ಶ್ರೀನಗರ: ಕೋಮು ಸೌಹಾರ್ದತೆಗೆ ಸಾಕ್ಷಿ ಎಂಬಂತೆ ಮುಸ್ಲಿಂ ಸಮುದಾಯದ ಮಂದಿ, ಹಿಂದೂ ಪಂಡಿತ ಸಮುದಾಯ ಮಹಿಳೆಯ ಅಂತ್ಯಕ್ರಿಯಲ್ಲಿ ಭಾಗವಹಿಸಿರುವ ಘಟನೆ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ನಡೆದಿದೆ.
ಮೋತಿಲಾಲ್ ಕೌಲ್ ಎಂಬವರ ಪತ್ನಿ ರಾಣಿಕೌಲ್(65) ಶನಿವಾರ ಮೃತಪಟ್ಟಿದ್ದಾರೆ. ಮಹಿಳೆಯ ಅಂತ್ಯಕ್ರಿಯೆಗೆ ಆಕೆಯ ಸಂಬಂಧಿಕರು ದೆಹಲಿಯಿಂದ ಬರಬೇಕಾದ್ದರಿಂದ ಒಂದು ದಿನ ತಡವಾಗಿ ಮಹಿಳೆಯ ಅಂತ್ಯಕ್ರಿಯೆಯನ್ನು ನಡೆಸಬೇಕಾಯಿತು.
Advertisement
ಸುಮಾರು 600 ಮುಸ್ಲಿಂ ಸಮುದಾಯದವರ ಮನೆಯ ಮಧ್ಯೆ ಮೋತಿಲಾಲ್ ಕೌಲ್ ಮನೆ ಇದ್ದು, ಭಾನುವಾರ ಅಲ್ಲಿನ ಸ್ಥಳೀಯ ಮುಸ್ಲಿಮರು ಮಹಿಳೆಯ ಅಂತ್ಯಕ್ರಿಯೆಗೆ ಸಹಾಯವನ್ನು ಮಾಡಿದ್ದಾರೆ. ಮಹಿಳೆಯ ದೇಹವನ್ನು ದಹಿಸಲು ಮರವನ್ನು ಸಂಗ್ರಹಿಸಿ, ಶವವನ್ನು ಸ್ಮಶಾನದವರೆಗೆ ಹೆಗಲ ಮೇಲೆ ಹೊತ್ತುಕೊಂಡು ಹೋಗಿದ್ದಾರೆ. ಅಲ್ಲದೆ ಪಂಡಿತರ ಪದ್ದತಿಗೆ ಅನುಗುಣವಾಗಿ ಕೊನೆಯ ಅಂತಿಮ ವಿಧಿ ವಿಧಾನವನ್ನು ಮಾಡಿದ್ದಾರೆ.
Advertisement
ಕಾಶ್ಮೀರದ ಬಾರಾಮುಲ್ಲಾದಲ್ಲಿ ಪಂಡಿತ್ ಸಮುದಾಯದ ಮಹಿಳೆಯ ಅಂತಿಮ ವಿಧಿವಿಧಾನ ಮಾಡಿದ ಮುಸ್ಲಿಮರ ವೀಡಿಯೋ ವೈರಲ್ ಆಗುತ್ತಿದೆ.