ಹಾಸನ: ಜಿಲ್ಲೆಯಲ್ಲಿ ಇಂದು ತಂದೆ-ಮಗ ಸೇರಿದಂತೆ ಮತ್ತೆ ಮೂವರಲ್ಲಿ ಕೊರೊನಾ ಪಾಸಿಟಿವ್ ಕಂಡು ಬಂದಿದ್ದು, ಎಲ್ಲರೂ ಮುಂಬೈನಿಂದ ವಾಪಸ್ ಬಂದವರಾಗಿದ್ದಾರೆ.
ಈ ಹಿಂದೆ ಹಾಸನದಲ್ಲಿ ಒಂಬತ್ತು ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದವು. ಅವರೆಲ್ಲರೂ ಚನ್ನರಾಯಪಟ್ಟಣ ತಾಲೂಕಿನವರಾಗಿದ್ದು, ಮುಂಬೈಯಿಂದ ವಾಪಸ್ಸಾದವರಾಗಿದ್ದರು. ಇಂದು ಮತ್ತೆ ಮೂರು ಜನರಿಗೆ ಕೊರೊನಾ ಪಾಸಿಟಿವ್ ಬಂದಿದ್ದು ಹಾಸನದಲ್ಲಿ ಕೊರೊನಾ ಪಾಸಿಟಿವ್ ಸಂಖ್ಯೆ 12ಕ್ಕೆ ಏರಿದೆ.
Advertisement
Advertisement
ಮೂವರಲ್ಲಿ ಇಬ್ಬರು ಚನ್ನರಾಯಪಟ್ಟಣ ಮೂಲದ ತಂದೆ ಮತ್ತು ಮಗನಾಗಿದ್ದು, ಮುಂಬೈನಿಂದ ಸ್ವಂತ ಕಾರಿನಲ್ಲಿ ಆಗಮಿಸಿದ್ದಾರೆ. ಹೀಗಾಗಿ ಅವರ ಜೊತೆ ಸಂಪರ್ಕದಲ್ಲಿದ್ದವರ ಮೇಲೆ ನಿಗಾವಹಿಸಲಾಗಿದೆ. ಮತ್ತೊಬ್ಬರು ಮಹಿಳೆ ಅರಕಲಗೂಡು ಮೂಲದವರಾಗಿದ್ದು ಅವರ ಜೊತೆ ಸಂಪರ್ಕದಲ್ಲಿದ್ದವರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಮುಂಬೈನಿಂದ ಬಂದವರೆಲ್ಲರನ್ನೂ ನೇರವಾಗಿ ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ.
Advertisement
Advertisement
ಅರಕಲಗೂಡಿನ ಮಹಿಳೆ ಮೇ12 ರಂದು ಮುಂಬೈನಿಂದ ಬಸ್ಸಿನಲ್ಲಿ ಬಂದಿದ್ದರು. ಒಟ್ಟು 20 ಜನ ಮಹಿಳೆಯೊಂದಿಗೆ ಬಸ್ಸಿನಲ್ಲಿ ಪ್ರಯಾಣ ಮಾಡಿದ್ದರು. ಅದರಲ್ಲಿ 17 ಜನ ಚನ್ನರಾಯಪಟ್ಟಣ ಮೂಲದವರಾಗಿದ್ದಾರೆ. ಇನ್ನುಳಿದ ಮೂವರು ಅರಕಲಗೂಡಿನವರಾಗಿದ್ದಾರೆ. ಎಲ್ಲರನ್ನೂ ಮುಂಬೈನಿಂದ ಬಂದ ತಕ್ಷಣ ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿತ್ತು. ಮಹಿಳೆಯ ಟ್ರಾವೆಲ್ ಹಿಸ್ಟರಿಯಿಂದ ಕೊರೊನಾ ಸೋಂಕು ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎನ್ನಲಾಗಿದೆ.