-ಕಾಂಗ್ರೆಸ್ನಲ್ಲಿ ಬಂಡೆ ದೊಡ್ಡದಾ, ಹುಲಿ ದೊಡ್ಡದಾ ಎನ್ನೋ ಗುದ್ದಾಟ
ಮಡಿಕೇರಿ: ಹುಲಿ ಕಾಡು ಪ್ರಾಣಿ. ಅದು ಕಾಡಿಗೆ ಹೋಗಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೆಸರು ಪ್ರಸ್ತಾಪಿಸದೆ ತಿರುಗೇಟು ನೀಡಿದ್ದಾರೆ.
ಹುಲಿ ಕಾಡು ಪ್ರಾಣಿ. ಅದು ಕಾಡಿಗೆ ಹೋಗಬೇಕು. ಆ ಮೂಲಕ ರಾಜ್ಯವನ್ನು ಕಾಡು ಪ್ರಾಣಿಗಳಿಂದ ರಕ್ಷಿಸಬೇಕಾಗಿದೆ ಎಂದು ತಿರುಗೇಟು ನೀಡಿದರು. ನಾವು ಯಾರಿಗೂ ಹುಲಿ ಅನ್ನೋ ಬಿರುದು ಕೊಟ್ಟಿಲ್ಲ. ಆದರೆ ಕೆಲವರು ಅವರೇ ಸ್ವಯಂ ಘೋಷಿತ ಹುಲಿಗಳಾಗಿದ್ದಾರೆ ಎಂದರು.
Advertisement
Advertisement
ಬೆಂಗಳೂರಿನ ಡಿ.ಜೆ ಹಳ್ಳಿ ಮತ್ತು ಕೆ.ಜಿ ಹಳ್ಳಿಯಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಿದ್ದರಾಮಯ್ಯ ಮತ್ತು ಡಿಕೆಶಿಯೇ ನೇರ ಹೊಣೆ ಎಂದು ಗಂಭೀರ ಆರೋಪ ಮಾಡಿದರು. ಬಂಡೆ ದೊಡ್ಡದ ಅಥವಾ ಹುಲಿ ದೊಡ್ಡದಾ ಎನ್ನೋ ಗುದ್ದಾಟ ಕಾಂಗ್ರೆಸ್ ನಲ್ಲಿ ಶುರುವಾಗಿದೆ. ಈ ಗುದ್ದಾಟದ ಭಾಗವಾಗಿ ಅವರದ್ದೇ ಶಾಸಕರ ಮನೆಗೆ ಬೆಂಕಿ ಹಾಕಲಾಗಿದೆ.
Advertisement
Advertisement
ಮಾಜಿ ಮೇಯರ್ ಸಂಪತ್ ರಾಜ್ ಡಿಕೆಶಿ ಹಿಂದೆ ಬಂದವರು. ಅಖಂಡ ಶ್ರೀನಿವಾಸಮೂರ್ತಿ ಅವರು ಸಿದ್ದರಾಮಯ್ಯ ಅವರ ಹಿಂದೆ ಬಂದವರು. ಇವರ ಜಗಳದಲ್ಲಿ ಅಖಂಡ ಶ್ರೀನಿವಾಸ್ ಮೂರ್ತಿ ಮನೆಗೆ ಬೆಂಕಿ ಬಿದ್ದಿತ್ತು. ಹೀಗಾಗಿ ಅಖಂಡ ಶ್ರೀನಿವಾಸ್ ಮೂರ್ತಿ ಸಂಪತ್ ರಾಜ್ ಅವರ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದರು. ಪೊಲೀಸ್ ತನಿಖೆ ಡಿಕೆಶಿ ಮತ್ತು ಸಿದ್ದರಾಮಯ್ಯನವರ ಜಗಳವೇ ಡಿಜೆ ಹಳ್ಳಿ ಮತ್ತು ಕೆಜೆ ಹಳ್ಳಿ ಗಲಾಟೆಗೆ ಕಾರಣ ಎನ್ನೋದನ್ನು ಬಯಲುಗೊಳಿಸಿದೆ ಎಂದರು. ಇದನ್ನೂ ಓದಿ: ಸಿದ್ದರಾಮಯ್ಯಗೆ ಧಮ್ ಇದ್ರೆ ಚಿದಂಬರಂ ಮುಂದೆ ನಿಂತು ಮಾತಾಡಲಿ – ಕಟೀಲ್ ಟಾಂಗ್