ಹೈದರಾಬಾದ್: ಟಿಆರ್ ಎಸ್ ಪಕ್ಷದ ಶಾಸಕ ಎಸ್.ರಾಮಲಿಂಗಾ ರೆಡ್ಡಿ ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ರಾಮಲಿಂಗಾ ರೆಡ್ಡಿಯವರು ದುಬ್ಬಾಕಾ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು.
59 ವರ್ಷದ ರಾಮಲಿಂಗಾ ರೆಡ್ಡಿ ಇತ್ತೀಚೆಗೆ ಕೊಂಪಲ್ಲಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಮೊಳಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆನಾರೋಗ್ಯ ಹಿನ್ನೆಲೆಯಲ್ಲಿ ಶಾಸಕರನ್ನು ರಾತ್ರಿ ಸುಮಾರು 2.30ಕ್ಕೆ ಗಾಚಿಬೌಲಿಯಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೆಲಂಗಾಣ ರಾಷ್ಟ್ರೀಯ ಪಕ್ಷದ ಹಿರಿಯ ನಾಯಕರಲ್ಲಿ ರಾಮಲಿಂಗಾ ರೆಡ್ಡಿ ಸಹ ಒಬ್ಬರಾಗಿದ್ದರು. ಶಾಸಕರ ಅಂತಿಮ ವಿಧಿವಿಧಾನಗಳು ದುಬ್ಬಾಕಾ ಕ್ಷೇತ್ರದ ಸ್ವಗ್ರಾಮ ಚಿತ್ತಾಪುರದಲ್ಲಿ ನಡೆಯಲಿವೆ.
Advertisement
#Hyderabad: Telangana Rashtra Samiti MLA from Dubbaka, S.Ramalinga Reddy passed away today due to heart attack. pic.twitter.com/XHfBkddL1R
— ANI (@ANI) August 6, 2020
Advertisement
ಶಾಸಕರ ನಿಧನಕ್ಕೆ ಸಂತಾಪ ಸೂಚಿಸಿರುವ ಸಿಎಂ ಕೆ.ಚಂದ್ರಶೇಖರ್ ರಾವ್, ವಿಷಯ ಕೇಳಿ ಮನಸ್ಸು ಭಾರವಾಯ್ತು. ತೆಲಂಗಾಣ ಪರ ಆಂದೋಲನದಲ್ಲಿ ರಾಮಲಿಂಗಾ ರೆಡ್ಡಿ ಪ್ರಮುಖ ನಾಯಕರಾಗಿದ್ದರು. ದೇವರು ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
Advertisement