– ಅವಕಾಶ ಬಂದ್ರೆ ಎರಡು ಕೈಯಿಂದ ಬಾಚಿಕೊಳ್ತೇನೆ
ಬೆಂಗಳೂರು: ಸನ್‍ರೈಸಸ್ ಹೈದರಾಬಾದ್ ತಂಡದ ಸ್ಪಿನ್ನರ್ ರಶೀದ್ ಖಾನ್ ಬೌಲಿಂಗ್ ವಿರುದ್ಧ ಬ್ಯಾಟ್ ಬೀಸುವುದು ಬಹಳ ಕಷ್ಟ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ದೇವದತ್ ಪಡಿಕ್ಕಲ್ ಹೇಳಿದ್ದಾರೆ.
ಕರ್ನಾಟಕದ ದೇವದತ್ ಪಡಿಕ್ಕಲ್ ಈ ಬಾರಿ ತಾವಾಡಿದ ಮೊದಲ ಐಪಿಎಲ್ ಆವೃತ್ತಿಯಲ್ಲೇ ದಾಖಲೆಯ ಆಟವಾಡಿದ್ದಾರೆ. ಆರ್‌ಸಿಬಿ ಪರ ಆರಂಭಿಕನಾಗಿ ಬ್ಯಾಟ್ ಬೀಸಿ ಐದು ಅರ್ಧಶತಕಗಳನ್ನು ಸಿಡಿಸುವ ಮೂಲಕ ಸಾಧನೆ ಮಾಡಿದ್ದಾರೆ. ಜೊತೆಗೆ ವಿಶ್ವದ ಡೆಡ್ಲಿ ಬೌಲರ್ ಗಳಾದ ಜಸ್ಪ್ರಿತ್ ಬುಮ್ರಾ, ಟ್ರೆಂಟ್ ಬೌಲ್ಟ್ ಮತ್ತು ಕಗಿಸೊ ರಬಾಡಾರನ್ನು ಸಮರ್ಥವಾಗಿ ಎದುರಿಸು ತಮ್ಮ ಬ್ಯಾಟಿಂಗ್ ಸಾಮರ್ಥ್ಯವನ್ನು ಸಾಬೀತು ಮಾಡಿದ್ದಾರೆ.
Advertisement
Advertisement
ಐಪಿಎಲ್ ಮುಗಿದ ನಂತರ ಬೌಲರ್ ಗಳ ವಿಚಾರವಾಗಿ ಮಾತನಾಡಿರುವ ಪಡಿಕ್ಕಲ್, ನಾನು ದೇಶೀಯ ಕ್ರಿಕೆಟ್‍ನಲ್ಲಿ ವೇಗದ ಬೌಲರ್ ಗಳನ್ನು ಫೇಸ್ ಮಾಡಿದ್ದೇನೆ. ಹೀಗಾಗಿ ವೇಗದ ಬೌಲರ್ ಗಳನ್ನು ಐಪಿಎಲ್‍ನಲ್ಲಿ ಸಮರ್ಥವಾಗಿ ಎದುರಿಸಿದ್ದೇನೆ. ಆದರೆ ಐಪಿಎಲ್‍ನಲ್ಲಿ ಸ್ಪಿನ್ ಬೌಲರ್ ಗಳನ್ನು ಫೇಸ್ ಮಾಡುವುದು ಬಹಳ ಕಷ್ಟವಾಗಿತ್ತು. ಅದರಲ್ಲೂ ಹೈದರಾಬಾದ್ ತಂಡದ ಸ್ಪಿನ್ನರ್ ರಶೀದ್ ಖಾನ್ ವಿರುದ್ಧ ಬ್ಯಾಟ್ ಬೀಸುವುದು ಕಷ್ಟ ಎಂದು ಹೇಳಿದ್ದಾರೆ.
Advertisement
Advertisement
ಐಪಿಎಲ್‍ನಲ್ಲಿ ಭರ್ಜರಿ ಪ್ರದರ್ಶನ ನೀಡಿದರು. ಪಡಿಕ್ಕಲ್ ಆಸ್ಟ್ರೇಲಿಯಾ ವಿರುದ್ಧದ ಟಿ-20 ಸರಣಿಗೆ ಆಯ್ಕೆಯಾಗುವಲ್ಲಿ ವಿಫಲರಾದರು. ಆದರೆ ಈ ವಿಚಾರವಾಗಿ ಮಾತನಾಡಿರುವ ಪಡಿಕ್ಕಲ್, ತಮ್ಮ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗುವುದು ಪ್ರತಿಯೊಬ್ಬ ಕ್ರಿಕೆಟ್ ಆಟಗಾರನ ಡ್ರೀಮ್ ಆಗಿರುತ್ತದೆ. ನಾನು ಕೂಡ ಟೀಂ ಇಂಡಿಯಾಗೆ ಆಡುವ ಆಸೆ ಇಟ್ಟುಕೊಂಡಿದ್ದೇನೆ. ಅದಕ್ಕಾಗಿಯೇ ಶ್ರಮ ಪಡುತ್ತಿದ್ದೇನೆ. ಅವಕಾಶ ಬಂದರೆ ಎರಡೂ ಕೈಯಿಂದ ಬಾಚಿಕೊಳ್ಳುತ್ತೇನೆ ಎಂದು ಪಡಿಕ್ಕಲ್ ತಿಳಿಸಿದ್ದಾರೆ.
ಐಪಿಎಲ್ 2020ರ ಆವೃತ್ತಿ ಉದಯೋನ್ಮುಖ ಆಟಗಾರ ಪ್ರಶಸ್ತಿ ಪಡೆದಿದ್ದ ಪಡಿಕ್ಕಲ್, ಮಾಧ್ಯಮಗಳೊಂದಿಗೆ ಮಾತನಾಡಿ, ಇದು ಆರಂಭ ಮಾತ್ರ. ನನ್ನ ಆಟ ಮತ್ತಷ್ಟು ಸುಧಾರಿಸಿಕೊಳ್ಳಬೇಕಿದೆ. ಇನ್ನಿಂಗ್ಸ್ ಆರಂಭ ಮಾಡುವ ವಿಚಾರದಲ್ಲಿ ವಿರಾಟ್ ಕೊಹ್ಲಿ ಸಾಕಷ್ಟು ಸಹಾಯ ಮಾಡಿದ್ದರು. ಯಶಸ್ಸನ್ನು ತಲೆಗೇರಿಕೊಳ್ಳದೆ ಶ್ರಮವಹಿಸಿಬೇಕು. ದೇಶಕ್ಕಾಗಿ ಆಡಬೇಕು ಎಂಬ ಅಲೋಚನೆಗಳನ್ನು ಬಿಟ್ಟು ಕೇವಲ ನಿನ್ನ ಆಟವನ್ನು ಎಂಜಾಯ್ ಮಾಡುತ್ತಾ ಮುಂದೇ ಸಾಗು. ಎಲ್ಲವೂ ನಡೆಯಬೇಕಾದ ಸಂದರ್ಭದಲ್ಲಿ ನಡೆಯುತ್ತದೆ ಎಂದು ಸಲಹೆ ನೀಡಿದ್ದರು ಎಂದು ಪಡಿಕ್ಕಲ್ ತಿಳಿಸಿದ್ದಾರೆ.
2020ರ ಆವೃತ್ತಿಯಲ್ಲಿ ಪ್ಲೇ ಆಫ್ ಪ್ರವೇಶಿಸಿದ ಆರ್‌ಸಿಬಿ ತಂಡದಲ್ಲಿ ಪಡಿಕ್ಕಲ್ ಹೆಚ್ಚು ಗಮನ ಸೆಳೆದರು. ಟೂರ್ನಿಯಲ್ಲಿ 15 ಪಂದ್ಯಗಳನ್ನು ಆಡಿರುವ ಯುವ ಆಟಗಾರ ಪಡಿಕ್ಕಲ್ 5 ಶತಕದ ಜೊತೆಗೆ 473 ರನ್ಸ್ ಗಳಿಸಿದ್ದು, ಪಾದಾರ್ಪಣೆ ಮಾಡಿದ ವರ್ಷದಲ್ಲೇ ಅತ್ಯಧಿಕ ರನ್ ಗಳಿಸಿದ ಶ್ರೇಯಸ್ ಅಯ್ಯರ್ ದಾಖಲೆಯನ್ನು ಅಳಿಸಿ ಹಾಕಿದ್ದರು.