ಇದ್ದರು ಹೊಸ ಕಾನೂನಿನ ಮೂಲಕ ಅಸಂಘಟಿತ ವರ್ಗ ಮತ್ತು ಎಲ್ಲ ಕೈಗಾರಿಕಾ ಕಾರ್ಮಿಕರನ್ನು ಈ ವ್ಯಾಪ್ತಿಗೆ ತರಲಾಗಿದೆ. ಸ್ವಾತಂತ್ರ್ಯದ ಬಳಿಕ ರೈತರು ಮತ್ತು ಕಾರ್ಮಿಕರಿಗೆ ದೊಡ್ಡ ಭರವಸೆಗಳನ್ನು ನೀಡಲಾಗಿತ್ತು. ಚುನಾವಣಾ ಸಂದರ್ಭದಲ್ಲಿ ದೊಡ್ಡ ಪ್ರಣಾಳಿಕೆ ನೀಡಲಾಗಿತ್ತು. ಆದರೆ ಇದ್ಯಾವುದು ಜಾರಿಗೆ ಬಂದಿಲ್ಲ ಎಂದರು.
ಭರವಸೆಗಳೆಲ್ಲ ಟೊಳ್ಳಾಗಿದೆ ರೈತರು ಸರ್ಕಾರದ ಹಳೆ ನೀತಿಗಳಿಗೆ ಕಾನೂನುಗಳಿಗೆ ಸಿಕ್ಕಿ ಹಾಕಿಕೊಂಡಿದ್ದಾರೆ. ಬೇಕಾದ ಕಡೆ ತಮ್ಮ ಉತ್ಪನ್ನ ಮಾರಾಟ ಮಾಡಲು ಸಾಧ್ಯವಾಗಿಲ್ಲ. ಇದು ಇಳುವರಿ ಹೆಚ್ಚಿದರೂ ಹೆಚ್ಚು ಆದಾಯ ಬಾರದಂತಾಯಿತು. ಹೀಗಾಗಿ ರೈತರ ಸಾಲ ಹೆಚ್ಚಾಗಿದ್ದು ಹೊಸ ಕಾನೂನು ರೈತರ ಉತ್ಪನ್ನ ಮಾರಾಟಕ್ಕೆ ಮುಕ್ತ ಅವಕಾಶ ನೀಡಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.