– ಚಲಿಸುತ್ತಿದ್ದ ಟೆಂಪೋದಿಂದ ಜಿಗಿಯ ಪ್ರಯಾಣಿಕರು
ಜೈಪುರ: 15 ಜನರು ಪ್ರಯಾಣಿಸುತ್ತಿದ್ದ ಟೆಂಪೋ ಬೆಂಕಿಗಾಹುತಿಯಾಗಿರುವ ಘಟನೆ ರಾಜಸ್ಥಾನದ ಸಿಕರ್ ಜಿಲ್ಲೆಯ ನಿಮಕಾಥಾನ್ ದಲ್ಲಿ ಇಂದು ಬೆಳಗ್ಗೆ ನಡೆದಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಪ್ರಯಾಣಿಕರು ಚಲಿಸುತ್ತಿದ್ದ ಟೆಂಪೋದಿಂದ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ.
Advertisement
ಟೆಂಪೋದಲ್ಲಿ ಚಾಲಕ ಸೇರಿದಂತೆ 15 ಜನರು ಪ್ರಯಾಣಿಸುತ್ತಿದ್ದರು. ಟೆಂಪೋ ನಿಮಕಾಥಾನ್ ದಿಂದ ಪಾಟ್ನಾದತ್ತ ಹೊರಟಿತ್ತು. ಇಂದು ಬೆಳಗ್ಗೆ ಸುಮಾರು 9 ಗಂಟೆಗೆ ಚಲಿಸುತ್ತಿದ್ದ ಟೆಂಪೋದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಕೆಲ ಪ್ರಯಾಣಿಕರು ಜಿಗಿದಿದ್ದಾರೆ. ಇತ್ತ ಚಾಲಕ ಸಹ ವಾಹನ ನಿಲ್ಲಿಸಿ ಇನ್ನುಳಿದ ಪ್ರಯಾಣಿಕರನ್ನ ಕೆಳಗೆ ಇಳಿಸಿ ದೂರ ಕರೆದುಕೊಂಡು ಹೋಗಿದ್ದಾನೆ.
Advertisement
Advertisement
ಟೆಂಫೋಗೆ ಬೆಂಕಿ ತಗುಲಿದ ಪರಿಣಾಮ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಕೂಡಲೇ ಸ್ಥಳೀಯರು ಗ್ರಾಮದಲ್ಲಿನ ನೀರಿನ ಟ್ಯಾಂಕರ್ ತರಿಸಿ ಬೆಂಕಿ ನಂದಿಸಿದ್ದಾರೆ. ಆದ್ರೆ 25 ನಿಮಿಷಲ್ಲಿ ಟೆಂಪೋ ಸುಟ್ಟು ಭಸ್ಮವಾಗಿತ್ತು. ಚಲಿಸುತ್ತಿದ್ದ ವಾಹನದಿಂದ ಜಿಗಿದ ಕೆಲ ಪ್ರಯಾಣಿಕರಿಗೆ ತರಚಿದ ರೀತಿಯಲ್ಲಿ ಗಾಯಗಳಾಗಿವೆ. ಬೆಂಕಿ ಯಾಕೆ ಹತ್ತಿಕೊಂಡಿತು ಎಂಬುದರ ಬಗ್ಗೆ ನಿಖರ ಕಾರಣ ತಿಳಿದು ಬಂದಿಲ್ಲ.
Advertisement