– 7 ಬಾರಿ ಕೊಹ್ಲಿ ವಿಕೆಟ್ ತೆಗೆದು ದಾಖಲೆ ಬರೆದ ಸಂದೀಪ್ ಶರ್ಮಾ
ಶಾರ್ಜಾ: ಇಂದು ಸಖತ್ ಶನಿವಾರದ ಎರಡನೇ ಮ್ಯಾಚಿನಲ್ಲಿ ಮೊದಲು ಬ್ಯಾಟ್ ಮಾಡಿದ ಬೆಂಗಳೂರು ತಂಡ ಹೈದರಾಬಾದ್ ತಂಡಕ್ಕೆ ಕೇವಲ 121 ರನ್ಗಳ ಗುರಿ ನೀಡಿದೆ.
ಇಂದು ಶಾರ್ಜಾ ಮೈದಾನದಲ್ಲಿ ನಡೆಯುತ್ತಿರುವ ಐಪಿಎಲ್-2020ಯ 52ನೇ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆರಂಭದಿಂದಲೇ ವಿಕೆಟ್ ಕಳೆದುಕೊಂಡು ಮಂದಗತಿಯ ಬ್ಯಾಟಿಂಗ್ಗೆ ಮುಂದಾಯ್ತು. ಪರಿಣಾಮ ಸಂದೀಪ್ ಶರ್ಮಾ ಮತ್ತು ರಶೀದ್ ಖಾನ್ ಬೌಲಿಂಗ್ ದಾಳಿಗೆ ತತ್ತರಿಸಿ ನಿಗದಿ 20 ಓವರಿನಲ್ಲಿ ಕೇವಲ 120 ರನ್ಗಳನ್ನು ಪೇರಿಸಿತು.
Advertisement
Innings Break!
Another superb bowling display by #SRH as they restrict #RCB to a total of 120/7 on the board.
Scorecard – https://t.co/pVpZmFgN1J #Dream11IPL pic.twitter.com/0RJxmyowdW
— IndianPremierLeague (@IPL) October 31, 2020
Advertisement
ಸಂದೀಪ್ ಶರ್ಮಾ ಬೌಲಿಂಗ್ ದಾಳಿ
ಇಂದು ಆರಂಭದಿಂದಲೇ ಹೈದರಾಬಾದ್ ಬೌಲರ್ಗಳು ಕೊಹ್ಲಿ ಪಡೆಯ ಮೇಲೆ ಸವಾರಿ ಮಾಡಿದರು. ಇದರಲ್ಲಿ ಉತ್ತಮವಾಗಿ ಬೌಲ್ ಮಾಡಿದ ಸಂದೀಪ್ ಶರ್ಮಾ ತಮ್ಮ ಕೋಟಾದ ನಾಲ್ಕು ಓವರ್ ಬೌಲ್ ಮಾಡಿ ಕೇವಲ 20 ರನ್ ನೀಡಿ ಎರಡು ವಿಕೆಟ್ ಪಡೆದರು. ಅದರಲ್ಲಿ ಕೊಹ್ಲಿಯನ್ನು ಔಟ್ ಮಾಡಿ ಐಪಿಎಲ್ ಇತಿಹಾಸದಲ್ಲಿ ಕೊಹ್ಲಿಯನ್ನು ಏಳು ಬಾರಿ ಔಟ್ ಮಾಡಿದ ಮೊದಲ ಆಟಗಾರ ಎನಿಸಿಕೊಂಡರು. ಜೊತೆಗೆ ಐಪಿಎಲ್ನಲ್ಲಿ ಪವರ್ ಪ್ಲೇ ಹಂತದಲ್ಲಿ 51 ವಿಕೆಟ್ ಪಡೆಯುವ ಮೂಲಕ ಪವರ್ ಪ್ಲೇ ಅವಧಿಯಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಎರಡನೇ ಭಾರತೀಯ ಬೌಲರ್ ಆಗಿದ್ದಾರೆ. 52 ವಿಕೆಟ್ ಪಡೆದ ಜಹೀರ್ ಖಾನ್ ಅವರು ಮೊದಲ ಸ್ಥಾನದಲ್ಲಿ ಇದ್ದಾರೆ.
Advertisement
WATCH – Sandeep snaps DDP & VK
Two wickets in quick succession and both were picked by @sandeep25a. A combination of good bowling and smart captaincy got #SRH the wickets. https://t.co/3vM5Y7xP3L #Dream11IPL
— IndianPremierLeague (@IPL) October 31, 2020
Advertisement
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸನ್ರೈಸರ್ಸ್ ಹೈದರಾಬಾದ್ ತಂಡ ಬೌಲರ್ ಸಂದೀಪ್ ಶರ್ಮಾ ಆರಂಭಿಕ ಆಘಾತ ನೀಡಿದರು. ಎರಡನೇ ಓವರ್ 5ನೇ ಬಾಲಿನಲ್ಲಿ ಐದು ರನ್ಗಳಿಸಿ ಆಡುತ್ತಿದ್ದ ಇನ್ ಫಾರ್ಮ್ ಆಟಗಾರ ದೇವದತ್ ಪಡಿಕ್ಕಲ್ ಅವರನ್ನು ಶರ್ಮಾ ಬೌಲ್ಡ್ ಮಾಡಿದರು. ನಂತರ ಕಣಕ್ಕಿಳಿದ ನಾಯಕ ವಿರಾಟ್ ಕೊಹ್ಲಿ 7 ಬಾಲಿಗೆ ಏಳು ರನ್ ಸಿಡಿಸಿ ಕೇನ್ ವಿಲಿಯಮ್ಸನ್ ಅವರಿಗೆ ಕ್ಯಾಚ್ ಕೊಟ್ಟು ಹೊರನಡೆದರು.
500 runs and counting for @gurkeeratmann22 in IPL ????#Dream11IPL pic.twitter.com/ASxcqQ9JKH
— IndianPremierLeague (@IPL) October 31, 2020
ಪವರ್ ಪ್ಲೇ ಹಂತದಲ್ಲಿ ಎರಡು ಪ್ರಮುಖ ಎರಡು ವಿಕೆಟ್ ಕಳೆದುಕೊಂಡ ಬೆಂಗಳೂರು ತಂಡ ಆರನೇ ಓವರ್ ಮುಕ್ತಾಯಕ್ಕೆ 2 ವಿಕೆಟ್ ಕಳೆದುಕೊಂಡು 30 ರನ್ ಪೇರಿಸಿತು. ನಂತರ ಜೊತೆಯಾದ ಜೋಶ್ ಫಿಲಿಪ್ ಮತ್ತು ಎಬಿ ಡಿವಿಲಿಯರ್ಸ್ 38 ಬಾಲಿನಲ್ಲಿ 43 ರನ್ಗಳ ಜೊತೆಯಾಟವಾಡಿದರು. ಆದರೆ 24 ಬಾಲಿಗೆ 24 ರನ್ ಗಳಿಸಿ ಆಡುತ್ತಿದ್ದ ಎಬಿ ಡಿವಿಲಿಯರ್ಸ್ ಅವರು ಶಹಬಾಜ್ ನದೀಮ್ಗೆ ಔಟ್ ಆಗಿ ಪೆವಿಲಿಯನ್ ಸೇರಿದರು.
Advantage @SunRisers ????#Dream11IPL pic.twitter.com/gOFmexk7Eh
— IndianPremierLeague (@IPL) October 31, 2020
ವಿಲಿಯರ್ಸ್ ನಂತರ ಆರಂಭದಿಂಲೂ ತಾಳ್ಮೆಯಿಂದ ಆಡಿಕೊಂಡು ಬಂದಿದ್ದ ಜೋಶ್ ಫಿಲಿಪ್ ಅವರು 32 ರನ್ ಹೊಡೆದು ರಶೀದ್ ಖಾನ್ ಅವರ ಬೌಲಿಂಗ್ ಮೋಡಿಗೆ ಕ್ಯಾಚ್ ಕೊಟ್ಟು ಹೊರನಡೆದರು. ನಂತರ ಗುರ್ಕೀರತ್ ಸಿಂಗ್ ಮನ್ ಮತ್ತು ವಾಷಿಂಗ್ಟನ್ ಸುಂದರ್ ತಾಳ್ಮೆಯಿಂದ ರನ್ ಕಲೆಹಾಕಿ 16ನೇ ಓವರಿನಲ್ಲಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು. ನಂತರ ವಾಷಿಂಗ್ಟನ್ ಸುಂದರ್ ಅವರು ಔಟ್ ಆದರು.
#RCB lose two wickets in the powerplay with 30 runs on the board.
Live – https://t.co/pVpZmFgN1J #Dream11IPL pic.twitter.com/0fTAWsH66M
— IndianPremierLeague (@IPL) October 31, 2020
ಇದಾದ ನಂತರ ಮೂರು ರನ್ಗಳಿಸಿದ್ದ ಕ್ರಿಸ್ ಮೋರಿಸ್ ಅವರು ಕೂಡ ಕ್ಯಾಚ್ ಕೊಟ್ಟು ಹೊರನೆಡೆದರು. ನಂತರ ಬಂದ ಇಸುರು ಉದಾನಾ ಅವರು ಕೂಡ ದೊಡ್ಡ ಹೊಡೆತಕ್ಕೆ ಕೈ ಹಾಕಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.