– ಇಂದು 14 ಜನರಿಗೆ ಸೋಂಕು, 99ಕ್ಕೇರಿಕೆಯಾದ ಸೋಂಕಿತರ ಸಂಖ್ಯೆ
ಹಾಸನ: ಇಂದು ಜಿಲ್ಲೆಯಲ್ಲಿ ಪೊಲೀಸ್ ಪೇದೆ ಸೇರಿದಂತೆ ಒಟ್ಟು 14 ಜನರಿಗೆ ಕೊರೊನಾ ಪಾಸಿಟಿವ್ ಬಂದಿದ್ದು ಸೋಂಕಿತರ ಸಂಖ್ಯೆ 99ಕ್ಕೆ ಏರಿಕೆ ಕಂಡಿದೆ.
ಪೊಲೀಸ್ ಪೇದೆ ಮತ್ತು ಅರಳಿಕಟ್ಟೆ ಪಕ್ಕದ ರಸ್ತೆಯ ನಿವಾಸಿ ಸೇರಿದಂತೆ ಹಾಸನದಲ್ಲಿಂದು ಮತ್ತೆ 14 ಕೊರೊನಾ ಪಾಸಿಟಿವ್ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಹಾಸನ ನಗರದ ಸತ್ಯವಂಗಲ ಹಾಗೂ ಉತ್ತರ ಬಡಾವಣೆಯ ಒಂದು ರಸ್ತೆ ಸೀಲ್ಡೌನ್ ಮಾಡಲಾಗಿದೆ.
Advertisement
Advertisement
ಕೊರೊನಾ ದೃಢಪಟ್ಟಿರುವ ಪೇದೆ ಹಾಸನ ನಗರದ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಇತ್ತೀಚೆಗೆ ಬೆಂಗಳೂರಿಗೆ ಹೋಗಿ ಬಂದಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಜೊತೆಗೆ ಇತ್ತ ಜಿಲ್ಲೆಯ ಪೊಲೀಸ್ ಟ್ರೈನಿಂಗ್ ಶಾಲೆಗೆ ಭೇಟಿ ನೀಡಿದ್ದು, ಆತಂಕ ಹೆಚ್ಚಾಗುವಂತೆ ಮಾಡಿದೆ. ಈಗ ಸೋಂಕಿತ ವಾಸವಿದ್ದ ಏರಿಯಾಗೆ ಜಿಲ್ಲೆಯ ಆರೋಗ್ಯಾಧಿಕಾರಿಗಳು ಭೇಟಿ ನೀಡಿದ್ದು, ಮುನ್ನೆಚ್ಚೆರಿಕೆ ಕ್ರಮಗಳನ್ನು ತಗೆದುಕೊಳ್ಳುತ್ತಿದ್ದಾರೆ.
Advertisement
Advertisement
ಈ ವಿಚಾರವಾಗಿ ಮಾಹಿತಿ ನೀಡಿರುವ ಹಾನಸದ ಜಿಲ್ಲಾಧಿಕಾರಿ ಗಿರೀಶ್ ಅವರು, ಎರಡು ಏರಿಯಾಗಳನ್ನು ಕಂಟೈನ್ಮೆಂಟ್ ಝೋನ್ಗಳೆಂದು ಘೋಷಣೆ ಮಾಡಲಾಗಿದ್ದು, ಇಂದಿನಿಂದ 28 ದಿನಗಳ ಕಾಲ ಈ ರಸ್ತೆಗಳು ಸೀಲ್ಡೌನ್ ಮಾಡಲಾಗಿದೆ. ಅಗತ್ಯ ವಸ್ತುಗಳನ್ನ ಜಿಲ್ಲಾಡಳಿತವೇ ಪೂರೈಕೆ ಮಾಡಲಿದ್ದು, ಜನರು ಎಚ್ಚರದಿಂದ ಇರಬೇಕು ಎಂದು ಸೂಚನೆ ನೀಡಿದ್ದಾರೆ.