– ಕೆಲವೇ ಗಂಟೆಗಳಲ್ಲಿ ಆರೋಪಿಗಳ ಸ್ಥಳ ಪತ್ತೆಹಚ್ಚಿದ ರಾಣ
ಮಡಿಕೇರಿ: ಉಗುರು ಹಾಗೂ ಚರ್ಮಕ್ಕೆ ಹುಲಿಯನು ಭೇಟೆಯಾಡಿದ್ದ ಆರೋಪಿಗಳನ್ನು ಪೊಲೀಸರು ಪತ್ತೆ ಹಚ್ಚಿದ್ದು, ಶ್ವಾನ ದಳದ ರಾಣನ ಸಹಾಯದಿಂದಾಗಿ ಆರೋಪಿಯನ್ನು ಪತ್ತೆಯ ಹಚ್ಚಲು ಸಾಧ್ಯವಾಗಿದೆ.
Advertisement
ನಾಗರಹೊಳೆ ಅಭಯಾರಣ್ಯ ವ್ಯಾಪ್ತಿಯ ಕಲ್ಲಹಳ್ಳದಲ್ಲಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣದ ಪ್ರಮುಖ ಆರೋಪಿ ಸಂತೋಷ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಹುಲಿಯನ್ನು ಕೊಂದು ಉಗುರಿಗಾಗಿ ಅದರ ಕಾಲುಗಳನ್ನು ಕ್ರೂರಿಗಳು ತುಂಡರಿಸಿದ್ದರು. ಪ್ರಕರಣ ಬೇಧಿಸಲು ಬಂಡೀಪುರ ಶ್ವಾನದಳದ ರಾಣ (ಶ್ವಾನ)ನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಕರೆ ತಂದಿದ್ದರು. ಸ್ಥಳಕ್ಕೆ ದಾವಿಸಿದ ರಾಣ, ಕೆಲವೇ ಹೊತ್ತಿನಲ್ಲಿ ದುಷ್ಕರ್ಮಿಗಳ ಸುಳಿವನ್ನು ಪತ್ತೆ ಹೆಚ್ಚಿದೆ. ಹಂತಕರ ಜಾಡು ಹಿಡಿದ ರಾಣ ಮಲಯಾಳಿ ಸಂತೋಷ್ ಮನೆಗೆ ನುಗ್ಗಿದೆ ಅಲ್ಲಿ ಒಂದೂವರೆ ಕೆ.ಜಿ.ಯಷ್ಟು ಜಿಂಕೆ ಮಾಂಸವೂ ಪತ್ತೆಯಾಗಿದೆ ಎನ್ನಲಾಗಿದೆ.
Advertisement
Advertisement
ಗ್ರಾಮದ ರಂಜು, ಶಶಿ, ಶರಣು ಮನೆ ಬಳಿಯೂ ರಾಣ ಸುಳಿದಾಡಿದೆ. ಈ ವೇಳೆ ಅವರ ಮನೆಯನ್ನು ಪರಿಶೀಲಿಸಿದಾಗ ದುಷ್ಕರ್ಮಿಗಳು ಬಚ್ಚಿಟ್ಟಿದ್ದ ಹುಲಿಯ ಪಂಜ, ಕಾಡತೂಸುಗಳು ಪತ್ತೆಯಾಗಿವೆ. ಪೊಲೀಸರ ಕಾರ್ಯಚರಣೆ ವೇಳೆ ಸ್ಥಳದಿಂದ ಆರೋಪಿಗಳು ಕಾಲ್ಕಿತ್ತಿದ್ದಾರೆ. ಆರೋಪಿಗಳ ಸೆರೆಗೆ ಪೊಲೀಸ್ ಹಾಗೂ ಅರಣ್ಯ ಇಲಾಖೆಯಿಂದ ಜಂಟಿ ಕಾರ್ಯಾಚರಣೆ ನಡೆಸುತ್ತಿದೆ. ಘಟನಾ ಸ್ಥಳಕ್ಕೆ ವನ್ಯಜೀವಿ ಮತ್ತು ಅರಣ್ಯ ವಿಭಾಗದ ಹಲವು ಉನ್ನತಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾಣನ ಜಾಣ್ಮೆಯನ್ನು ಬಾಳೆಲೆ ಗ್ರಾಮಸ್ಥರು ಶ್ಲಾಘಿಸಿದ್ದಾರೆ. ಬಾಳೆಲೆ ಗ್ರಾಮಕ್ಕೆ ಕಪ್ಚುಚುಕ್ಕೆಯಾಗಿರುವ ಮೂವರು ಆರೋಪಿಗಳನ್ನು ಬಂಧಿಸಿ ಶಿಕ್ಷಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.