ಹಾಸನ: ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕು ತುಂಬಾನೇ ಸೂಕ್ಷ್ಮ ತಾಲೂಕಾಗಿದ್ದು, ಇಲ್ಲಿಗೆ ಹೊರರಾಜ್ಯದಿಂದ ಬರುವವರನ್ನು 15 ದಿನಕ್ಕೆ ಒಂದು ತಂಡದಂತೆ ಹಂತ ಹಂತವಾಗಿ ಕಳುಹಿಸಬೇಕೆಂದು ಶಾಸಕ ಸಿ.ಎನ್ ಬಾಲಕೃಷ್ಣ ಮನವಿ ಮಾಡಿದ್ದಾರೆ.
ಚನ್ನರಾಯಪಟ್ಟಣದಲ್ಲಿ ಒಂದು ಲಕ್ಷ ಮಾಸ್ಕ್, 10 ಸಾವಿರ ಸ್ಯಾನಿಟೈಸರ್ ವಿತರಿಸಿ ಮಾತನಾಡಿದ ಶಾಸಕರು, ಹೊರರಾಜ್ಯದಿಂದ ಬರುವವರು ನಮ್ಮ ಅಣ್ಣ-ತಮ್ಮಂದಿರಿದ್ದಂತೆ. ಆದರೆ ಮಂಡ್ಯ ಜಿಲ್ಲೆಯ ಕೆಆರ್ ಪೇಟೆ, ನಾಗಮಂಗಲಕ್ಕೆ ಹೋಗುವವರು ಮತ್ತು ಮಂಗಳೂರು, ಕೇರಳಕ್ಕೆ ಹೋಗುವವರು ಇಲ್ಲೇ ಹೋಗುವ ಸನ್ನಿವೇಶ ಇದೆ. ಮುಂಬೈನಿಂದ ಬರುವವರು ಕೂಡ ಇಲ್ಲೇ ಬರುತ್ತಾರೆ. ಇದು ನಮಗೆ ದೊಡ್ಡ ಸಂಕಷ್ಟವಾಗಿದೆ ಎಂದು ಆತಂಕ ಹೊರಹಾಕಿದ್ರು.
Advertisement
Advertisement
ಈಗಾಗಲೇ ನೂರಕ್ಕೂ ಹೆಚ್ಚು ಜನ ಹೊರ ರಾಜ್ಯದಿಂದ ಚನ್ನರಾಯಪಟ್ಟಣಕ್ಕೆ ಬಂದಿದ್ದಾರೆ. 1,500 ಜನ ಚನ್ನರಾಯಪಟ್ಟಣಕ್ಕೆ ಬರುವವರಿದ್ದಾರೆ. ಇವರನ್ನೆಲ್ಲ ಒಟ್ಟಿಗೆ ಕಳುಹಿಸಿದ್ರೆ ಪ್ರೊಟೀನ್ ಯುಕ್ತ ಊಟ ಉಪಚಾರ ಕೊಡುವುದು, ವ್ಯವಸ್ಥಿತವಾಗಿ ಕ್ವಾರಂಟೈನ್ ಮಾಡುವುದು ಕಷ್ಟ ಆಗುತ್ತೆ. ಹೀಗಾಗಿ ಹದಿನೈದು ದಿನಕ್ಕೆ ಒಂದು ತಂಡದಂತೆ ಹೊರರಾಜ್ಯದಿಂದ ಜನರನ್ನು ಕಳುಹಿಸಲು ವ್ಯವಸ್ಥೆ ಮಾಡಬೇಕು ಎಂದು ಮುಖ್ಯಮಂತ್ರಿಗಳಿಗೆ ಶಾಸಕ ಬಾಲಕೃಷ್ಣ ಮನವಿ ಮಾಡಿದ್ರು.
Advertisement
Advertisement
ಇದೇ ವೇಳೆ ಕೊಬ್ಬರಿ ಬೆಲೆ 14 ಸಾವಿರದಿಂದ 9500 ರೂಪಾಯಿಗೆ ಕುಸಿದಿದೆ. ಆದ್ದರಿಂದ ಕೊಬ್ಬರಿಗೆ ಕನಿಷ್ಟ 5 ಸಾವಿರ ಬೆಂಬಲ ಬೆಲೆ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.