ಹುಬ್ಬಳ್ಳಿ: ಜನವರಿ 21 ರಿಂದ ಹುಬ್ಬಳ್ಳಿಯಿಂದ ಗೋವಾ ಮತ್ತು ಕೊಚ್ಚಿಗೆ ನೇರ ವಿಮಾನಯಾನ ಆರಂಭಗೊಳ್ಳಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
ಇಂಡಿಗೋ ಸಂಸ್ಥೆ ವಿಮಾನಯಾನದ ಮೂಲಕ ಹುಬ್ಬಳ್ಳಿಯಿಂದ ಮತ್ತೆರಡು ನಗರಗಳ ಜೊತೆ ನೇರ ಸಂಪರ್ಕ ಬೆಳೆಸಲಿದೆ. ಹುಬ್ಬಳ್ಳಿ-ಗೋವಾ ಮತ್ತು ಹುಬ್ಬಳ್ಳಿ-ಕೊಚ್ಚಿ ನಗರಗಳಿಗೆ ನೇರ ವಿಮಾನ ಸೇವೆಯನ್ನು ಜ. 21 ರಿಂದ ಪುನರಾರಂಭಿಸಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
Advertisement
ಇಂಡಿಗೋ ಸಂಸ್ಥೆಯ ಹಿರಿಯ ಉನ್ನತ ಅಧಿಕಾರಿಗಳು ಇದೇ ಜನವರಿ 21ರಿಂದ ಸೇವೆಯನ್ನು ಪ್ರಾರಂಭಿಸುವುದಾಗಿ ತಿಳಿಸುತ್ತಿದ್ದಂತೆ ಈ ಕಾರ್ಯಕ್ಕೆ ಸಹಕರಿಸಿದ ಇಂಡಿಗೋ ಸಂಸ್ಥೆಗೆ ಧನ್ಯವಾದ ಸಲ್ಲಿಸುತ್ತೇನೆ. ಈ ಸೇವೆಯನ್ನು ಸದುಪಯೋಗ ಪಡೆದುಕೊಳ್ಳುವಂತೆ ಸಾರ್ವಜನಿಕರಲ್ಲಿ ಮನವಿಯನ್ನು ಪ್ರಹ್ಲಾದ್ ಜೋಶಿ ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ.
Advertisement
ವಿಮಾನಯಾನದ ವಿವರ ಈ ಕೆಳಗಿನಂತಿದೆ.
ಸಮಯ :
1.00 ಕ್ಕೆ ಹುಬ್ಬಳ್ಳಿಯಿಂದ ಹೊರಟು 3.10 ಕ್ಕೆ ಕೊಚಿ ತಲುಪುವುದು
3.45 ಕ್ಕೆ ಕೊಚಿಯಿಂದ ಹೊರಟು 5.30 ಕ್ಕೆ ಹುಬ್ಬಳ್ಳಿಗೆ
ತಲುಪುವುದು
6.00 ಕ್ಕೆ ಹುಬ್ಬಳ್ಳಿಯಿಂದ ಹೊರಟು 7.00 ಕ್ಕೆ ಗೋವಾ ತಲುಪುವುದು
7.30 ಕ್ಕೆ ಗೋವಾಯಿಂದ ಹೊರಟು 8.30ಕ್ಕೆ ಹುಬ್ಬಳ್ಳಿ ತಲುಪುವುದು
— Pralhad Joshi (@JoshiPralhad) January 9, 2021
Advertisement
ವಿಮಾನಯಾನದ ವಿವರ ಈ ಕೆಳಗಿನಂತಿದೆ.
Advertisement
ಸಮಯ :
* ಮಧ್ಯಾಹ್ನ 1.00ಕ್ಕೆ ಹುಬ್ಬಳ್ಳಿಯಿಂದ ಹೊರಟು ಮಧ್ಯಾಹ್ನ 3.10 ಕ್ಕೆ ಕೊಚ್ಚಿ ತಲುಪುಲಿದೆ
* ಮಧ್ಯಾಹ್ನ 3.45ಕ್ಕೆ ಕೊಚ್ಚಿಯಿಂದ ಹೊರಟು ಸಂಜೆ 5.30 ಕ್ಕೆ ಹುಬ್ಬಳ್ಳಿಗೆತಲುಪಲಿದೆ.
* ಸಂಜೆ 6.00ಕ್ಕೆ ಹುಬ್ಬಳ್ಳಿಯಿಂದ ಹೊರಟು ಸಂಜೆ 7.00 ಕ್ಕೆ ಗೋವಾ ತಲುಪಲಿದೆ.
* ಸಂಜೆ 7.30ಕ್ಕೆ ಗೋವಾಯಿಂದ ಹೊರಟು ರಾತ್ರಿ 8.30ಕ್ಕೆ ಹುಬ್ಬಳ್ಳಿ ತಲುಪಲಿದೆ.