– ಮನೆ, ಸ್ಟೇಡಿಯಂಗಳಲ್ಲೂ ಚಿಕಿತ್ಸೆಗೆ ಚಿಂತನೆ
ಬೆಂಗಳೂರು: ರಾಜ್ಯಕ್ಕೆ ಕೊರೊನಾ ಮಹಾಕಂಟಕ ತಪ್ಪುವ ಲಕ್ಷಣಗಳೇ ಕಾಣುತ್ತಿಲ್ಲ. ಇವತ್ತು ಒಂದೇ ದಿನ 271 ಕೇಸ್ ದಾಖಲಾಗಿದೆ. ಇದರಲ್ಲಿ ಬಳ್ಳಾರಿ 97, ಬೆಂಗಳೂರು 36 ಕೇಸ್ಗಳಿವೆ. ಈ ಮೂಲಕ 6,516ಕ್ಕೆ ಸೋಂಕಿನ ಸಂಖ್ಯೆ ಏರಿದೆ. ಗರಿಷ್ಠ ಒಂದೇ ದಿನ 7 ಮಂದಿ ಸಾವನ್ನಪ್ಪಿದ್ದಾರೆ.
ಮೂರ್ನಾಲ್ಕು ತಿಂಗಳು ಕೊರೊನಾ ಜೊತೆಯೇ ನಾವೆಲ್ಲಾ ಸಹಜೀವನ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಜೂನ್ ತಿಂಗಳಲ್ಲಿ ಕೋವಿಡ್-19 ಆರ್ಭಟಿಸುತ್ತಿರುವ ಹೊತ್ತಲ್ಲೇ ಜುಲೈ, ಆಗಸ್ಟ್ ನಂತರವೂ ಕೊರೊನಾ ಸೋಂಕು ಉತ್ತುಂಗಕ್ಕೆ ಏರಲಿದೆ ಎಂದು ರಾಜ್ಯ ಸರ್ಕಾರಕ್ಕೆ ತಜ್ಞರು ಎಚ್ಚರಿಕೆ ಕೊಟ್ಟಿದ್ದಾರೆ. ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ 600 ಕೇಸ್ ದಾಟಿದ್ದು, ಕಳೆದ 10 ದಿನದಿಂದ ಕೇಸ್ಗಳು ಡಬಲ್ ಆಗುತ್ತಲೇ ಇವೆ. ಇದರಿಂದಾಗಿ ಮುಂಬೈ, ದೆಹಲಿ ಪರಿಸ್ಥಿತಿ ಬಂದೊದಗುತ್ತಾ ಎನ್ನುವ ಆತಂಕ ಎದುರಾಗಿದೆ.
Advertisement
Advertisement
ರಾಕೆಟ್ ವೇಗದಲ್ಲಿ ಜಿಗಿಯುತ್ತಿರುವ ಕೊರೋನಾ ಕಂಟ್ರೋಲ್ಗೆ ಸರ್ಕಾರ ‘ಪ್ಲಾನ್’ ಬಿ ಮತ್ತು ಪ್ಲಾನ್ `ಸಿ’ ರೆಡಿ ಮಾಡಿಕೊಂಡಿದೆ. ಈ ಮೂಲಕ ಸೋಂಕನ್ನು ನಿಯಂತ್ರಿಸಲು ಸಿದ್ಧತೆ ನಡೆಸಿದೆ ಎನ್ನಲಾಗಿದೆ. ‘ಪ್ಲಾನ್’ ಬಿ ಮನೆಯಲ್ಲೇ ಐಸೋಲೇಷನ್ ತೆರೆಯುವುದಾಗಿದೆ.
Advertisement
ಪ್ಲಾನ್ ಬಿ-ಮನೆಯಲ್ಲೇ ಐಸೋಲೇಷನ್:
ಹೋಂ ಕ್ವಾರಂಟೈನ್ ಆಯ್ತು ಈಗ ಹೋಂ ಐಸೋಲೇಷನ್ ಪ್ಲಾನ್ಗೆ ಸರ್ಕಾರ ಮುಂದಾಗಿದೆ. ಸೋಂಕಿನ ಲಕ್ಷಣ ಇಲ್ಲದಿದ್ದರೂ ಬೆಂಗಳೂರಿನಲ್ಲಿ ಕೊರೊನಾ ಹೆಚ್ಚಾಗುತ್ತಿದೆ. ಶೇ.70ರಷ್ಟು ಕೊರೊನಾ ಪಾಸಿಟಿವ್ ಬಂದವರಲ್ಲಿ ಕೋವಿಡ್-19 ಲಕ್ಷಣಗಳೇ ಇಲ್ಲ. ಈ ನಿಟ್ಟಿನಲ್ಲಿ ಸೋಂಕಿನ ಲಕ್ಷಣ ಇಲ್ಲದ ಸೋಂಕಿತರಿಗೆ ಮನೆಯಲ್ಲಿಯೇ ಐಸೊಲೇಷನ್ ಸರ್ಕಾರ ನಿರ್ಧರಿಸಿದೆ. ಅದರಲ್ಲೂ ವೃದ್ಧರು, ಮಕ್ಕಳು, ಗರ್ಭಿಣಿಯರು, ವಿವಿಧ ಖಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಸೇರಿದಂತೆ ಗಂಭೀರ ಪ್ರಕರಣಗಳಿಗೆ ಮಾತ್ರ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ.
Advertisement
ಮನೆಯಲ್ಲೇ ಚಿಕಿತ್ಸೆ ಹೇಗೆ?:
ಗಂಭೀರ ಲಕ್ಷಣ ಇಲ್ಲದಿದ್ದರೆ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತದೆ. ಇದಕ್ಕೆ ಪೂರಕವಾಗಿ ಮನೆಯಲ್ಲೇ ಇರುವ ಪ್ರತ್ಯೇಕ ಕೋಣೆಯಲ್ಲಿ ಐಸೋಲೇಷನ್ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಅಷ್ಟೇ ಅಲ್ಲದೆ ಸೋಂಕಿತರ ಕುಟುಂಬಸ್ಥರು ಹೊರಗೆ ಬರುವಂತ್ತಿಲ್ಲ. ಸೋಂಕಿತರಿರುವ ಇಡೀ ಮನೆಯನ್ನೇ ಕಂಟೈನ್ಮೆಂಟ್ ಮಾಡಲಾಗುತ್ತದೆ. ಮನೆ ಬಳಿ ಪೊಲೀಸ್, ಬಿಬಿಎಂಪಿ ಸಿಬ್ಬಂದಿಯ ನೇಮಕ ಸಾಧ್ಯತೆ ಇದೆ ಎನ್ನಲಾಗಿದೆ.
ಸೋಂಕಿತ, ಮತ್ತವರ ಕುಟುಂಬಸ್ಥರಿಗೆ ವೈದ್ಯರ ತಂಡದ ನಿಗಾ ಇಡಲಾಗುತ್ತದೆ. ಅವಶ್ಯಕತೆ ಬಿದ್ದರೆ ಮನೆಯಲ್ಲಿಯೇ ಚಿಕಿತ್ಸೆ ನೀಡುವ ಬಗ್ಗೆಯೂ ಪ್ಲಾನ್ ಮಾಡಲಾಗುತ್ತದೆ. ನಿತ್ಯ ವಿಟಮಿನ್ ಔಷಧಿ ನೀಡಿ ಆರೋಗ್ಯ ಸಿಬ್ಬಂದಿಯಿಂದ ಚಿಕಿತ್ಸೆ ಕೊಡಲಾಗುತ್ತದೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.
ರಾಜ್ಯ ಸರ್ಕಾರದ ಈ ಪ್ಲಾನ್ ದೆಹಲಿ ಮಾಡೆಲ್ ಆಗಿದೆ. ಈಗಾಗೇ ದೆಹಲಿಯ ಖಾಸಗಿ ಆಸ್ಪತ್ರೆಗಳಿಂದ ‘ಹೋ ಕೇರ್ ಪ್ಯಾಕೇಜ್’ ಅನ್ನು ಪರಿಚಯಿಸಲಾಗಿದೆ.
ಏನಿದು ದೆಹಲಿ ಮಾಡೆಲ್?
ಗಂಭೀರ ಗುಣಲಕ್ಷಣ ಇಲ್ಲದ ಕೊರೊನಾ ರೋಗಿಗಳಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತದೆ. ಈ ನಿಟ್ಟಿನಲ್ಲಿ ದೆಹಲಿ ಸರ್ಕಾರದಿಂದ ಹೋಂ ಕೇರ್ ಪ್ಯಾಕೇಜ್ ಪ್ರಕಟವಾಗಿದೆ. ಕೊರೊನಾ ಪೀಡಿತರಿಗೆ ಹೋಂಕೇರ್ ಕಿಟ್ ವಿತರಣೆ ಮಾಡಲಾಗುತ್ತದೆ. ಕಿಟ್ನಲ್ಲಿ ಡಿಜಿಟಲ್ ಥರ್ಮಾಮೀಟರ್, ಆಕ್ಸಿ ಮೀಟರ್ ಮತ್ತು ಡಿಜಿಟಲ್ ಬಿಪಿ ಯಂತ್ರ ಇರುತ್ತವೆ. ಆರಂಭದಲ್ಲಿ ವೈದ್ಯರಿಂದಲೇ ರೋಗಿಯ ತಪಾಸಣೆ ನಡೆಸಲಾಗುತ್ತದೆ. ಬಳಿಕ ಹೋಂ ಕೇರ್ ಕಿಟ್ ಮೂಲಕ ರೋಗಿಯಿಂದಲೇ ಸ್ವಯಂ ತಪಾಸಣೆ ನಡೆಸಲಾಗುತ್ತದೆ. ನಿತ್ಯವೂ ಎರಡು ಬಾರಿ ರೋಗಿಯ ಆರೋಗ್ಯ ಮಾಹಿತಿ ಸಂಗ್ರಹಿಸಲಾಗುತ್ತದೆ. ಒಂದು ವೇಳೆ ಸೋಂಕಿನ ತೀವ್ರತೆ ಕಂಡುಬಂದರೆ ರೋಗಿಯನ್ನು ಮನೆಯಿಂದ ಆಸ್ಪತ್ರೆಗೆ ರವಾನೆ ಮಾಡಲಾಗುತ್ತದೆ.
ಪ್ಲಾನ್-ಸಿ:
ಒಂದು ಕಡೆ ಮನೆಯಲ್ಲೇ ಚಿಕಿತ್ಸೆ ಮಾಡುವುದು ಸರ್ಕಾರದ ಪ್ಲಾನ್ ಬಿ ಆಗಿದ್ದರೆ, ಇನ್ನೊಂದು ಕಡೆ ಪ್ಲಾನ್ `ಸಿ’ ರೆಡಿ ಮಾಡಿದೆ. ದೆಹಲಿ, ಮಹಾರಾಷ್ಟ್ರ, ಕೇರಳ, ಮಧ್ಯಪ್ರದೇಶ, ಅಸ್ಸಾಂ ಮಾದರಿಯಲ್ಲಿ ಈ ಪ್ಲಾನ್ ‘ಸಿ’ ರೆಡಿಯಾಗಿದೆ.
ಸರ್ಕಾರದ ‘ಪ್ಲಾನ್-ಸಿ’ ಹೀಗಿದೆ!
ಬಯಲು ಪ್ರದೇಶ, ಸ್ಟೇಡಿಯಂಗಳು ತಾತ್ಕಾಲಿಕವಾಗಿ ಆಸ್ಪತ್ರೆಯಾಗಲಿವೆ. ದೊಡ್ಡ ಬಯಲು ಪ್ರದೇಶಗಳಲ್ಲಿ ಟೆಂಟ್, ಶಿಬಿರ ರೀತಿ ನಿರ್ಮಾಣ ಮಾಡಲಾಗುತ್ತದೆ. ಬೆಂಗಳೂರಿನ 3ರಿಂದ 4 ಸ್ಥಳಗಳು ಆಸ್ಪತ್ರೆಯಾಗಿ ಮಾರ್ಪಾಡು ಸಾಧ್ಯತೆ ಇದೆ. ಕಂಠೀರವ ಸ್ಟೇಡಿಯಂ, ಬಳ್ಳಾರಿ ರಸ್ತೆಯ ತ್ರಿಪುರವಾಸಿನಿ, ತುಮಕೂರು ರಸ್ತೆಯ ಇಂಟರ್ ನ್ಯಾಷನಲ್ ಎಕ್ಸಿಬಿಷೇನ್ ಸೆಂಟರ್ ಹಾಗೂ ವೈಟ್ಫೀಲ್ಡ್ ರಸ್ತೆಯಲ್ಲಿ ತಾತ್ಕಾಲಿಕ ಆಸ್ಪತ್ರೆಗೆ ಸರ್ಕಾರ ಚಿಂತನೆ ನಡೆಸಿದೆ.