ದಾವಣಗೆರೆ: ಸರ್ಕಾರಿ ಆಸ್ಪತ್ರೆಯ ಶವಗಾರದ ಸಿಬ್ಬಂದಿ, ಸತ್ತ ಹೆಣದ ಮೇಲೆಯೂ ಹಣ ಮಾಡುತ್ತಿರುವ ಪ್ರಕರಣವೊಂದು ದಾವಣಗೆರೆಯ ಚಿಗಟೇರಿ ಆಸ್ಪತ್ರೆಯಲ್ಲಿ ಬೆಳಕಿಗೆ ಬಂದಿದೆ.
Advertisement
ಒಂದು ಮೃತ ದೇಹಕ್ಕೆ ನಾಲ್ಕರಿಂದ ಐದು ಸಾವಿರ ಫಿಕ್ಸ್ ಮಾಡುತ್ತಾರೆ. ಹಣ ಕೊಡದಿದ್ದರೆ ಮೃತ ದೇಹ ಕೊಡುವುದೇ ಇಲ್ಲ ಎಂದು ಮೃತರ ಸಂಬಂಧಿಕರು ಆರೋಪ ಮಾಡುತ್ತಿದ್ದಾರೆ. ಇನ್ನು ಕೋವಿಡ್ ಟೆಸ್ಟ್ ಮಾಡಿಸಿದ್ರೆ ಮುಗಿತು ಕಥೆ. ವರದಿ ಬರೋವರೆಗೂ ಕೊಡೋದಿಲ್ಲ, ಮೃತದೇಹ ಬೇಕು ಎಂದರೆ ಲಕ್ಷಗಟ್ಟಲೇ ಹಣ ಕೊಡಬೇಕು ಎಂದು ದೂರಿದ್ದಾರೆ.
Advertisement
Advertisement
ಒಟ್ಟಿನಲ್ಲಿ ಹೆಣ ಎತ್ತಿ ಕೊಡ್ಬೇಕು ಅಂದರೆ ದುಡ್ಡು ಬಿಚ್ಚಬೇಕು. ಸಾಮಾನ್ಯ ರೋಗದಿಂದ ಸತ್ತವರಿಗೆ ಒಂದು ರೇಟ್ ಫಿಕ್ಸ್ ಮಾಡಿದ್ದಾರೆ. ಒಂದು ವೇಳೆ ಹಣ ಕೊಡದಿದ್ರೆ ಹೆಣ ಕೊಡದೇ ಶವಾಗಾರದ ಸಿಬ್ಬಂದಿ ಟಾರ್ಚರ್ ನೀಡುತ್ತಾರೆ ಮೃತರ ಸಂಬಂಧಿಕರು ಗಂಭೀರ ಆರೋಪ ಮಾಡಿದ್ದಾರೆ.
Advertisement