ಹೆದ್ದಾರಿಯಲ್ಲಿ ಅಪಘಾತ-8 ಮಂದಿ ದುರ್ಮರಣ

Public TV
1 Min Read
agra accident

– ಸ್ಕಾರ್ಪಿಯೋ, ಟ್ರಕ್ ಮಧ್ಯೆ ಡಿಕ್ಕಿ

ಲಕ್ನೋ: ಸ್ಕಾರ್ಪಿಯೋ ಮತ್ತು ಟ್ರಕ್ ಡಿಕ್ಕಿಯಾದ ಪರಿಣಾಮ 8 ಜನ ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರಪ್ರದೇಶದ ಆಗ್ರಾ ಬಳಿ ನಡೆದಿದೆ.

agra accident1

ಸ್ಕಾರ್ಪಿಯೋದಲ್ಲಿ 12 ಜನರು ಪ್ರಯಾಣಿಸುತ್ತಿದ್ದರು. ಈ ವೇಳೆ ಎರಡು ವಾಹನಗಳ ಮಧ್ಯೆ ಡಿಕ್ಕಿಯಾದ ಪರಿಣಾಮ 8 ಜನ ಮೃತಪಟ್ಟಿದ್ದಾರೆ. ಬೆಳ್ಳಂಬೆಳಗ್ಗೆ ಆಗ್ರಾ-ಕಾನ್ಪುರ ಹೆದ್ದಾರಿಯಲ್ಲಿ ಈ ಭೀಕರವಾದ ಅಪಘಾತ ನಡೆದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಅಪಘಾತಕ್ಕೀಡಾದ ಸ್ಕಾರ್ಪಿಯೋ ವಾಹನ ಜಾರ್ಖಂಡ್ ನೋಂದಾಯಿಸಲಾಗಿದ್ದ ವಾಹನವಾಗಿದೆ. ಸಾವು ನೋವುಗಳ ಸಂಖ್ಯೆಯಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ. ಎಟ್ಮದ್ದುಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಘಾತ ಸಂಭವಿಸಿದೆ.

Share This Article